ಬೆಂಗಳೂರು: ಎಣ್ಣೆಗಾಗಿ ಗೆಳೆಯನ ಹತ್ಯೆಗೆ ಯತ್ನಿಸಿದ್ದ ರೌಡಿ ಮೇಲೆ ಬೆಂಗಳೂರು ಪೊಲೀಸರಿಂದ ಫೈರಿಂಗ್ ನಡೆಸಿದ್ದಾರೆ.
ಮುನಿಕೃಷ್ಣ ಗುಂಡೇಟು ತಿಂದ ಆರೋಪಿ. ಅಮೃತಹಳ್ಳಿ ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ಅವರು ಫೈರಿಂಗ್ ನಡೆಸಿ ಮುನಿಕೃಷ್ಣನನ್ನು ಬಂಧಿಸಿದ್ದಾರೆ.
ಕೊರೊನಾ ಲಾಕ್‍ಡೌನ್ ತೆರುವು ನಂತರ ಎಣ್ಣೆ ಅಂಗಡಿಗಳು ಓಪನ್ ಆಗಿದ್ದವು. ಈ ವೇಳೆ ಮದ್ಯದ ಕೊಡಲಿಲ್ಲ ಅಂತ ಮುನಿಕೃಷ್ಣ ಗೆಳೆಯನ ಜೊತೆ ಗಲಾಟೆ ಮಾಡಿಕೊಂಡಿದ್ದ. ಬಳಿಕ ಜಾಕು ಇರಿದು ಪರಾರಿಯಾಗಿದ್ದ. ಈ ಸಂಬಂಧ ಅಮೃತಹಳ್ಳಿ ಠಾಣೆಯಲ್ಲಿ ಕೊಲೆಗೆ ಯತ್ನ ಅಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣ ಅಷ್ಟೇ ಅಲ್ಲದೆ ಆರೋಪಿ ಮುನಿಕೃಷ್ಣನ ವಿರುದ್ಧ ಹಲವು ಕೇಸ್‍ಗಳು ಅಮೃತಹಳ್ಳಿ ಠಾಣೆಯಲ್ಲಿ ದಾಖಲಾಗಿದ್ದವು. ಆರೋಪಿಗಾಗಿ ಪೊಲೀಸರು ಶೋಧಕಾರ್ಯ ನಡೆಸಿದ್ದರು. ಇನ್ಸ್‌ಪೆಕ್ಟರ್ ಅರುಣ್ ಕುಮಾರ್ ನೇತೃತ್ವದ ತಂಡವು ಬಲೆ ಬೀಸಿತ್ತು. ಆದರೆ ಮುನಿಕೃಷ್ಣ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ. ಪರಿಣಾಮ ಪೇದೆ ನಂದೀಶ್ ಎಂಬವರಿಗೆ ಗಾಯವಾಗಿತ್ತು. ಇದರಿಂದಾಗಿ ಆತ್ಮರಕ್ಷಣೆಗೆಂದು ಅರುಣ್ ಕುಮಾರ್ ಅವರು ಆರೋಪಿ ಮೇಲೆ ಫೈರಿಂಗ್ ನಡೆಸಿ ಬಂಧಿಸಿದ್ದಾರೆ.
ಗಾಯಾಳುಗಳಾದ ಆರೋಪಿ ಮುನಿಕೃಷ್ಣ ಹಾಗೂ ಪೇದೆ ನಂದೀಶ್ ಅವರನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
https://youtu.be/OYEMtBeW6b0