ರಾತ್ರಿ ಮುಂಬೈನಲ್ಲಿ ನಡೆದ ʼಬಿಗ್ ಇಂಪ್ಯಾಕ್ಟ್ಸ್ ಅವಾರ್ಡ್ಸ್ʼನಲ್ಲಿ ಮಲೈಕಾ ಅರೋರಾ, ರೋಹಿಣಿ ಅಯ್ಯರ್, ಹಿನಾ ಖಾನ್ ಮತ್ತು ಸೇರಿದಂತೆ ಹಲವಾರು ಬಿ-ಟೌನ್ ಸೆಲೆಬ್ರಿಟಿಗಳು ಕಾಣಿಸಿಕೊಂಡಿದ್ದರು.
ತಾರೆಗಳು ಈವೆಂಟ್‌ನಲ್ಲಿ ಭಾಗವಹಿಸಿದ್ದ ನಟಿಯರ ಗ್ಲಾಮರ್ ಲುಕ್ ಹೆಚ್ಚಾಗಿ ಟಾಕ್ ಆಗುತ್ತಿದೆ. ತುಂಡು ತುಂಡು ಬಟ್ಟೆ ತೊಟ್ಟಿದ್ದ ನಟಿಯರ ಸೊಬಗಿಗೆ ಜನ ಫಿದಾ ಆಗಿದ್ದರು. ಇನ್ನು ಶಿಲ್ಪಾ ಶೆಟ್ಟಿ ಕೂಡಾ ತಮ್ಮದೇ ಸ್ಟೈಲ್‌ನಲ್ಲಿ ಮಿಂಚಿದರು.
ಬಿಳಿ ಜಂಪ್‌ಸೂಟ್‌ನಲ್ಲಿ ಜಾಕೆಟ್ ಮತ್ತು ಶೀರ್ ಪ್ಯಾನೆಲಿಂಗ್‌ನೊಂದಿಗೆಶಿಲ್ಪಾ ಶೆಟ್ಟಿಕಾರ್ಯಕ್ರಮಕ್ಕೆ ಬಂದಿದ್ದರು. ಬಿಳಿ ಬ್ಲೇಜರ್ ತೊಟ್ಟಿದ್ದ ಶಿಲ್ಪಾ ಸೌಂದರ್ಯ ಎದ್ದುಕಾಣುವಂತಿತ್ತು. 47 ವರ್ಷದ ನಟಿಯ ಸೌಂದರ್ಯ ನೋಡಿದ ನೆಟ್ಟಿಗರು ಶಾಕ್ ಆಗಿದ್ದರು.
ಕೆಲ ಶಿಲ್ಪಾ ಪ್ಯಾನ್ಸ್ ಸೂಪರ್ ಆಂತ ಕಾಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದರು. ಆದ್ರೆ ನೆಟಿಜನ್ ಶಿಲ್ಪಾ ಅವತಾರ ನೋಡಿ ಗರಂ ಆದ್ರು. ಅಲ್ಲದೆ, ಟ್ರೋಲ್ ಮಾಡುತ್ತಿದ್ದಾರೆ. ಕಾಮೆಂಟ್ ಬಾಕ್ಸ್‌ನಲ್ಲಿ ಕೆಲವು ಅಸಹ್ಯ ರೀತಿಯ ಟೀಕೆ ಮಾಡುತ್ತಿದ್ದಾರೆ.