ಮುಂಬೈ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಆಡಿದ ಶ್ರೇಷ್ಠ ವಿದೇಶಿ ಆಟಗಾರರಲ್ಲಿ ಒಬ್ಬರಾದ ಕೈರನ್ ಪೊಲಾರ್ಡ್ ಅವರು ಐಪಿಎಲ್ ಗೆ ವಿದಾಯ ಹೇಳಿದ್ದಾರೆ.
ಐಪಿಎಲ್ ನಲ್ಲಿ ಇದುವರೆಗೆ ಕೇವಲ ಮುಂಬೈ ಇಂಡಿಯನ್ಸ್ ಗೆ ಆಡಿರುವ ಪೊಲಾರ್ಡ್ ಕಳೆದ 13 ಸೀಸನ್ ಗಳಲ್ಲಿ ಮುಂಬೈ ತಂಡದ ಆಧಾರ ಸ್ಥಂಭವಾಗಿದ್ದಾರೆ.
ಕಳೆದ ಸೀಸನ್ ನಲ್ಲಿ ಕಳಪೆ ಪ್ರದರ್ಶನ ತೋರಿದ್ದ ಪೊಲಾರ್ಡ್ ಅವರನ್ನು ಈ ಬಾರಿ ಫ್ರಾಂಚೈಸಿ ಉಳಿಸಿಕೊಳ್ಳುವುದಿಲ್ಲ ಎಂಬ ವದಂತಿಗಳ ನಡುವೆ ಅವರು ವಿದಾಯ ಹೇಳಿದ್ದಾರೆ. ಆದರೆ ತಂಡದ ಬ್ಯಾಟಿಂಗ್ ತರಬೇತುದಾರರಾಗಿ ಅವರ ಹೊಸ ಜವಾಬ್ದಾರಿಯೊಂದಿಗೆ ಮುಂದುವರಿಯುತ್ತಾರೆ.

ವೆಸ್ಟ್ ಇಂಡೀಸ್ ನ ಪೊಲಾರ್ಡ್ ಅವರು 2010 ರಲ್ಲಿ ಮುಂಬೈ ಇಂಡಿಯನ್ಸ್ ಗೆ ಸೇರಿದರು. ಮುಂಬೈ ಇಂಡಿಯನ್ಸ್ ನ ಐದು ಐಪಿಎಲ್ ಮತ್ತು ಎರಡು ಚಾಂಪಿಯನ್ಸ್ ಲೀಗ್ ಟ್ರೋಫಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
‘ ಇದು ಸುಲಭವಾದ ನಿರ್ಧಾರವಲ್ಲ, ಆದರೆ ತುಂಬಾ ಸಾಧಿಸಿದ ಈ ಅದ್ಭುತ ಫ್ರ್ಯಾಂಚೈಸಿಯಲ್ಲಿ ಪರಿವರ್ತನೆಯ ಅಗತ್ಯವಿದೆ ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಇನ್ನು ಮುಂದೆ ಮುಂಬೈಗಾಗಿ ನಾನು ಆಡಲು ಆಗದಿದ್ದರೆ ನಾನು ನಾನು ಅವರ ವಿರುದ್ಧವೂ ಆಡುವುದನ್ನು ನೋಡಲು ಸಾಧ್ಯವಿಲ್ಲ. ಒಮ್ಮೆ ಮುಂಬೈ ಇಂಡಿಯನ್ಸ್ ಆಗಿರುತ್ತೇನೆ” ಎಂದು ಪೊಲಾರ್ಡ್ ಹೇಳಿದ್ದಾರೆ.
Laxmi News 24×7