Breaking News

K.P.T.C.L. ಪರೀಕ್ಷಾ ಅಕ್ರಮ; 9 ಜನರ ಬಂಧನ

Spread the love

ಬೆಳಗಾವಿ: ಕೆಪಿಟಿಸಿಎಲ್ ಪರೀಕ್ಷಾ ಅಕ್ರಮಕ್ಕೆ ಸಂಬಂಧಿಸಿದಂತೆ ಈವರೆಗೆ 9 ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಬೆಳಗಾವಿ ಎಸ್ ಪಿ ಸಂಜೀವ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಕೆಪಿಟಿಸಿಎಲ್ ಪರೀಕ್ಷಾ ನೇಮಕಾತಿಯಲ್ಲಿ ಬಂಧಿತ ಅಭ್ಯರ್ಥಿಗಳು ಸ್ಮಾರ್ಟ್ ವಾಚ್ ಬಳಸಿ, ಪ್ರೆಶ್ನೆ ಪತ್ರಿಕೆ ಫೋಟೋ ತೆಗೆದು ಟೆಲಿಗ್ರಾಮ್ ಆಪ್ ಮೂಲಕ ತನ್ನ ಸ್ನೇಹಿತರಿಗೆ ಕಳುಹಿಸಿ ಉತ್ತರ ಪಡೆದಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಗಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಚಿನ್ ಶ್ರೀಧರ ಕಮತರ (32) ಗೋಕಾಕ ಶಹರ ಠಾಣೆಗೆ ಹಾಜರಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ  ನಡೆಸಿದಂತಹ ಕೆಪಿಸಿಎಲ್ ಕಿರಿಯ ದರ್ಜೆ ಸಹಾಯಕ ಹುದ್ದೆಗೆ ಪರೀಕ್ಷೆಯಲ್ಲಿ ಗೋಕಾಕ ನಗರದ ಜೆ.ಎಸ್.ಎಸ್‌.ಪದವಿ ಪೂರ್ವ ಕಾಲೇಜದಲ್ಲಿ ಮೊದಲ ಆರೋಪಿ ಪರೀಕ್ಷಾ ಅಭ್ಯರ್ಥಿಯು ಸ್ಮಾರ್ಟ್ ವಾಚ್ ಒಂದನ್ನು ಉಪಯೋಗಿಸಿ, ಪ್ರಶ್ನೆ ಪತ್ರಿಕೆಯ ಫೋಟೊ ತೆಗೆದು ಟೆಲಿಗ್ರಾಮ್ ಆ್ಯಪ್ ಮೂಲಕ ತನ್ನ ಗೆಳೆಯನಾದ ಎರಡನೇ ಆರೋಪಿಗೆ ಕಳುಹಿಸಿ ಪರೀಕ್ಷೆಯಲ್ಲಿ ಅಕ್ರಮ ನಡೆಸಿದ್ದಾನೆ ಎಂದು ಅಭ್ಯರ್ಥಿ ವಿವರಿಸಿದ್ದಾನೆ. ಈ ಬಗ್ಗೆ ಗೋಕಾಕ ಶಹರ ಠಾಣೆಯಲ್ಲಿ 96/2022 ಕಲಂ 406, 417, 420 426, 116 ಸಹ ಕಲಂ 34 ಐಪಿಸಿ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.

 

 

 

 

 

 

ಪ್ರಕರಣದ ಪ್ರಾಥಮಿಕ ತನಿಖೆಯನ್ನು ಕೈಕೊಂಡ ಗೋಕಾಕ ಶಹರ ಠಾಣೆ ಪಿ.ಎಸ್.ಐ ಅವರಿಗೆ ವಿಚಾರಣೆ ವೇಳೆ ಆರೋಪಿ ಅಕ್ರಮದಲ್ಲಿ ಭಾಗವಹಿಸಿದ ಕೆಲವು ಆರೋಪಿಗಳ ಬಗ್ಗೆ ಮಾಹಿತಿ ನೀಡಿದ್ದಾನೆ.

ಪ್ರಕರಣ ಗಂಭೀರ ಸ್ವರೂಪದ್ದಾಗಿದ್ದರಿಂದ  ಪೊಲೀಸ್ ಅಧೀಕ್ಷಕರು ಬೆಳಗಾವಿ ಜಿಲ್ಲೆ ರವರು ಕುಲಂಕುಷ ಹಾಗೂ ಸಮಗ್ರ ತನಿಖೆ ಕೈಕೊಳ್ಳುವುದಕ್ಕಾಗಿ ಪ್ರಕರಣವನ್ನು ಬೆಳಗಾವಿ ಸಿ.ಇ.ಎನ್. ಪೊಲೀಸ್ ಠಾಣೆ ಪೊಲೀಸ್ ಇನ್ಸಪೆಕ್ಟರ್ ಬೆಳಗಾವಿ ರವರಿಗೆ ವಹಿಸಿಕೊಳ್ಳಲು ಆದೇಶ ಮಾಡಿದಂತೆ ಪ್ರಕರಣದ ಮುಂದಿನ ತನಿಖೆಯನ್ನು ಪೊಲೀಸ್ ಇನ್ಸಪೆಕ್ಟರ್ ಸಿ.ಇ.ಎನ್ ಪೊಲೀಸ್ ಠಾಣೆ ಬೆಳಗಾವಿ ರವರು ಕೈಕೊಂಡು ದಿನಾಂಕ 15-08-2022 ರಂದು ಮೂರನೆ ಆರೋಪಿಗೆ ದಸ್ತಗೀರ ಮಾಡಿ ವಿಚಾರಣೆಗೆ ಒಳಪಡಿಸಿದ್ದು ಆರೋಪಿತನು ಕೆಪಿಟಿಸಿಎಲ್ ಪರೀಕ್ಷೆಯಲ್ಲಿ ಬ್ಲೂಟೂಥ್ ಡಿವೈಸ್ ಉಪಯೋಗಿಸಿದ ಬಗ್ಗೆ ಮಾಹಿತಿ ನೀಡಿದ್ದಾನೆ.

3ನೇ ಆರೋಪಿತನಿಗೆ ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ಹುಕ್ಕೇರಿ ತಾಲೂಕಿನ ಶಿರಹಟ್ಟ ಬಿ.ಕೆ ಗ್ರಾಮದ ತೋಟದ ಮನೆಯಲ್ಲಿ ಕುಳಿತು ದಿನಾಂಕ 07-08-2022 ರಂದು ನಡೆದ ಕೆಪಿಟಿಸಿಎಲ್ ಪರೀಕ್ಷೆಯ ಉತ್ತರಗಳನ್ನು ಫೋನ್ ಮುಖಾಂತರ ಇನ್ನುಳದ ಆರೋಪಿತರಿಗೆ ಹೇಳಿದ ಜಾಗ ತೋರಿಸಿದ್ದು ಅಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಮಹತ್ವದ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಕೃತ್ಯ ನಡೆಯಲು ಸಹಾಯ ಮಾಡಿದ ಆರೋಪದಡಿ ಹುಕ್ಕೇರಿ ತಾಲೂಕಿನ ಶಿರಹಟ್ಟ ಬಿ ಕೆ.ಗ್ರಾಮದ  4ನೇ ಆರೋಪಿತನನ್ನು ದಸ್ತಗೀರ ಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.


Spread the love

About Laxminews 24x7

Check Also

ತಾಯಿಯೊಂದಿಗೆ ಚಿನ್ನದ ಹುಡುಗ ಕಾರ್ತಿಕ್

Spread the loveಬೆಳಗಾವಿ: ತಾಯಿ ಟೈಲರಿಂಗ್ ಕೆಲಸ ಮಾಡುತ್ತಾರೆ. ತಂದೆ ಇಲ್ಲ. ತಾಯಿಗೆ-ಮಗ, ಮಗನಿಗೆ-ತಾಯಿನೇ ಎಲ್ಲಾ. ಮನೆಯಲ್ಲಿ ಬಡತನ ಹಾಸು ಹೊಕ್ಕಾಗಿತ್ತು. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ