Breaking News

ತಕ್ಷಣವೇ ಮೇಯರ್-ಉಪಮೇಯರ್ ಚುನಾವಣೆ ನಡೆಸುವಂತೆ 15ಕ್ಕೂ ಹೆಚ್ಚು ನಗರಸೇವಕರ ಆಗ್ರಹ

Spread the love

ಬೆಳಗಾವಿ ಮಹಾನಗರ ಪಾಲಿಕೆಗೆ ಚುನಾವಣೆ ನಡೆದು 8 ತಿಂಗಳು ಕಳೆಯುತ್ತಾ ಬಂದ್ರೂ ಕೂಡ ಇನ್ನು ಮೇಯರ್-ಉಪಮೇಯರ್ ಆಯ್ಕೆಯಾಗಿಲ್ಲ. ಇದರಿಂದ ವಾರ್ಡಗಳಲ್ಲಿ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಹೀಗಾಗಿ ತಕ್ಷಣವೇ ಮೇಯರ್-ಉಪಮೇಯರ್ ಚುನಾವಣೆ ನಡೆಸುವಂತೆ 15ಕ್ಕೂ ಹೆಚ್ಚು ನಗರಸೇವಕರು ಆಗ್ರಹಿಸಿದ್ದಾರೆ.

ಹೌದು ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಗರಸೇವಕರಾಗಿ ಆಯ್ಕೆಯಾಗಿ 8 ತಿಂಗಳು ಆಗುತ್ತಾ ಬಂದಿದೆ. ಆದರೂ ಕೂಡ ಮೇಯರ್-ಉಪಮೇಯರ್ ಚುನಾವಣೆ ನಡೆದಿಲ್ಲ. ನಗರಸೇವಕರಾಗಿ ಆಯ್ಕೆಯಾದರೂ ಇವರಿಗೆ ಯಾವುದೇ ರೀತಿ ಕಾನೂನು ಬದ್ಧ ಅಧಿಕಾರ ಸಿಗದೇ ಇರುವುದು ಕಾಂಗ್ರೆಸ್, ಎಂಐಎಂ ಹಾಗೂ ಪಕ್ಷೇತರ ನಗರಸೇವಕರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಸೋಮವಾರ ಪ್ರಾದೇಶಿಕ ಆಯುಕ್ತರ ಕಚೇರಿಗೆ ಆಗಮಿಸಿದ 15ಕ್ಕೂ ಹೆಚ್ಚು ನಗರಸೇವಕರು ತಕ್ಷಣವೇ ಮೇಯರ್-ಉಪ ಮೇಯರ್ ಚುನಾವಣೆ ನಡೆಸುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು.


Spread the love

About Laxminews 24x7

Check Also

ಬಿಜೆಪಿಯ ಒಂದು ಗುಂಪಿಂದ ಧರ್ಮಸ್ಥಳದ ವಿರುದ್ಧ ಅಪಪ್ರಚಾರ: ಸಚಿವ ಸತೀಶ್ ಜಾರಕಿಹೊಳಿ

Spread the loveಚಿಕ್ಕೋಡಿ: ಬಿಜೆಪಿಯಲ್ಲಿ ಎರಡು ಗುಂಪುಗಳಿವೆ. ಅವರಲ್ಲಿಯೇ ಧರ್ಮಸ್ಥಳದ ವಿರುದ್ಧ ಪರ- ವಿರೋಧವಿದೆ. ಇದರಿಂದಾಗಿ, ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ