Breaking News

ಗುಜರಾತ ರಾಜ್ಯಪಾಲರು ಹಾಗು ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳಿಗೆ ಅಹ್ಮದಾಬಾದ್ ಗೆ ತೆರಳಲು ಅನುಮತಿ

Spread the love

ಬೆಳಗಾವಿ- ಗುಜರಾತ ರಾಜ್ಯಪಾಲರು ಹಾಗು ಗುಜರಾತಿನ ಸಂಸದರ ಮನವಿಗೆ ಕರ್ನಾಟಕ ಸರ್ಕಾರ ತ್ವರಿತವಾಗಿ ಸ್ಪಂದಿಸಿ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಕಲಿಯುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳಿಗೆ ಅಹ್ಮದಾಬಾದ್ ಗೆ ತೆರಳಲು ಅನುಮತಿ ನೀಡಿದೆ‌.

ಸಾರಿಗೆ ಸಂಸ್ಥೆಯ ಮೂರು ರಾಜಹಂಸ ಬಸ್ ಗಳಲ್ಲಿ ಸುಮಾರು 45 ಕ್ಕೂ ಹೆಚ್ಚು ನರ್ಸಿಂಗ್ ವಿದ್ಯಾರ್ಥಿಗಳು ಗುಜರಾತಿಗೆ ತೆರಳಿದ್ದಾರೆ.

ನಿನ್ನೆ ಸಂಜೆ ಈ ಮೂರು ಬಸ್ಸು ಗಳು ಬೆಳಗಾವಿಯ ಬಸ್ ನಿಲ್ಧಾಣದಲ್ಲಿ ಡಿಸೈಲ್ ತುಂಬಿಸಿಕೊಂಡು ಮುಂದಕ್ಕೆ
ಸಾಗಿವೆ ಗುಜರಾತಿನಲ್ಲಿ ಕೊರೋನಾ ಸೊಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ರಾಜೀವ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವ ವಿದ್ಯಾಲಯ ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ನರ್ಸಿಂಗ್ ವಿಧ್ಯಾರ್ಥಿಗಳನ್ನು ಅಹ್ಮದಾಬಾದ್ ಗೆ ಕಳುಹಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಿದ ಹಿನ್ನಲೆಯಲ್ಲಿ ಕರ್ನಾಟಕ ಸರ್ಕಾರ ಗುಜರಾತ ಸರ್ಕಾರದ ಮನವಿ ಮತ್ತು ರಾಜೀವ ಗಾಂಧಿ ವಿಶ್ವ ವಿಧ್ಯಾಲಯದ ನಿರ್ದೇಶನದ ಮೇರೆಗೆ ಗುಜರಾತಿನ ನರ್ಸಿಂಗ್ ವಿದ್ಯಾರ್ಥಿಗಳನ್ನು ಗುಜರಾತಿಗೆ ರವಾನಿಸಿದೆ
.
ದಾವಣಗೇರೆಯ ಅಶ್ವಿನಿ ಆಯುರ್ವೇದ ಕಾಲೇಜು,ಹಾವೇರಿಯ ಸಿಂದಗಿ ಶಾಂತವೀರೇಶ್ವರ ಆಯುರ್ವೇದ ಕಾಲೇಜ,ಬಾಗಲಕೋಟೆಯ B V V S ಆಯುರ್ವೇದ ಮೆಡಿಕಲ್ ಕಾಲೇಜುಗಳಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ನರ್ಸಿಂಗ್ ಸ್ಟುಡೆಂಟ್ ಗಳನ್ನು ಅವರ ತವರೂರಿಗೆ ಕಳುಹಿಸುವ ಮೂಲಕ ಕರ್ನಾಟಕ ಸರ್ಕಾರ ಗುಜರಾತ ಸರ್ಕಾರದ ಮನವಿಗೆ ತ್ವರಿತಗತಿಯಲ್ಲಿ ಸ್ಪಂದಿಸಿದೆ


Spread the love

About Laxminews 24x7

Check Also

ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ ಭವನದಲ್ಲಿ ಆಯೋಜಿಸಲಾದ “ಬಿಲ್ಡ್ ಟೆಕ್ – 2025” ಕಟ್ಟಡ ನಿರ್ಮಾಣ

Spread the love ಗೋಕಾಕ ನಗರದ ಇತಿಹಾಸದಲ್ಲೇ ಪ್ರಥಮ ಬಾರಿಗೆ, ಗೋಕಾಕ ಇಂಜಿನಿಯರ್ಸ್ ಅಸೋಸಿಯೇಷನ್‌ ಅವರ ವತಿಯಿಂದ ಶ್ರೀ ಮಹಾಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ