ಬೆಂಗಳೂರು: ರಾಜ್ಯದಲ್ಲಿ ಕೊರೋನಾ ನಂತ್ರ, ಆರ್ಥಿಕ ಸ್ಥಿತಿ ಸುಧಾರಿಸಿದ್ದು, ಇದಕ್ಕೆ ಅನುಗುಣವಾಗಿ ಸಂಪನ್ಮೂಲ ಕ್ರೂಢೀಕರಣವನ್ನು ಗಮನಿಸಿ, ಮುಂದಿನ ವಾರ ಹೆಚ್ಚುವರಿ ಬಜೆಟ್ ( Supplementary Budget ) ಮಂಡಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( Chief Minister Basavaraj Bommai ) ಘೋಷಿಸಿದ್ದಾರೆ.
ರಾಜ್ಯದ ಆರ್ಥಿಕ ಸ್ಥಿತಿ ಸುಧಾರಿಸುತ್ತಿದೆ. ತೆರಿಗೆ ವಸೂಲಾತಿ ಗಣನೀಯವಾಗಿ ಹೆಚ್ಚಿದೆ. ಆಧಾಯದ ಪ್ರಮಾಣದಲ್ಲೂ ಏರಿಕೆಯಾಗಿದೆ. ಆದ್ದರಿಂದ ಈಗಾಗಲೇ ಘೋಷಿಸಿರುವ ಬಜೆಟ್ ಗಾತ್ರ ಕುಗ್ಗುವ ಭೀತಿ ಇಲ್ಲವಾಗಿದೆ. ಹೆಚ್ಚುವರಿ ಸಂಪ್ಮೂಲ ಕ್ರೂಢೀಕರಣದ ಮೊತ್ತವನ್ನು ಆಧರಿಸಿ, ಮುಂದಿನವಾರ ಸಪ್ಲಿಮೆಂಟರಿ ಬಜೆಟ್ ಮಂಡಿಸುವುದಾಗಿ ಘೋಷಿಸಿದರು.