Breaking News

ಪಿಕ್‍ಪಾಕೆಟ್ ಪ್ರಕರಣದಲ್ಲಿ ನಟಿ ಅರೆಸ್ಟ್

Spread the love

ಕೋಲ್ಕತ್ತಾ: ಬೆಂಗಾಳಿ, ಹಿಂದಿ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ರೂಪಾ ದತ್ತಾ, ಪಿಕ್‍ಪಾಕೆಟ್ ಪ್ರಕರಣದಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ.

ನಡೆದಿದ್ದೇನು?: ಕೋಲ್ಕತ್ತಾದಲ್ಲಿ ಅಂತಾರಾಷ್ಟ್ರೀಯ ಮೇಳದಲ್ಲಿ ಭಾಗವಹಿಸಿದ್ದರು. ಈ ವೇಳೆ ರೂಪಾ ದತ್ತಾ, ಪರ್ಸ್‍ವೊಂದನ್ನು ಕಸದ ಬುಟ್ಟಿಗೆ ಎಸೆಯುತ್ತಿರುವುದನ್ನು ಪೊಲೀಸರೊಬ್ಬರು ನೋಡಿದ ನಂತರ ಶನಿವಾರ ಅವರನ್ನು ಬಂಧಿಸಲಾಗಿದೆ ಎಂದು ಬಿದಾನ್ ನಗರ್ ಉತ್ತರ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಂಧನದ ನಂತರ ವಿಚಾರಣೆ ವೇಳೆಯಲ್ಲಿ ಆಕೆ ನೀಡಿದ್ದ ಉತ್ತರಗಳು ಸಮರ್ಪಕವಾಗಿರಲಿಲ್ಲ. ಶೋಧನೆ ವೇಳೆ ಆಕೆಯ ಬ್ಯಾಗ್‍ನಿಂದ ಅನೇಕ ಪರ್ಸ್‍ಗಳು ಮತ್ತು 75 ಸಾವಿರ ರೂ. ನಗದು ಪತ್ತೆಯಾಗಿದೆ. ಆದರೆ ಈ ಹಣದ ಮೂಲದ ಬಗ್ಗೆ ರೂಪಾ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ಗಮನ ಬೇರೆಡೆ ಸೆಳೆದು ಕಳ್ಳತನ ಆರೋಪದ ಮೇರೆಗೆ ನಟಿಯನ್ನು ಬಂಧಿಸಲಾಗಿದೆ. ಈ ಅಪರಾಧದಲ್ಲಿ ಹೆಚ್ಚಿನ ಜನರು ತೊಡಗಿಸಿಕೊಂಡರಬಹುದೇ ಎಂಬುದನ್ನು ತಿಳಿಯಲು ಹೆಚ್ಚಿನ ತನಿಖೆ ಮುಂದುವರೆದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ