ನವ ದೆಹಲಿ : 2016 ರಿಂದ 2020 ನೆಯ ಇಸವಿಯ ನಡುವೆ 4 ಸಾವಿರದ 177 ವಿದೇಶಿಯರಿಗೆ ಭಾರತೀಯ ಪೌರತ್ವ ನೀಡಲಾಗಿದ್ದು, 10 ಸಾವಿರದ 635 ಅರ್ಜಿಗಳು ಬಾಕಿ ಇವೆ. ಬಾಕಿ ಉಳಿದಿರುವ ಅರ್ಜಿಗಳ ಪೈಕಿ ಅತಿ ಹೆಚ್ಚು ಅಂದರೆ 7 ಸಾವಿರದ 306 ಅರ್ಜಿಗಳು ಪಾಕಿಸ್ತಾನಿ ಪ್ರಜೆಗಳಿಂದ ಬಂದಿದ್ದರೆ, 1 ಸಾವಿರದ 152 ಅರ್ಜಿಗಳು ಅಫ್ಘಾನಿಸ್ತಾನದಿಂದ ಬಂದಿವೆ ಎಂದು ಕೇಂದ್ರ ಗೃಹರಾಜ್ಯಸಚಿವ ನಿತ್ಯಾನಂದ ರಾಯ ಇವರು ರಾಜ್ಯಸಭೆಯಲ್ಲಿ ತಿಳಿಸಿದ್ದಾರೆ.
