ಯಾವ ಉದ್ದೇಶದಿಂದ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣ ಮಾಡಿದ್ದೇವೆ. ಅಧಿವೇಶನ ಆರಂಭ ಮಾಡಿದ್ದೇವೆ. ಅದರ ಸಂಪೂರ್ಣ ಉಪಯೋಗ ಆಗಿಲ್ಲ ಎಂದು ಮಾಜಿ ಸಿಎಂ ಕುಮಾರಸ್ವಾಮಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಂಗಳವಾರ ಬೆಳಗಾವಿಗೆ ಆಗಮಿಸಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ವೀರರಾಣಿ ಕಿತ್ತೂರು ಚನ್ನಮ್ಮಾಜಿ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಮರ್ಪಿಸಿದರು. ಈ ವೇಳೆ ಮಾಜಿ ಸಚಿವ ಎಚ್.ಡಿ.ರೇವಣ್ಣ ಸೇರಿದಂತೆ ಇನ್ನಿತರು ಜೆಡಿಎಸ್ ನಾಯಕರು ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದರು.
ಇದೇ ವೇಳೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಯಾವ ಉದ್ದೇಶದಿಂದ 2006ರಲ್ಲಿ ವಿಧಾನಸಭೆ ಕಲಾಪ ಆಗಬೇಕು ಎಂದು ಅಧಿವೇಶನ ಮತ್ತು ಸುವರ್ಣಸೌಧ ಕಟ್ಟಲು ನಿರ್ಧಾರ ಮಾಡಿದೇವೋ. ಅದು ಸಂಪೂರ್ಣವಾಗಿ ಉತ್ತರಕರ್ನಾಟಕ ಜನರ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪೂರ್ಣವಾಗಿ ಅದರ ಉಪಯುಕ್ತ ಆಗಿಲ್ಲ ಎಂಬ ಭಾವನೆ ನನ್ನನ್ನು ಸೇರಿಸಿ ಎಲ್ಲರಲ್ಲಿಯೂ ಇದೆ ಎಂದರು.ಇನ್ನು ಮತಾಂತರ ನಿಷೇಧವನ್ನು ಕಂಡ ತುಂಡವಾಗಿ ನಾವು ಇದನ್ನು ವಿರೋಧ ಮಾಡುತ್ತೇವೆ ಸದನದಲ್ಲಿ ನಮಗೆ ಬಹುತಮ ಇದೆ ಎಂದು ಅವರಿಗೆ ಬುಲ್ಡೋಸ್ ಮಾಡಲು ಬರುವುದಿಲ್ಲ. ವಾಸ್ತಾವಂಶವನ್ನು ಅರಿಯಬೇಕು. ಯಾವುದೇ ಕಾರಣಕ್ಕೂ ಮತಾಂತರ ನಿಷೇಧ ಕಾಯ್ದೆ ಬಗ್ಗೆ ಪರಿಷತ್, ವಿಧಾನಸಭೆ ಎರಡರಲ್ಲಿಯೂ ಜೆಡಿಎಸ್ ಬೆಂಬಲಿಸುವುದಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.