Breaking News

ಕೋವಿಶೀಲ್ಡ್‌ ಲಸಿಕೆ ಪಡೆದವರಿಗೆ ಭರ್ಜರಿ ಗುಡ್‌ ನ್ಯೂಸ್

Spread the love

ಕೋವಿಶೀಲ್ಡ್‌ನ ಎರಡು ಡೋಸ್‌ಗಳನ್ನು ಪಡೆದವರ ಪೈಕಿ ಮೂರರಿಂದ ಏಳು ತಿಂಗಳ ಬಳಿಕವೂ ಕೋವಿಡ್‌-19 ವಿರುದ್ಧ ಪ್ರತಿರೋಧದ ಶಕ್ತಿ ಉತ್ತಮವಾಗಿರುವ ವಿಚಾರವು 500ರಷ್ಟು ಆರೋಗ್ಯ ಸೇವಾ ಸಿಬ್ಬಂದಿ ಮೇಲೆ ನಡೆಸಿರುವ ಅಧ್ಯಯದಲ್ಲಿ ತಿಳಿದುಬಂದಿದೆ.

ಪುಣೆ ಮೂಲದ ಬಿಜೆ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಸಾಸ್ಸೋನ್ ಆಸ್ಪತ್ರೆಗಳು ಈ ಅಧ್ಯಯನವನ್ನು ಜಂಟಿಯಾಗಿ ನಡೆಸಿವೆ.

ಮೇಲ್ಕಂಡ ಕಾರಣದಿಂದಾಗಿ, ಸದ್ಯದ ಮಟ್ಟಿಗೆ ಬೂಸ್ಟರ್‌ ಡೋಸ್‌ಗಿಂತಲೂ ಎರಡನೇ ಲಸಿಕೆಯ ಕವರೇಜ್‌ ಅನ್ನು ಹೆಚ್ಚಿಸುವತ್ತ ಗಮನ ನೀಡಬೇಕಾದ ಅಗತ್ಯವಿದೆ ಎಂದು ಡಾ .ಮುರಳೀಧರ್‌ ಟಾಂಬೆ, ಬಿಜೆಎಂಸಿಯ ಸಾಮುದಾಯಿಕ ವೈದ್ಯಕೀಯ ವಿಭಾಗದ ಪ್ರೊಫೆಸರ್‌ ತಿಳಿಸಿದ್ದಾರೆ.

“ಕೋವಿಡ್ ಲಸಿಕೆಯ ಎರಡು ಡೋಸ್‌ಗಳ ನಡುವಿನ ಅವಧಿ ಹೆಚ್ಚಾದಷ್ಟೂ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತಿರುವುದು ಕಂಡು ಬಂದರೂ ಸಹ, ಅಧ್ಯಯನದಲ್ಲಿ ಪಾಲ್ಗೊಂಡವರ ಪೈಕಿ, ಪೂರ್ಣ ಪ್ರಮಾಣದಲ್ಲಿ ಲಸಿಕೆ ಪಡೆದು ಮೂರು ತಿಂಗಳಾದವರ ಪೈಕಿ 96.77% ಜನರಲ್ಲಿ ರೋಗನಿರೋಧಕ ಸಕಾರಾತ್ಮಕತೆ ಇದ್ದು, ನಾಲ್ಕು ತಿಂಗಳಾದವರ ಪೈಕಿ 100%ನಷ್ಟು ಜನರಿಗೆ ಈ ಶಕ್ತಿ ಇದ್ದರೆ, ಏಳು ತಿಂಗಳ ವೇಳೆಗೆ 91.88%ನಷ್ಟಿದೆ,” ಎಂದು ಟಾಂಬೆ ತಿಳಿಸಿದ್ದಾರೆ.

ಅಧ್ಯಯನಕ್ಕೆ ಒಳಪಟ್ಟ 558 ಸಿಬ್ಬಂದಿಯ ಪೈಕಿ 90% ನಷ್ಟು ಜನರಲ್ಲಿ ಕೋವಿಡ್‌ ವಿರುದ್ಧ ರೋಗ ನಿರೋಧಕ ಶಕ್ತಿ ಪ್ರಬಲವಾಗಿರುವುದು ತಿಳಿದುಬಂದಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ