Breaking News

ಕಳೆದ ಬಾರಿ 1100 ಮತಗಳನ್ನು ಅಕ್ರಮವಾಗಿ ಪಕ್ಷೇತರ ಅಭ್ಯರ್ಥಿಗೆ ಹಾಕಲಾಗಿತ್ತು: ಸತೀಶ್ ಜಾರಕಿಹೊಳಿ

Spread the love

ಬೆಳಗಾವಿಯಲ್ಲಿ ನಡೆಯುತ್ತಿರುವ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಗುಜನಾಳ ಗ್ರಾಮ ಪಂಚಾಯತ ಮತಗಟ್ಟೆಗೆ ಶಾಸಕ ಸತೀಶ್ ಜಾರಕಿಹೊಳಿ ಭೇಟಿ ನೀಡಿದರು.
ಇಂದು ಬೆಳಗಾವಿಯ ಎರಡು ಪರಿಷತ್ ಸ್ಥಾನಗಳಿಗೆ ನಡೆಯುತ್ತಿರುವ ಚುನಾವಣೆ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ ಗುಜನಾಳ ಗ್ರಾಮ ಪಂಚಾಯತಿ ಬಳಿ ಮೊಕ್ಕಾಂ ಹೂಡಿದ್ದಾರೆ. ಈ ಮೊದಲೇ ಸತೀಶ್ ಜಾರಕಿಹೊಳಿ ಹೇಳಿದಂತೆ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಗುಜನಾಳ ಗ್ರಾಮ ಪಂಚಾಯತಿಯಲ್ಲಿ ಸ್ಥಾಪಿಸಲಾದ ಮತಗಟ್ಟೆಯ ಬಳಿ ಟಿಕಾಣಿ ಹೂಡಿದ್ದಾರೆ.

ಶಾಸಕರಿಗೆ ಬೂತ್ ಎಜೆಂಟ್ ಆಗಲು ಅವಕಾಶ ಇಲ್ಲ. ಹಾಗಾಗಿ ಬೂತ್ ಬಳಿಯೇ ಮೊಕ್ಕಾ ಹೂಡಿದ್ದಾರೆ. ಗೋಕಾಕ್ ತಾಲೂಕಿನಲ್ಲಿ ಚುನಾವಣೆಯಲ್ಲಿ ಅಕ್ರಮದ ಚಟುವಟಿಕೆಗಳು ನಡೆಯುವ ಶಂಕೆ ಹಿನ್ನೆಲೆಯಲ್ಲಿ ಮೊದಲೇ ಈ ಕುರಿತಂತೆ ಘೋಷಣೆ ಮಾಡಿದ್ದರು. ತಮಗೆ ಅವಕಾಶ ನೀಡದ ಹಿನ್ನೆಲೆಯಲ್ಲಿ ಕೊಣ್ಣೂರ ಪುರಸಭೆಯಲ್ಲಿ ರಾಹುಲ್ ಜಾರಕಿಹೊಳಿ ಏಜೆಂಟ್‍ರನ್ನಾಗಿ ನೇಮಕ ಮಾಡಲಾಗಿದೆ. ಇನ್ನು ಶಿಂಧಿಕುರಬೇಟ ಗ್ರಾಮ ಪಂಚಾಯತನಲ್ಲಿ ಪ್ರೀಯಾಂಕ ಜಾರಕಿಹೊಳಿಯವರನ್ನು ಏಜೆಂಟ್‍ರನ್ನಾಗಿ ನೇಮಕ ಮಾಡಲಾಗಿದೆ. 

ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕ ಸತೀಶ್ ಜಾರಕಿಹೊಳಿ, ಮುಂಚೆಯೇ ನಾವು ಘೋಷಣೆ ಮಾಡಿದಂತೆ ನಾವು ಗುಜನಾಳಕ್ಕೆ ಬೆಳಿಗ್ಗೆ 7ಗಂಟೆ 30 ನಿಮಿಷಕ್ಕೆ ಬಂದಿದ್ದೇವೆ. ಬರುವ ಉದ್ದೇಶ ಒಬ್ಬರೇ ಮತದಾನ ಮಾಡುವ ಮೂಲಕ ಸದಸ್ಯರ ಮತದಾನದ ಹಕ್ಕನ್ನು ಮೊಟಕುಗೊಳಿಸಬಾರದು. ಸದಸ್ಯರು ತಾವೇ ಬಂದು ಸ್ವ ಇಚ್ಛೆಯಿಂದ ತಾವೇ ಯಾರಿಗೆ ಬೇಕಾದರೂ ಮತ ಹಾಕಲಿ ಎನ್ನುವುದು ನಮ್ಮ ಗುರಿ. ಅದನ್ನು ನಾವು ಹೆಚ್ಚು ಕಡಿಮೆ ಅರಭಾವಿ ಗೋಕಾಕದಲ್ಲಿ ಯಶಸ್ವಿ ಮಾಡಿದ್ದೇವೆ. ಕಳೆದ ಬಾರಿ ಒಬ್ಬರೇ ಎಲ್ಲರ ಮತ ಹಾಕುವಂತಹ ಪ್ರಯತ್ನವಾಗಿತ್ತು. ಹಾಗಾಗಿ 1100 ಮತಗಳು ಪಕ್ಷೇತರ ಅಭ್ಯರ್ಥಿಗೆ ಹೋಗಿದ್ದವು. ಆ ಹಿನ್ನೆಲೆಯಲ್ಲಿ ಈ ಬಾರಿ ನಮ್ಮ ಪಕ್ಷದ ಹಿರಿಯ ಕಾರ್ಯಕರ್ತರನ್ನು ಎಜೆಂಟರನ್ನಾಗಿ ಮಾಡಿದ್ದೇವೆ ಎಂದರು.

ಈಗಾಗಲೇ ಶಾಸಕ ಸತೀಶ್ ಜಾರಕಿಹೊಳಿ ಚುನಾವಣೆ ಅಕ್ರಮ ಹಿನ್ನೆಲೆಯಲ್ಲಿ ಮತದಾನದ ಬೂತ್ ಬಳಿಯೇ ಟಿಕಾಣಿ ಹೂಡಿದ್ದಾರೆ. ಇನ್ನು ಈ ಹಿನ್ನೆಲೆಯಲ್ಲಿ ಚುನಾವಣಾ ಫಲಿತಾಂಶದ ಮೇಲೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂದು ಕಾದು ನೋಡಬೇಕಿದೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ