ಹುಬ್ಬಳ್ಳಿ: ಕಾನೂನು ಪದವಿ ಆಫ್ ಲೈನ್ ಪರೀಕ್ಷೆ ರದ್ದತಿ ಹಾಗೂ ಕೂಡಲೇ ತರಗತಿ ಆರಂಭಕ್ಕೆ ಒತ್ತಾಯಿಸಿ, ಕಾನೂನು ವಿದ್ಯಾರ್ಥಿಗಳ ಹೋರಾಟ ಬೆಂಬಲಿಸಿ, ಎಬಿವಿಪಿಯಿಂದ ಸಾವಿರಾರು ವಿದ್ಯಾರ್ಥಿಗಳು ಗುರುವಾರ ಕಾನೂನು ವಿವಿಗೆ ಮುತ್ತಿಗೆ ಹಾಕಿದರು.
ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ನವನಗರದ ಆರ್ ಟಿಒ ಕಚೇರಿಯಿಂದ ಕಾನೂನು ವಿವಿವರೆಗೂ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ, ವಿವಿಗೆ ಮುತ್ತಿಗೆ ಹಾಕಿದರು. ವಿವಿ ಕುಲಪತಿ ವಿರುದ್ಧ ಘೋಷಣೆ ಕೂಗಿದರು.
ರಾಜ್ಯದ ವಿವಿಧ ಜಿಲ್ಲೆಯ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆಯಲ್ಲಿ ಭಾಗಿದ್ದರು.

ವಿವಿ ಆವರಣದೊಳಗೆ ನುಗ್ಗಲು ಪ್ರತಿಭಟನಾಕಾರರು ಯತ್ನಿಸಿದಾಗ ಪೊಲೀಸರು ತಡೆದರು. ಈ ವೇಳೆ ಪ್ರತಿಭಟನಾಕಾರರು, ಪೊಲೀಸರ ಮಧ್ಯ ತಳ್ಳಾಟ-ನೂಕಾಟ ನಡೆಯಿತು.
Laxmi News 24×7