ಬೆಳಗಾವಿಯ ಮೈತ್ರಿ ಆಫೀಸರ್ ಲೇಡೀಸ್ ಕ್ಲಬ್ ವತಿಯಿಂದ ಮಹೇಶ್ವರಿ ಅಂಧ ಮಕ್ಕಳ ಶಾಲೆಯ ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ ಮಾಡಿದರು.
ಬುಧವಾರ ಬೆಳಗಾವಿಯ ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ಆಗಮಿಸಿದ ಬೆಳಗಾವಿಯ ಮೈತ್ರಿ ಆಫೀಸರ್ ಲೇಡೀಸ್ ಕ್ಲಬ್ ಅಧ್ಯಕ್ಷರಾದ ಮೈತ್ರಾಯೀ ಬಿಸ್ವಾಸ್ ಅವರು 30 ವಿದ್ಯಾರ್ಥಿನಿಯರಿಗೆ ಹೈಜೆನಿಕ್ ಕಿಟ್‍ಗಳನ್ನು ವಿತರಣೆ ಮಾಡಿದರು. ಇದೇ ವೇಳೆ ಮುಂಬೈನಿಂದ ಬಂದಿದ್ದ ರಮನ್ ದೇವದಾರ್ ಅವರ ಹೇರ್ ಡ್ರೆಸಸ್‍ನಿಂದ ಸುಮಾರು 90 ವಿದ್ಯಾರ್ಥಿಗಳಿಗೆ ಉಚಿತವಾಗಿ ಕಟಿಂಗ್ ಮಾಡಿಸಲಾಯಿತು. ಈ ವೇಳೆ ವಿದ್ಯಾರ್ಥಿಗಳ ಸಂತಸಕ್ಕೆ ಪಾರವೇ ಇರಲಿಲ್ಲ