Breaking News
Home / ರಾಜಕೀಯ / ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಕೊಡಗು-ಕಬಿನಿ ಟ್ರಿಪ್ ಹೋಗ್ಬಹುದು, ಬೆಲೆ ಎಷ್ಟು, ಬುಕಿಂಗ್ ಹೇಗೆ? ಫುಲ್ ಡೀಟೆಲ್ಸ್

ಬೆಂಗಳೂರಿನಿಂದ ಹೆಲಿಕಾಪ್ಟರ್​ನಲ್ಲಿ ಕೊಡಗು-ಕಬಿನಿ ಟ್ರಿಪ್ ಹೋಗ್ಬಹುದು, ಬೆಲೆ ಎಷ್ಟು, ಬುಕಿಂಗ್ ಹೇಗೆ? ಫುಲ್ ಡೀಟೆಲ್ಸ್

Spread the love

ಪ್ರವಾಸಿಗರಿಗೆ(tourist) ಕರ್ನಾಟಕದ(Karnataka) ಕೊಡುಗು(Coorg) ಸಹ ನೆಚ್ಚಿನ ಸ್ಥಳ. ವೀಕೆಂಡ್​ನಲ್ಲಿ(Weekend) ಅದರಲ್ಲೂ ಚಳಿಗಾಲ (Winter)ಮತ್ತು ಮಳೆಗಾಲದಲ್ಲಿ(Rainy Season) ಕೊಡಗಿನ ಸೌಂದರ್ಯ ಸವಿಯುವ ಮಜಾವೇ ಬೇರೆ. ಇನ್ನು ಬೆಂಗಳೂರಿನಲ್ಲಿರುವ ಪ್ರವಾಸಿ ಪ್ರಿಯರಿಗೆ ಸಿಹಿ ಸುದ್ದಿಯೊಂದಿದೆ.
ಡಿಸೆಂಬರ್ 11 ರಿಂದ, ಪ್ರವಾಸಿಗರು ಬೆಂಗಳೂರಿನ ಜಕ್ಕೂರು ಏರೋಡ್ರೋಮ್‌ನಿಂದ ಕಬಿನಿ/ಕೊಡಗುಗೆ ಹೆಲಿಕಾಪ್ಟರ್(helicopter) ರೈಡ್ ಅನ್ನು ಬುಕ್ ಮಾಡಬಹುದು ಮತ್ತು ಒಂದು ಗಂಟೆಯಲ್ಲಿ ಹೋಗಬೆಕಾಗಿರುವ ಸ್ಥಳವನ್ನು ತಲುಪಬಹುದು. ‘ಬೈ-ಎ-ಸೀಟ್’ (Buy A seat)ಆಧಾರದ ಮೇಲೆ ಕಾರ್ಯನಿರ್ವಹಿಸುವ ಹೊಸ ಚಾಪರ್ ಸೇವೆಯು ಮಂಗಳವಾರ ಮತ್ತು ಬುಧವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಲಭ್ಯವಿರುತ್ತದೆ.

ಅರ್ಬನ್ ಏರ್ ಮೊಬಿಲಿಟಿ ಬ್ಲೇಡ್ ಇಂಡಿಯಾದಿಂದ ಈ ಸೇವೆಯನ್ನು ಆಯೋಜಿಸಲಾಗಿದೆ. ಜಕ್ಕೂರಿನಿಂದ ಹೆಲಿಕಾಪ್ಟರ್ ಸೇವೆಗಳನ್ನು ಮಧ್ಯಾಹ್ನದ ಸಮಯದಲ್ಲಿ ಒದಗಿಸಲಾಗುವುದು ಮತ್ತು ನಿಮ್ಮ 6 ರಿಂದ 7 ಗಂಟೆಗಳ ಸುದೀರ್ಘ ಕಬಿನಿ ಪ್ರಯಾಣವನ್ನು ಕೇವಲ ಒಂದು ಗಂಟೆಯಲ್ಲಿ ಮಾಡಬಹುದಾಗಿದೆ. ಇದು ನಿಜಕ್ಕೂ ಪ್ರವಾಸಿ ಪ್ರಿಯರಿಗೆ ಸಂತಸದ ಸುದ್ದಿ ಎಂದರೆ ತಪ್ಪಾಗಲಾರದು. ಬೆಂಗಳೂರಿನಿಂದ ಎರಡೂ ಸ್ಥಳಗಳಿಗೆ ಏಕಮುಖ ಪ್ರಯಾಣದ ದರ 16,000 ರೂ. ಸಾಮಾನು ಸರಂಜಾಮು ಸೌಲಭ್ಯಗಳಿಂದ ಹಿಡಿದು ವರ್ಗಾವಣೆ ಮತ್ತು ಪಾಲುದಾರರ ಪ್ರಯೋಜನಗಳವರೆಗೆ ಎಲ್ಲವನ್ನೂ ಕಾಳಜಿ ವಹಿಸಿ, ನಿಮ್ಮನ್ನು ಯಾವುದೇ ರೀತಿಯ ತೊಂದರೆ ಇಲ್ಲದೇ ಮತ್ತು ಕೈಗೆಟುಕುವ ದರದಲ್ಲಿ ಕರೆದೊಯ್ಯುವುದು ಈ ಯೋಜನೆಯ ಗುರಿಯಾಗಿದೆ.

: ಒಂದೇ ದಿನದಲ್ಲಿ ಬೆಂಗಳೂರಿನ ಸುತ್ತಮುತ್ತ ಇರೋ ಸುಂದರ ಜಲಪಾತಗಳಿಗೆ ಟ್ರಿಪ್ ಹೋಗಿ ಬನ್ನಿ!

ಬ್ಲೇಡ್ ಇಂಡಿಯಾ ಅತಿ ಉತ್ತಮವಾದ ವೇದಿಕೆಯಾಗಿದ್ದು, ಇದು 2019 ರಲ್ಲಿ ಮಹಾರಾಷ್ಟ್ರದಲ್ಲಿ ಚಾಪರ್ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಮತ್ತು ಡಿಸೆಂಬರ್ 18, 2020 ರಂದು ಕರ್ನಾಟಕದಲ್ಲಿ ಬೆಂಗಳೂರು, ಕೊಡಗು, ಕಬಿನಿ, ಚಿಕ್ಕಮಗಳೂರು ಮತ್ತು ಹಂಪಿಗಳನ್ನು ಒಳಗೊಂಡ ಖಾಸಗಿ ಚಾರ್ಟರ್ ಸೇವೆಗಳನ್ನು ಪ್ರಾರಂಭಿಸಿತು.

ಇನ್ನು ಬ್ಲೇಡ್ ಇಂಡಿಯಾದ ಎಂಡಿ, ಅಮಿತ್ ಕರ್ನಾಟಕವು ಅತ್ಯಂತ ಸುಂದರವಾದ ಸ್ಥಳಗಳನ್ನು ಹೊಂದಿದೆ. ಇದು ಅದರ ಹೆಗ್ಗಳಿಗೆ ಎಂದರೆ ತಪ್ಪಾಗಲಾರದು. ಆದರೆ ಅವುಗಳಿಗೆ ಹೋಗುವುದು ಸ್ವಲ್ಪ ಕಷ್ದ ಕೆಲಸ ಎನ್ನಬಹುದು. ಬೇಂಗಳೂರಿನಿಂದ ಹಲವಾರು ಸ್ಥಳಗಳಿಗೆ ಸುಮಾರು 6 ರಿಂದ 7 ಗಂಟೆ ಪ್ರಯಾಣ ಮಾಡಬೇಕು ಈ ಅವಧಿಯಲ್ಲಿ ಅವರು ಬಹಳಷ್ಟು ಎಂಜಾಯ್ ಮಾಡಬಹುದು.

: ಚಳಿಗಾಲದಲ್ಲಿ ನೀವು ಪ್ರವಾಸ ಹೋಗಬೇಕು ಅಂದುಕೊಂಡಿದ್ದರೆ ಮಿಸ್ ಮಾಡದೇ ಈ ಸ್ಥಳಗಳಿಗೆ ಹೋಗಿ

ಹಾಗಾಗಿ ಈಗ ಜನರು ಚಿಕ್ಕ ಮತ್ತು ಸಿಹಿ ಟ್ರಿಪ್ ಆನಂದಿಸಲು ಚಾಪರ್ ಸೇವೆಯನ್ನು ನೀಡಲಾಗುತ್ತಿದೆ ಎಂದಿದ್ದಾರೆ. ಇನ್ನು ನೀವು ಸಹ ಈ ವೀಕೆಂಡ್​ನಲ್ಲಿ ಕಬಿನಿಗೆ ಅಥವಾ ಕೊಡಗಿಗೆ ಚಾಪರ್​ನಲ್ಲಿ ಹೋಗಬೇಕು


Spread the love

About Laxminews 24x7

Check Also

ಹೆಬ್ಬಾಳಕರ್ ಮನೆಗೆ ಭೇಟಿ ನೀಡಿ ಕೃತಜ್ಞತೆ ಸಲ್ಲಿಸಿದ ನೇಹಾ ಪೋಷಕರು

Spread the loveಬೆಳಗಾವಿ: ಮಗಳ ಹತ್ಯೆಯಾದ ಸಂದರ್ಭದಲ್ಲಿ ಮನೆಗೆ ಆಗಮಿಸಿ ಸಾಂತ್ವನ ಹೇಳಿದ್ದಲ್ಲದೆ ಸರ್ಕಾರದಿಂದ ಆಗಬೇಕಾದ ಕೆಲಸಗಳನ್ನು ಅತ್ಯಂತ ತ್ವರಿತವಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ