Breaking News

ಅನಿವಾರ್ಯವಾಗಿ ಲಖನ್ ಜಾರಕಿಹೋಳಿ ಅವರನ್ನು ಸ್ಪರ್ದೆಗೆ ನಿಲ್ಲಿಸಬೇಕಾಯಿತು. ರೊಕ್ಕದ ದರ್ಪ ಮತ್ತು ಗುಂಡಾಗಿರಿ ರಾಜಕಾರಣದ ಡಿಕೆಶಿವಕುಮಾರ್ ಇಂದ ನಮಗೆ ಅನ್ಯಾಯ

Spread the love

ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ಲಖನ್ ಜಾರಕಿಹೋಳಿ ಪರ ರಮೇಶ್ ಜಾರಕಿಹೋಳಿ ಪ್ರಚಾರ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.ಅಥಣಿ ಪಟ್ಟಣದಲ್ಲಿ ಜನಪ್ರತಿನಿಧಿಗಳ ಸಭೆ ನಡೆಸಿ ಮಾತನಾಡಿದ ಅವರು ಈ ಚುನಾವಣೆಯ ಬಳಿಕ ನಾನು ಮಂತ್ರಿ ಆಗುತ್ತೇನೆ ಎಂದು ಬಹಳಷ್ಟು ಜನರು ಹೇಳುತ್ತಿದ್ದಾರೆ ಆದರೆ ನಾನು ಮಂತ್ರಿ ಆಗಲಿ ಬಿಡಲಿ ಈ ಭಾಗದ ನೀರಾವರಿ ಕೆಲಸಗಳನ್ನು ಪೂರ್ಣ ಮಾಡುತ್ತೆನೆ.

ಸಿ ಎಮ್ ಬಸವರಾಜ ಬೊಮ್ಮಾಯಿ ಮೂವತ್ತು ವರ್ಷಗಳಿಂದ ನನ್ನ ಸ್ನೇಹಿತರಾಗಿದ್ದಾರೆ ಆದ್ದರಿಂದ ಕೂಡ ಮುಖ್ಯಮಂತ್ರಿ ಇದ್ದಂತೆ ರಾಜ್ಯದಲ್ಲಿ ಇಂದು ನಾನು ಪ್ರಮುಖ ನಾಯಕನಾಗಲು ಅಥಣಿ ಜನರು ಕೊಟ್ಟ ಬೆಂಬಲ ದೊಡ್ಡದು. 2018 ರ ಚುನಾವಣೆಯಲ್ಲಿ ಅಥಣಿ ಜನ ಮಹೇಶ್ ಕುಮಠಳ್ಳಿ ಅವರನ್ನು ಬೆಂಬಲಿಸಿದ್ದರಿಂದ ನಾನು ರಾಜ್ಯದಲ್ಲಿ ಗುರುತಿಸಲ್ಪಟ್ಟೆ. ಸದ್ಯಕ್ಕೆ ಪಕ್ಷದ ವರಿಷ್ಠರು ನನಗೆ ಇನ್ನೂ ಹೇಳಿಲ್ಲ ಅವರ ನೀರ್ಣಯದ ಬಳಿಕ ನಾನು ಪ್ರಾಶಸ್ತ್ಯದ ಮಾತನಾಡುತ್ತೇನೆ.

ಉಳಿದವರು ಹೇಳಿದ್ದಾರೆಂದು ನಾನು ಹೇಳುವದಿಲ್ಲ.ಒಂದು ಮತ ಮಹಂತೇಶ್ ಕವಟಗಿಮಠ ಮತ್ತು ಎರಡನೆಯ ಮತ ಲಖನ್ ಜಾರಕಿಹೋಳಿ ಹೀಗೆ ಇಬ್ಬರಿಗೂ ಮತ ನೀಡಬೇಕು. ರಾಯಭಾಗದ ವಿವೇಕರಾವ್ ಪಾಟೀಲ ಅವರಿಗೆ ಕಳೆದಬಾರಿ ಟಿಕೆಟ್ ನೀಡದೆ ಸಿದ್ದರಾಮಯ್ಯ ಕುರುಬ ಸಮಾಜಕ್ಕೆ ಅನ್ಯಾಯ ಮಾಡಿದ್ದಾರೆ.ನಾನು ಬಿಜೆಪಿ ಸೇರಿದರು ಕೂಡ ಅವರು ಕಾಂಗ್ರೆಸ್ ಬೆಂಬಲಿಸಿದರು.

ಅನಿವಾರ್ಯವಾಗಿ ಲಖನ್ ಜಾರಕಿಹೋಳಿ ಅವರನ್ನು ಸ್ಪರ್ದೆಗೆ ನಿಲ್ಲಿಸಬೇಕಾಯಿತು.
ರೊಕ್ಕದ ದರ್ಪ ಮತ್ತು ಗುಂಡಾಗಿರಿ ರಾಜಕಾರಣದ ಡಿಕೆಶಿವಕುಮಾರ್ ಇಂದ ನಮಗೆ ಅನ್ಯಾಯವಾಗಿ ನಾವು ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿದ್ದೇವೆ.ಬೆಳಗಾವಿ ಭಾಗದ ಜನರಿಗೆ ಅನ್ಯಾಯವಾಗಿದೆ ಆದ್ದರಿಂದ ಬಂಡಾಯ ಎದ್ದು ಹೊರಗೆ ಬಂದಿದ್ದೇವೆ.

ಈ ಬೇಸಿಗೆಯಲ್ಲಿ ಕೃಷ್ಣಾ ನದಿ ಬತ್ತಿದ್ದರೆ ಜನರು ನಮ್ಮನ್ನು ಕಲ್ಲಿನಿಂದ ಹೊಡೆಯುತ್ತಿದ್ದರು.ಸುದೈವದಿಂದ ಈ ಬಾರಿ ನದಿ ಬತ್ತಿಲ್ಲ.2400 ಕೋಟಿ ಮೊತ್ತದ ಮಹಾರಾಷ್ಟ್ರ ಸರ್ಕಾರದ ಜಾಯಿಂಟ್ ಒಪ್ಪಂದ ಮಾಡಿಕೊಂಡು ನೀರಾವರಿ ಯೋಜನೆಗಳ ಕಾಮಗಾರಿ ಕೈಗೊಳ್ಳಲಿದ್ದೇವೆ.
ಮಹೇಶ್ ಕುಮಠಳ್ಳಿ, ಲಕ್ಷ್ಮಣ ಸವದಿ ಮತ್ತು ನಾನು ಇಲ್ಲಿದ್ದೇವೆ ನಮ್ಮ ಮತಗಳು ಹೊರಗೆ ಹೋಗುವದಿಲ್ಲ.ಕಾಂಗ್ರೆಸ್ ಸೋಲಿಸುವದೆ ನಮ್ಮ ಗುರಿ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ವರದಕ್ಷಿಣೆ ಕಿರುಕುಳ ಆರೋಪ, ಐಎಸ್‌ಡಿ ಡಿವೈಎಸ್‌ಪಿ ವಿರುದ್ಧ ಎಫ್ಐಆರ್

Spread the love ಬೆಂಗಳೂರು : ಡಿವೈಎಸ್‌ಪಿಯೊಬ್ಬರ ವಿರುದ್ಧ ಪತ್ನಿಗೆ ವರದಕ್ಷಿಣೆ ಕಿರುಕುಳ ನೀಡಿದ ಆರೋಪ ಕೇಳಿ ಬಂದಿದೆ. 41 ವರ್ಷದ ಮಹಿಳೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ