ಬೆಂಗಳೂರು: ಕಳೆದವಾರ ಎಸಿಬಿ ದಾಳಿಗೆ ಒಳಗಾಗಿದ್ದ ಸಕಾಲ ಸೇವೆ ಆಡಳಿತಾಧಿಕಾರಿ ಎಲ್.ಸಿ ನಾಗರಾಜು ಪತ್ನಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತೀವ್ರ ಹೃದಯಾಘಾತಕ್ಕೀಡಾಗಿದ್ದ ನಾಗರಾಜು ಪತ್ನಿ ಅವರನ್ನು ಬೆಂಗಳೂರಿನ ಯಶವಂತಪುರದ ಕೊಲಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ನವೆಂಬರ್ 24ರಂದು ನಾಗರಾಜು ಮನೆ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಅಪಾರಪ್ರಮಾಣದ ಚಿನ್ನಾಭರಣ, 43,00,000 ಲಕ್ಷ ನಗದು ಪತ್ತೆಯಾಗಿತ್ತು. ನೆಲಮಂಗಲದಲ್ಲಿ ಕೈಗಾರಿಕಾ ಕಟ್ಟಡ, 2 ಮನೆ, 11 ಎಕರೆ ಜಮೀನು, ವಿವಿಧ ಕಂಪನಿಯ ಮೂರು ಐಷಾರಾಮಿ ಕಾರುಗಳು ಪತ್ತೆಯಾಗಿದ್ದವು.
Laxmi News 24×7