ಮನೆ ಕಟ್ಟುವ ಸಾಮಗ್ರಿಗಳನ್ನು ಕಳ್ಳತನ ಮಾಡಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ಬೆಳಗಾವಿಯ ಗ್ರಾಮೀಣ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹೌದು ಹಿರಿಯ ಪೆÇಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಬೆಳಗಾವಿ ಗ್ರಾಮೀಣ ಠಾಣೆ ಸಿಪಿಐ ಸುನೀಲಕುಮಾರ ನಂದೇಶ್ವರ ನೇತೃತ್ವದಲ್ಲಿ ದಾಳಿ ಮಾಡಿ, ಟಿಪ್ಪು ಸುಲ್ತಾನ್ ನಗರ ನಗರ ಕ್ರಾಸ್ ಹತ್ತಿರ ಐದು ಜನರನ್ನು ವಾಹನ ಹಾಗೂ ಕಳುವಾದ ಮಾಲು ಸಮೇತ ವಶ ಪಡಿಸಿಕೊಂಡಿದ್ದಾರೆ. ಆರೋಪಿತರಿಂದ 4 ಲಕ್ಷ 80 ಸಾವಿರ ಮೌಲ್ಯದ ಬ್ರಾಸ್ ಬಾರ್‍ಗಳು, 1 ಲಕ್ಷ ಮೌಲ್ಯದ ಟಾಟಾ ಎಸ್ ಗಾಡಿ ಜಪ್ತ ಮಾಡಲಾಗಿದೆ. ದಾಳಿಯಲ್ಲಿ ಗ್ರಾಮೀಣ ಠಾಣೆ ಎಎಸ್‍ಐ ಬಿಎ ಚೌಗಲಾ, ಸಿಎಚ್‍ಸಿ ಎಮ್.ಟಿ. ಕೋಟಬಾಗಿ, ಸಿಪಿಸಿಗಳಾದ ವಾಯ್.ವಾಯ್. ತಳೇವಾಡ, ಪಿ.ಎಸ್.ಪವಾರ, ಎಸ್.ಎಮ್.ಸಿಂದಗಿ ಭಾಗಿಯಾಗಿದ್ದರು. ಆರೋಪಿಗಳನ್ನು ಪತ್ತೆ ಮಾಡಿದ ತಂಡಕ್ಕೆ ನಗರ ಪೆÇಲೀಸ್ ಆಯುಕ್ತರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Laxmi News 24×7