Breaking News

ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಹೇಗೆ ಎಂಬ ಚಿಂತೆನಾ…? ನೋ..ವರಿ ಈ ವೈರಲ್ ವಿಡಿಯೋ ನೋಡಿ

Spread the love

ನಮ್ಮ ದೇಶ, ರಾಜ್ಯದಲ್ಲಿ ಹವಾಮಾನ ಸರಿಯಿಲ್ಲ. ಚಳಿಗಾಲದ ಋತುವಿನಲ್ಲೂ ಮಳೆಗಾಲದಂತೆ ಆಗಿದೆ. ಹೀಗಾಗಿ ಇಂತಹ ವಾತಾವರಣದಿಂದ ಆರೋಗ್ಯ ಹದಗೆಡುತ್ತಿರುತ್ತದೆ. ಅದಕ್ಕಾಗಿ ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ. ಆಹಾರದಲ್ಲಿ ಬೆಳ್ಳುಳ್ಳಿಯನ್ನು ಉಪಯೋಗಿಸಿದ್ರೆ, ರೋಗನಿರೋಧಕ ಶಕ್ತಿ ಬಲಪಡಿಸುವಲ್ಲಿ ಇದು ಸಹಾಯ ಮಾಡುತ್ತದೆ.

ಪ್ರತಿಯೊಂದು ಭಾರತೀಯ ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ ಕಂಡು ಬರುತ್ತದೆ. ಅದರಲ್ಲೂ ನಾನ್ ವೆಜ್ ಪದಾರ್ಥ ತಯಾರಿಸಲಂತೂ ಬೆಳ್ಳುಳ್ಳಿ ಇಲ್ಲದಿದ್ರೆ ಅಡುಗೆಯೇ ಅಪೂರ್ಣ. ಅಂದ ಹಾಗೆ, ನೀವು ನಿಯಮಿತವಾಗಿ ಅಡುಗೆ ಮಾಡುತ್ತಿದ್ದರೆ, ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವುದು ಎಷ್ಟು ಕಷ್ಟ ಎಂಬುದು ನಿಮಗೆ ತಿಳಿದಿರುತ್ತದೆ. ಇದಕ್ಕೆ ಸಾಕಷ್ಟು ತಾಳ್ಮೆ ಹಾಗೂ ತಂತ್ರ ಕೂಡ ಬೇಕಾಗುತ್ತದೆ.

ಆದರೆ ಚಿಂತಿಸಬೇಡಿ, ಸರಳವಾದ ಅಡುಗೆಮನೆ ಹ್ಯಾಕ್ ಈಗ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ನಿಮ್ಮ ಕೆಲಸವನ್ನು ತುಂಬಾ ಸುಲಭಗೊಳಿಸುತ್ತದೆ. ನೀವು ಪೂರ್ಣ ಗಾತ್ರದ ಬೆಳ್ಳುಳ್ಳಿಯನ್ನು ತೆಗೆದುಕೊಂಡು ಅದನ್ನು ಚಾಕುವಿನಿಂದ ಅಡ್ಡಲಾಗಿ ಕತ್ತರಿಸಬೇಕು. ನಂತರ, ಅದನ್ನು ಉಲ್ಟಾ ಇಟ್ಟು ಚಾಕುವಿನಿಂದ ಮೇಲೆ ಒತ್ತಬೇಕು. ಈಗ ಬೆಳ್ಳುಳ್ಳಿ ಸಿಪ್ಪೆ ತೆಗೆದ್ರೆ ಪೂರ್ಣವಾಗಿ ಹೊರ ಬರುತ್ತದೆ.

ಸದ್ಯ, ಬೆಳ್ಳುಳ್ಳಿ ಸಿಪ್ಪೆ ತೆಗೆಯುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹಲವಾರು ಮಂದಿ ಈ ತಂತ್ರದಿಂದ ಪ್ರಭಾವಿತರಾಗಿದ್ದಾರೆ. ಆದರೆ, ಇನ್ನೂ ಕೆಲವರು ಇದನ್ನು ಎಡಿಟ್ ಮಾಡಲಾಗಿದೆ ಎಂದೆಲ್ಲಾ ಟೀಕಿಸಿದ್ದಾರೆ. ಆದರೆ, ಈ ರೀತಿ ಮಾಡುವುದರಿಂದ ನಿಜವಾಗಿಯೂ ಫಲಿತಾಂಶ ಚೆನ್ನಾಗಿ ಬರುತ್ತದೆ ಎಂದೆನಿಸಬೇಕೆಂದ್ರೆ ನೀವು ಪ್ರಯತ್ನಿಸಿ..


Spread the love

About Laxminews 24x7

Check Also

ರಾಜ್ಯದಲ್ಲಿ ವಿವಿಧ ಬೆಳೆಗಳ ಬಿತ್ತನೆ ನಡೆಯುತ್ತಿದ್ದು, ರಾಸಾಯನಿಕ ಗೊಬ್ಬರದ ಬೇಡಿಕೆ ಹೆಚ್ಚಿದೆ. ಈ ಬಗ್ಗೆ ಕೃಷಿ ಸಚಿವ ಚಲುವರಾಯಸ್ವಾಮಿ ಸ್ಪಷ್ಟನೆ

Spread the loveಮೈಸೂರು: ಪ್ರಸಕ್ತ ಸಾಲಿಗೆ ರಾಸಾಯನಿಕ ಗೊಬ್ಬರದ ಕೊರತೆಯಿಲ್ಲ. ಆದರೆ, ಕೇಂದ್ರ ಸರ್ಕಾರ ಮುಂದಿನ ವರ್ಷದಿಂದ ಯೂರಿಯಾ ಪೂರೈಕೆಯನ್ನು ಶೇ.50ರಷ್ಟು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ