ಬೆಂಗಳೂರು: ಸಿಂದಗಿ ಉಪಚುನಾವಣೆಯಲ್ಲಿ ಸೋತರೂ ನಮಗೆ ಸಮಾಧಾನವಿದೆ. ಹಾನಗಲ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವು ಖಚಿತ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಉಪಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚು ಮತ ಗಳಿಸಿದೆ.
ಸಿಂದಗಿಯಲ್ಲಿ ಸೋತರೂ ನಮಗೆ ಸಮಾಧಾನವಿದೆ. ಕಳೆದ ಚುನಾವಣೆಗೆ ಹೋಲಿಸಿದರೆ ಕಾಂಗ್ರೆಸ್ ಗೆ ಹೆಚ್ಚು ಮತ ಬಂದಿದೆ. ರಾಜ್ಯದ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ಹೇಳಿದರು.ಜೆಡಿಎಸ್ ಮತಗಳನ್ನು ಬಿಜೆಪಿಯವರು ಪಡೆದಿದ್ದಾರೆ. ಸಿಂದಗಿಯಲ್ಲಿ ಕಾಂಗ್ರೆಸ್ 3ನೇ ಸ್ಥಾನದಲ್ಲಿತ್ತು ಆದರೂ ಗೆಲ್ಲುವ ವಿಶ್ವಾಸವಿತ್ತು. ಕೊಂಚ ಹಿನ್ನಡೆಯಾಗಿದೆ ಆದರೆ ಉತ್ತಮ ಮಟ್ಟಕ್ಕೆ ಬಂದಿದ್ದೇವೆ. ಇನ್ನು ಹಾನಗಲ್ ನಲ್ಲಿ ಶ್ರೀನಿವಾಸ್ ಮಾನೆ ಗೆಲುವು ಖಚಿತ. ಹಾನಗಲ್ ನ ಎಲ್ಲಾ ಸ್ವಾಭಿಮಾನಿ ಮತದಾರರಿಗೆ ನನ್ನ ಸೆಲ್ಯೂಟ್. ಬಿಜೆಪಿ ನಾಯಕರು ಎಷ್ಟೇ ಒತ್ತಡ, ಆಮಿಷಗಳನ್ನು ಒಡ್ದಿದರೂ ಮತದಾರರು ತಮ್ಮ ಸ್ವಾಭಿಮಾನಕ್ಕೆ ಬೆಲೆ ಕೊಟ್ಟು ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದ್ದಾರೆ. ಮತದಾರರಿಗೆ ಧನ್ಯವಾದಗಳು ಎಂದು ತಿಳಿಸಿದರು.