ಎಂ.ಕೆ.ಹುಬ್ಬಳ್ಳಿ :ಕಾಲು ಜಾರಿ ಕೆರೆಯಲ್ಲಿ ಮುಳುಗಿ ಇಬ್ಬರು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಕಿತ್ತೂರು ಎಂ.ಕೆ.ಹುಬ್ಬಳ್ಳಿ ಪಟ್ಟಣದ ಹೊರ ವಲಯದಲ್ಲಿ ನಡೆದಿದೆ.ಬೆಳ್ಳಂ ಬೆಳಿಗ್ಗೆ ಬಹಿರ್ದೆಸೆಗೆ ಕೆರೆ ಕಡೆಗೆ ಹೋಗಿದ್ದ ಇಬ್ಬರು ಕಾಲು ಜಾರಿ ನೀರಿನಲ್ಲಿ ಬಿದ್ದಿದ್ದಾರೆ.
ಈ ವೇಳೆ ಈಜಲು ಬಾರದೇ ಇಬ್ಬರು ನೀರಿನಲ್ಲಿಯೇ ಮುಳುಗಿದ್ದು. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸ್ಥಳಿಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಆ ಶೋಧ ಕಾರ್ಯ ಮುಂದುವರಿಸಿದ್ದಾರೆ. ಓರ್ವ ವ್ಯಕ್ತಿಯ ಶವವನ್ನು ನೀರಿನಿಂದ ತೆಗೆಯಲಾಗಿದ್ದು. ಮೃತ ವ್ಯಕ್ತಿ ಗೋಕಾಕ್ ತಾಲೂಕಿನ ಕೊಣ್ಣೂರು ಗ್ರಾಮದ ಕಾಂತೇಶ ಬಡಿಗೇರ(25) ಎಂದು ಗುರುತಿಸಲಾಗಿದೆ. ಇನ್ನೊರ್ವ ಬಾಲಕನ ಶವಕ್ಕಾಗಿ ಶೋಧ ಕಾರ್ಯ ಮುಂದುವರಿಸಲಾಗಿದೆ.
ಸ್ಥಳಕ್ಕೆ ಕಿತ್ತೂರು ಠಾಣೆ ಪಿಎಸ್‍ಐ ದೇವರಾಜ್ ಉಳ್ಳಾಗಡ್ಡಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ