Breaking News

ವಿಧಾನಸೌಧಕ್ಕೆ ಬೀಗ ಜಡಿದು ಪ್ರಚಾರಕ್ಕೆ ಬಂದ ಸಚಿವರು ಎಂಬ ಟೀಕೆಗೆ ಸಿಎಂ ತಿರುಗೇಟು

Spread the love

ವಿಜಯಪುರ: ವಿಧಾನಸೌಧಕ್ಕೆ ಬೀಗ ಜಡಿದು ಸಚಿವರು ಪ್ರಚಾರಕ್ಕೆ ಬರುತ್ತಿದ್ದಾರೆ ಎಂದು ಡಿ.ಕೆ.ಶಿವಕುಮಾರ್‌ ಮಾಡಿರುವ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ, ಆ ಥರ ಏನಿಲ್ಲಾ, ಎರಡೆರಡು ಮೂರು ಮೂರು ದಿನ ನಮ್ಮ ಸಚಿವರು ಬಂದು-ಹೋಗಿ ಮಾಡ್ತಿದ್ದಾರೆ. ಅವರು ಹಿಂದೆ ಏನೆಲ್ಲಾ ಮಾಡಿದ್ದಾರೆ ಎಂಬುದು ನಮಗೂ ಗೊತ್ತಿದೆ. ನಾನು ಮಂತ್ರಿಗಳಿಗೆ ಏನು ಸೂಚನೆ ಕೊಡಬೇಕೋ ಕೊಟ್ಟಿದೇನೆ, ಯಾವುದೇ ಕೆಲಸಗಳೂ ನಿಂತಿಲ್ಲ. ಎಂದಿದ್ದಾರೆ.

ಪ್ರಾದೇಶಿಕ ಪಕ್ಷವನ್ನು ಬಿಜೆಪಿ, ಕಾಂಗ್ರೆಸ್ ಮುಗಿಸುತ್ತವೆ ಎಂಬ ದೇವೇಗೌಡರ ಹೇಳಿಕೆ ವಿಚಾರ ಮಾತನಾಡಿ, ಜೆಡಿಎಸ್ ಅನ್ನು ಮುಗಿಸುವ ಪ್ರಶ್ನೆ ಇಲ್ಲ. ನಮ್ಮ ಪಕ್ಷದ ಸಂಘಟನೆ ಮಾತ್ರ ನಾವು ಮಾಡುತ್ತಿದ್ದೇವೆ. ಇನ್ನೊಂದು ಪಕ್ಷದ ಕಡೆಗೆ ನಾವು ತಿರುಗಿಯೂ ನೋಡೊದಿಲ್ಲ. ಜೆಡಿಎಸ್ ಪರವಾಗಿ ಬಿಜೆಪಿ ಹಣ ಹಂಚಿಕೆ ಎಂದು ಜಮೀರ್ ಮಾಡಿರುವ ಆರೋಪ ವಿಪರೀತ ಕಲ್ಪನೆ ಅಷ್ಟೆ. ಅದಕ್ಕೆ ಯಾವುದೂ ಆಧಾರವಿಲ್ಲ ಎಂದರು.


Spread the love

About Laxminews 24x7

Check Also

ಹಠಾತ್​ ಸಾವು ಅಧಿಸೂಚಿತ ಕಾಯಿಲೆ, ಮರಣೋತ್ತರ ಪರೀಕ್ಷೆ ಕಡ್ಡಾಯ: ಸಚಿವ ದಿನೇಶ್​ ಗುಂಡೂರಾವ್

Spread the loveಬೆಂಗಳೂರು: ಕೋವಿಡ್​​ ಲಸಿಕೆಯಿಂದ ಹೃದಯಾಘಾತ ಸಂಭವಿಸುತ್ತಿಲ್ಲ ಎಂಬುದು ವರದಿಯಲ್ಲಿ ಗೊತ್ತಾಗಿದೆ. ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರನಾಥ್ ನೇತೃತ್ವದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ