Breaking News

ಗೋವಾ ಜನರಿಗೆ ಕ್ಯಾಸಿನೊದಲ್ಲಿ ಜೂಜು ನಿರ್ಬಂಧ: ತೀರ್ಪು ಕಾಯ್ದಿರಿಸಿದ ಉಚ್ಛ ನ್ಯಾಯಾಲಯ

Spread the love

ಪಣಜಿ: ಗೋವಾ ರಾಜ್ಯದ ಜನರಿಗೆ ಕ್ಯಾಸಿನೊ ಪ್ರವೇಶಕ್ಕೆ ಪರವಾನಗಿ ನೀಡುವ ಕುರಿತ ಅರ್ಜಿಗೆ ಸಂಬಂಧಿಸಿದಂತೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ವಿಚಾರಣೆ ಪೂರ್ಣಗೊಂಡಿದ್ದು ಈ ಪ್ರಕರಣದ ತೀರ್ಪನ್ನು ನ್ಯಾಯಾಲಯವು ಕಾಯ್ದಿರಿಸಿದೆ.

ಗೋವಾ ರಾಜ್ಯದ ಜನತೆಗೆ ಕ್ಯಾಸಿನೊಕ್ಕೆ ಪ್ರವೇಶಾವಕಾಶ ಲಭಿಸುತ್ತಿಲ್ಲ. ಈ ಬೇಧಭಾವ ಸರಿಯಲ್ಲ ಎಂದು ಶುಕ್ರ ಉಜಗಾಂವಕರ್ ರವರು ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಖಂಡಪೀಠದಲ್ಲಿ ಅರ್ಜಿ ಸಲ್ಲಿಸಿದ್ದರು.

ದಮನ್ ಮತ್ತು ದೀವ್ ಜೂಜು ಖಾಯ್ದೆಗೆ ಅರ್ಜಿದಾರ ಉಜಗಾಂವಕರ್ ರವರು ಆಕ್ಷೇಪವೆತ್ತಿದ್ದರು. ಖಾಯ್ದೆಯನ್ನು ತಿದ್ದುಪಡಿ ಮಾಡಿ ಕ್ಯಾಸಿನೊಕ್ಕೆ ಕೇವಲ ಹೊರ ರಾಜ್ಯದ ಜನರಿಗೆ ಮಾತ್ರ ಜೂಜು ಆಟವಾಡಲು ಪರವಾನಗಿ ನೀಡಲಾಗುತ್ತಿದೆ. ಗೋವಾದ ಜನತೆಗೆ ಪರವಾನಗಿ ನೀಡಲಾಗುತ್ತಿಲ್ಲ. ಇದು ಕಲಂ 14ರ ಸಮಾನ ಹಕ್ಕು ಅಧಿಕಾರದ ಉಲ್ಲಂಘನೆಯಾಗುತ್ತದೆ ಎಂದು ನ್ಯಾಯಾಲಯದಲ್ಲಿ ಅರ್ಜಿದಾರರು ಮನವಿ ಮಾಡಿದ್ದರು. ಈ ಕುರಿತಂತೆ ವಿಚಾರಣೆ ನಡೆಸಿದ ನ್ಯಾಯಾಲಯವು ಈ ಪ್ರಕರಣದ ತೀರ್ಪನ್ನು ಕಾಯ್ದಿರಿಸಿದೆ.

ಗೋವಾ ಸರ್ಕಾರವು ಖಾಯ್ದೆಯ ತಿದ್ದುಪಡಿ ಮಾಡಿರುವುದರಿಂದ ಗೋವಾ ರಾಜ್ಯದ ಜನರು ಕ್ಯಾಸಿನೊಕ್ಕೆ ತೆರಳಿ ಜೂಜು ಆಡುವುದಕ್ಕೆ ನಿರ್ಬಂಧ ಹೇರಲಾಗಿತ್ತು


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ