Breaking News

ಮುಂದೊಂದು, ಹಿಂದೊಂದು ನಂಬರ್ – ನಕಲಿ ಪೊಲೀಸ್ ವ್ಯಾನ್ ಕಂಡು ತಬ್ಬಿಬ್ಬಾದ ಜನ

Spread the love

ಗದಗ: ನಗರದಲ್ಲಿ ನಕಲಿ ಪೊಲೀಸ್ ವಾಹನ ಓಡಾಟ ಕಂಡು ಗದಗ-ಬೆಟಗೇರಿ ಅವಳಿ ನಗರದ ಜನರು ಗೊಂದಲಕ್ಕೀಡಾದ ಘಟನೆ ನಡೆದಿದೆ. ನಗರದ ಪಂಡಿತ್ ಪುಟ್ಟರಾಜ ಗವಾಯಿಗಳ ಬಸ್ ನಿಲ್ದಾಣ ರಸ್ತೆಯಲ್ಲಿ ನಕಲಿ ಪೊಲೀಸ್ ವಾಹನ ನಿಂತಿದೆ.

ಈ ಬೊಲೆರೊ ವಾಹನಕ್ಕೆ ಮುಂದೊಂದು ನಂಬರ್, ಹಿಂದೊಂದು ಎರಡೆರಡು ನಂಬರ್ ಪ್ಲೇಟ್ ಇರುವುದನ್ನು ಅನೇಕರು ಗಮನಿಸಿದ್ದಾರೆ. ನೋಡಿದ ಜನರಿಗೆ ಕೆಲಕಾಲ ಗೊಂದಲ ಸೃಷ್ಟಿಯಾಗಿದೆ. ವಾಹನಕ್ಕೆ ಎರಡು ನಂಬರ್ ಇರಲ್ವಲ್ಲಾ, ಏನಿದು ಅಂತ ತಲೆಕೆಡಿಸಿಕೊಂಡಿದ್ದಾರೆ. ನಂತರ ಹಿರಿಯ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.
ಸ್ಥಳಕ್ಕೆ ಬಂದ ನಗರ ಠಾಣೆಯ ಪೊಲೀಸರು ಪರಿಶೀಲನೆ ನಡೆಸಿದರು. ಆಗ ಪೊಲೀಸ್ ಸಿಬ್ಬಂದಿ ಒಂದು ಕ್ಷಣ ಕಂಗಾಲಾಗಿದ್ದರು. ಪರಿಶೀಲಿಸಿದಾಗ ವಾಸ್ತವಿಕತೆ ಬಯಲಾಗಿದೆ. ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ “ಕ್ಷೇತ್ರಪತಿ” ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಈ ಚಿತ್ರದ ಪೊಲೀಸ್ ಅಧಿಕಾರಿಯ ಪಾತ್ರಕ್ಕೆ ಈ ಬೊಲೆರೋ ವಾಹನ ಬಳಸಲಾಗಿತ್ತು ಎಂದು ತಿಳಿದು ಬಂದಿದೆ. ಪರವಾನಿಗೆ ಪತ್ರ ನೋಡಿ ನಂತರ ಶೂಟಿಂಗ್ ಸ್ಥಳ ಬಿಟ್ಟು ಎಲ್ಲಂದರಲ್ಲಿ ಓಡಾಡದಂತೆ ವಾಹನ ಚಾಲಕನಿಗೆ ವಾರ್ನ್ ಮಾಡಿ ಬಿಟ್ಟು ಕಳುಹಿಸಿದ್ದಾರೆ.

Spread the love

About Laxminews 24x7

Check Also

ಆನ್‌ಲೈನ್ ಗೇಮಿಂಗ್ ಪ್ರಚಾರ-ನಿಯಂತ್ರಣ ಕಾಯಿದೆ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ: ಆ.30ಕ್ಕೆ ವಿಚಾರಣೆ

Spread the love ಬೆಂಗಳೂರು: ಹಣವನ್ನು ಪಣಕ್ಕಿಟ್ಟು ಆಡುವಂತಹ ಆನ್‌ಲೈನ್​ ಗೇಮ್​ಗಳಿಗೆ ನಿಷೇಧ ಹೇರುವುದಕ್ಕೆ ಅವಕಾಶ ಕಲ್ಪಿಸುವ ಆನ್‌ಲೈನ್ ಗೇಮಿಂಗ್ ಪ್ರಚಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ