Breaking News

‘ನೀವು ಬಂದು ಲೈವ್​ ನೋಡಬೇಕು’; ಅಂಜಿಕ್ಯಾ ರಹಾನೆಗೆ ರಾಜ್​ ಕುಂದ್ರಾ ಹೀಗೆ ಹೇಳಿದ್ರು

Spread the love

ನೀಲಿಚಿತ್ರ ನಿರ್ಮಾಣ ಮಾಡುತ್ತಿದ್ದ ಆರೋಪದ ಮೇಲೆ ಶಿಲ್ಪಾ ಶೆಟ್ಟಿ ಪತಿ ರಾಜ್​ ಕುಂದ್ರಾ ಅವರನ್ನು ಬಂಧಿಸಲಾಗಿದೆ. ಅವರ ಬಂಧನದ ನಂತರದಲ್ಲಿ ಸಾಕಷ್ಟು ಹಳೆಯ ಟ್ವೀಟ್​ಗಳು ವೈರಲ್​ ಆಗಿವೆ. ಅಲ್ಲದೆ, ಈ ಬಗ್ಗೆ ಮೀಮ್​ಗಳು ಕೂಡ ಹರಿದಾಡಿದೆ.

ಟೀಂ ಇಂಡಿಯಾ ಟೆಸ್ಟ್​ ತಂಡದ ಉಪನಾಯಕ ಹಾಗೂ ರಾಜ್​ ಕುಂದ್ರಾ 2012ರಲ್ಲಿ ಟ್ವೀಟ್​ ಮೂಲಕ ಸಂಭಾಷಣೆ ನಡೆಸಿದ್ದರು. ರಾಜ್​ ಬಗ್ಗೆ ರಹಾನೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದರು. ಈ ಟ್ವೀಟ್​ ಈಗ ಸಾಕಷ್ಟು ವೈರಲ್​ ಆಗಿದೆ. ಅಲ್ಲದೆ, ಎಲ್ಲರೂ ಈ ಬಗ್ಗೆ ನಗೆಚಟಾಕಿ ಹಾರಿಸುತ್ತಿದ್ದಾರೆ. ಅಷ್ಟಕ್ಕೂ ರಹಾನೆ ಅವರು ರಾಜ್​ ಕುಂದ್ರಾ ಅವರನ್ನು ಹೊಗಳಿದ್ದೇಕೆ ಎನ್ನುವ ಪ್ರಶ್ನೆಗೆ ಇಲ್ಲಿದೆ ಉತ್ತರ.

ರಹಾನೆ 2012ರಲ್ಲಿ ರಾಜಸ್ಥಾನ್​ ರಾಯಲ್ಸ್​ ಪರ ಆಡುತ್ತಿದ್ದರು. 2019ರವರೆಗೂ ರಹಾನೆ ಆರ್​ಆರ್​ ತಂಡದ ಪರವಾಗಿಯೆ ಆಡಿದ್ದಾರೆ. 2012ರಲ್ಲಿ ಆರ್​ಆರ್​ ತಂಡದ ಸಹ ಮಾಲೀಕರಾಗಿದ್ದರು ರಾಜ್​ ಕುಂದ್ರಾ. ಈ ಅವಧಿಯಲ್ಲಿ ರಹಾನೆ ಮಾಡಿದ ಟ್ವೀಟ್​ ಈಗ ಟ್ರೋಲ್​ ಪೇಜ್​ಗಳಿಗೆ ಆಹಾರವಾಗಿದೆ.

ಟ್ವೀಟ್​ನಲ್ಲೇನಿತ್ತು?

‘ರಾಜ್​ ಕುಂದ್ರಾ ಸರ್​ ನೀವು ಬಹಳ ಉತ್ತಮ ಕೆಲಸ ಮಾಡುತ್ತಿದ್ದೀರಿ’ ಎಂದು ರಹಾನೆ ಹೇಳಿದ್ದರು. ‘ರಹಾನೆ ಅವರೇ ಧನ್ಯವಾದಗಳು. ನೀವು ಒಮ್ಮೆ ಬಂದು ಲೈವ್​ ನೋಡಬೇಕು’ ಎಂದು ಉತ್ತರಿಸಿದ್ದಾರೆ ರಾಜ್​. ಇದಕ್ಕೆ ‘ಖಂಡಿತವಾಗಿಯೂ ನೋಡುತ್ತೇನೆ’ ಎನ್ನುವ ಉತ್ತರ ರಹಾನೆ ಕಡೆಯಿಂದ ಬಂದಿದೆ.

 

ಮುಂಬೈ ಪೊಲೀಸರು ಹೇಳಿದ್ದೇನು?

‘ಫೆಬ್ರವರಿ 2021ರಂದು ಕ್ರೈಮ್​ ಬ್ರ್ಯಾಂಚ್​ನಲ್ಲಿ ಪ್ರಕರಣ ದಾಖಲಾಗಿತ್ತು. ನೀಲಿ ಸಿನಿಮಾಗಳನ್ನು ಚಿತ್ರೀಕರಣ ಮಾಡಿ, ಕೆಲ ಆಯಪ್​ಗಳ ಮೂಲಕ ಇದನ್ನು ಅಪ್​ಲೋಡ್​ ಮಾಡಲಾಗುತ್ತಿದೆ ಎನ್ನುವ ಮಾಹಿತಿ ನಮಗೆ ಲಭ್ಯವಾಗಿತ್ತು. ಇಂದು (ಜುಲೈ 19) ನಾವು ರಾಜ್​ ಕುಂದ್ರಾ ಅವರನ್ನು ಬಂಧಿಸಿದ್ದೇವೆ. ಇಡೀ ಪ್ರಕರಣದ ರುವಾರಿ ಅವರೇ ಆಗಿದ್ದಾರೆ. ತನಿಖೆ ಪ್ರಗತಿಯಲ್ಲಿದೆ. ತನಿಖೆ ಪೂರ್ಣಗೊಳ್ಳುವವರೆಗೂ ಏನನ್ನೂ ಹೇಳುವುದಿಲ್ಲ’ ಎಂದು ಮುಂಬೈ ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

About Laxminews 24x7

Check Also

ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ

Spread the love ಕಿರಾವಾಳೆಯ ಗೋರಕ್ಷನಾಥ ಮಠದಲ್ಲಿ ಕಳ್ಳತನ ಖಾನಾಪೂರ ತಾಲೂಕಿನ ಗುಂಜಿ ಬಳಿಯಿರುವ ಕಿರಾವಾಳೆಯ ಪ್ರಸಿದ್ಧ ಗೋರಕ್ಷನಾಥ ಮಠದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ