Breaking News
Home / Uncategorized / ಸತ್ತವರ ಪಟ್ಟಿಯಲ್ಲೆ ಹೆಸರು ದಾಖಲಿಸದೆ ಶವ ನೀಡಿದ ಚಾಮರಾಜನಗರ ಆಸ್ಪತ್ರೆ

ಸತ್ತವರ ಪಟ್ಟಿಯಲ್ಲೆ ಹೆಸರು ದಾಖಲಿಸದೆ ಶವ ನೀಡಿದ ಚಾಮರಾಜನಗರ ಆಸ್ಪತ್ರೆ

Spread the love

ಚಾಮರಾಜನಗರ: ಚಾಮರಾಜನಗರದ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್‌ ದುರಂತದ ಘಟನೆ ಭಾರಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಆದರೆ ಈ ದುರಂತ ಮತ್ತೆ ಮರುಕಳಿಸಿದೆ. ಆಕ್ಸಿಜನ್‌ ಕೊರತೆಯಿಂದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ತಪ್ಪನ್ನು ಮುಚ್ಚಿಹಾಕಲು ರಾತ್ರೋರಾತ್ರಿ ಸಂಬಂಧಿಕರಿಗೆ ಶವ ಕೊಟ್ಟು ಕೈ ತೊಳೆದುಕೊಂಡಿದ್ದಾರೆ ಆಸ್ಪತ್ರೆ ಅಧಿಕಾರಿಗಳು.

36 ವರ್ಷ ವಯಸ್ಸಿನ ಕೊಳ್ಳೇಗಾಲ ತಾಲೋಕು ಮುಡಿಗುಂಡಂ ಗ್ರಾಮದ ಜಯಶಂಕರ್ ಮೃತಪಟ್ಟಿದ್ದು, ಅಚ್ಚರಿಯ ಸಂಗತಿ ಎಂದರೆ ಆಕ್ಸಿಜನ್ ಕೊರತೆಯಿಂದ ಮೃತಪಟ್ಟವರ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿಲ್ಲ. ಮಧ್ಯರಾತ್ರಿಯೇ ಶವ ತೆಗೆದುಕೊಂಡು ಹೋಗುವಂತೆ ಕುಟುಂಬಸ್ಥರಿಗೆ ಹೇಳಿದ್ದಾರೆ ವೈದ್ಯರು. ಮಧ್ಯರಾತ್ರಿ ಏನು ಮಾಡಬೇಕು ಎಂದು ತಿಳಿಯದ ಕುಟುಂಬದವರು 2500 ರೂಪಾಯಿ ನೀಡಿ ಆಂಬುಲೆನ್ಸ್‌ನಲ್ಲಿ ಶವ ತೆಗೆದುಕೊಂಡು ಹೋಗಿದ್ದಾರೆ. ಕುಟುಂಬದ ಆಧಾರಸ್ತಂಭವಾಗಿದ್ದ ಪತಿಯನ್ನು ಕಳೆದುಕೊಂಡು ಪತ್ನಿ ಕಣ್ಣೀರು ಸುರಿಸುತ್ತಿದ್ದರೆ, ಅಪ್ಪನ ಮೃತ ಶರೀರ ನೋಡಿ ಇಬ್ಬರು ಪುಟಾಣಿ ಮಕ್ಕಳ ಆಕ್ರಂದನ ಮುಗಿಲುಮುಟ್ಟಿತ್ತು.

ಆಕ್ಸಿಜನ್ ಕೊರತೆಯಿಂದ ಮೃತಪಟ್ಟಿದ್ದರೂ ನಮಗೆ ಯಾವುದೇ ಪರಿಹಾರ ನೀಡಿಲ್ಲ. ನನ್ನ ಪತಿಯೇ ಕುಟುಂಬದ ಆಧಾರಸ್ತಂಭವಾಗಿದ್ದರು. ನನ್ನ ಇಬ್ಬರು ಹೆಣ್ಣು ಮಕ್ಕಳು ಹಾಗು ಅತ್ತೆ ಮಾವ ಅವರನ್ನು ಹೇಗೆ ಸಾಕಲಿ ಎಂದು ಜಯಶಂಕರ ಅವರ ಪತ್ನಿ ಸಿದ್ದರಾಜಮ್ಮ ಕಣ್ಣೀರು ಹಾಕುತ್ತಿದ್ದಾರೆ.

ನಮ್ಮಪ್ಪ ಇದ್ದಿದ್ದರೆ ನಾನು ಕೇಳಿದ್ದನ್ನೆಲ್ಲಾ ಕೊಡಿಸ್ತಾ ಇದ್ರು. ಚೆನ್ನಾಗಿ ನೋಡಿಕೊಳ್ತಾ ಇದ್ರು. ಆಕ್ಸಿಜನ್ ಸಿಕ್ಕಿದ್ರೆ ಅಪ್ಪ ಬದುಕ್ತಾ ಇದ್ರು. ಈಗ ಅಮ್ಮ ಒಬ್ಬಳೇ, ಅಮ್ಮ ಹೇಗೆ ಸಾಕ್ತಾಳೆ? ಯುನಿಫಾರಂ ಹೇಗೆ ಕೊಡಿಸ್ತಾಳೆ? ಸ್ಕೂಲ್ ಫೀಸ್ ಹೇಗೆ ಕಟ್ತಾಳೆ? ಆಟೋಗೆ ಹೇಗೆ ದುಡ್ಡು ಕೊಡ್ತಾಳೆ ಎಂದು ಮಗಳು ಪ್ರತೀಕ್ಷಾ ಪ್ರಶ್ನಿಸುತ್ತಿದ್ದಳು. ಈ ಸಾವಿಗೆ ಹೊಣೆ ಯಾರು? ಅನಾಥವಾಗಿರುವ ಕುಟುಂಬಕ್ಕೆ ಸರ್ಕಾರ ಸ್ಪಂದಿಸಬೇಕಿದೆ ಎಂದು ಜನರು ಆಗ್ರಹಿಸುತ್ತಿದ್ದಾರೆ.


Spread the love

About Laxminews 24x7

Check Also

ಎಸ್‌ಐಟಿ ತನಿಖೆಯಲ್ಲಿ ಸರ್ಕಾರ ಮಧ್ಯ ಪ್ರವೇಶ ಮಾಡಲ್ಲ ಎಂದ ಸಿಎಂ

Spread the loveಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಆರೋಪಗಳ ಬಗ್ಗೆ ಎಸ್‌ಐಟಿ ನಡೆಸುತ್ತಿರುವ ತನಿಖೆಯಲ್ಲಿ ಸರ್ಕಾರ ಯಾವುದೇ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ