Breaking News

ಸಂಬಳ ಕೊಡದ್ದಕ್ಕೆ ಪೊಲೀಸರ ವೇಷದಲ್ಲಿ ಮಾಲೀಕನನ್ನೇ ದೋಚಿದರು!

Spread the love

ಸಂಬಳ ಕೊಡದೇ ಸತಾಯಿಸುತ್ತಿದ್ದ ಮಾಲೀಕನನ್ನು ಕೆಲಸಗಾರರು ಪೊಲೀಸರ ಮಾರುವೇಷದಲ್ಲಿ ದರೋಡೆ ಬೆಂಗಳೂರಿನ ಕೆಂಗೇರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.

ಶರತ್ ಶೆಟ್ಟಿ, ಪೂರ್ವಿಕ್ ರಾಜ್, ಮೋಹನ್ ಕುಮಾರ್, ತಪಸ್ ರಾಯ್ ಬಂಧಿತರು.

ಕೊಮ್ಮಘಟ್ಟ ಬಳಿ ಪೊಲೀಸರ ಮಾರುವೇಷದಲ್ಲಿ ಮಾಲೀಕನನ್ನು ದೋಚಲು ಸಂಚು ರೂಪಿಸಿದ ಕೆಲಸಗಾರರು, ರಸ್ತೆ ಮಧ್ಯದಲ್ಲಿ ಅಡ್ಡಗಟ್ಟಿ, ನಾವು ಪೊಲೀಸರು ಲಾಕ್ ಡೌನಲ್ಲಿ ಯಾಕೆ ಓಡಾಡ್ತಿರಿ ಎಂದು ಆವಾಜ್ ಹಾಕಿದ್ದಾರೆ. ವಾಹನ ತಪಾಸಣೆ ಮಾಡುವವರ ರೀತಿ ಬಂದು ಬೈಕ್ ಹಾಗೂ ಬೈಕ್ ನಲ್ಲಿದ್ದ ಮೊಬೈಲ್ ಫೋನ್, ಎಟಿಎಂ ಕಾರ್ಡ್ ಕದ್ದು ಪರಾರಿಯಾಗಿದ್ದರು. ಅಲ್ಲದೇ ಎಟಿಎಂ ಬಳಸಿ 94 ಸಾವಿರ ರೂ. ಹಣ ವರ್ಗಾವಣೆ ಮಾಡಿಕೊಂಡಿದ್ದರು.

ತಪಸ್ ರಾಯ್ ಮಾಲೀಕನ ಬಳಿ ಕೆಲಸ ಮಾಡಿಕೊಂಡಿದ್ದ. ಬಹಳ ದಿನಗಳಿಂದ ಸಂಬಳ ಕೊಡದೇ ಸತಾಯಿಸುತ್ತಿದ್ದ. ಹೀಗಾಗಿ ಮಾಲೀಕನನ್ನ ದೋಚಿ ಹಣ ವಸೂಲು ಮಾಡಲು ನಿರ್ಧರಿಸಿದ್ದು. ಇದಕ್ಕಾಗಿ ತಾನೇ ಸ್ಕೇಚ್ ರೂಪಿಸಿ ಮೂವರನ್ನು ರೆಡಿ ಮಾಡಿದ್ದ.

ಬ್ಯಾಂಕ್ ಅಕೌಂಟ್ ಡಿಟೈಲ್ಸ್ ಬೆನ್ನು ಹತ್ತಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದು, ಕೊಮ್ಮಘಟ್ಟ ಬಳಿ ಅಡ್ಡಗಟ್ಟಿ ದೋಚಿದ್ದ ಬಂಧಿತರಿಂದ 41 ಸಾವಿರ ರೂ‌ ನಗದು, ಮೂರು ದ್ವಿಚಕ್ರವಾಹನ ವಶಪಡಿಸಿಕೊಳ್ಳಲಾಗಿದೆ. ಕೆಂಗೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.


Spread the love

About Laxminews 24x7

Check Also

ಸಿದ್ದರಾಮಯ್ಯನವರೇ ಬಜೆಟ್ ಮಂಡಿಸುತ್ತಾರೆ ಎಂಬ ಭರವಸೆ ಇದೆ: ಸತೀಶ್ ಜಾರಕಿಹೊಳಿ

Spread the loveಯಾದಗಿರಿ : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಕುರಿತು ಯಾವುದೇ ಮಾಹಿತಿ ಇಲ್ಲ. ಸಂಕ್ರಾಂತಿ ಹಬ್ಬ ಮುಗಿದ ನಂತರ ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ