Breaking News

ಮುಖ ಕಾಣದ ಹಾಗೆ ಮಾಸ್ಕ್ ಹಾಕ್ಕೊಂಡು ಸರ್ಕಾರವನ್ನು ಟೀಕಿಸಿದ ಸಿ.ಟಿ. ರವಿ

Spread the love

ಬೆಂಗಳೂರು, ಏಪ್ರಿಲ್ 22: ಕೊರೋನಾ ನಿಯಂತ್ರಣ ಬಗ್ಗೆ ಸರ್ಕಾರ ಸೀರಿಯಸ್ ಆಗಿ ಆಲೋಚನೆ ಮಾಡಿಲ್ಲ ಎಂಬುದು ಎದ್ದು ಕಾಣುತ್ತದೆ. ಸಿನಿಮಾ , ಥಿಯೇಟರ್ ಬಂದ್ ಮಾಡುವ ಬಗ್ಗೆ ತಜ್ಞರು ವರದಿ ನೀಡಿದರೂ ಅದನ್ನು ಅನುಷ್ಠಾನ ಮಾಡಲಿಲ್ಲ ಸರ್ಕಾರ. ಯಾವುದೋ ಧಮ್ಕಿಗಳಿಗೆ ಮಣಿದು ಇದೀಗ ಅದಕ್ಕೆ ತಕ್ಕ ಬೆಲೆ ತೆತ್ತುವಂತಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಾಗಡಿ ರಸ್ತೆಯಲ್ಲಿರುವ ಸುಮ್ಮನಹಳ್ಳಿ ವಿದ್ಯುತ್ ಚಿತಾಗಾರಕ್ಕೆ ಭೇಟಿ ನೀಡಿದ ಸಿ.ಟಿ. ರವಿ, ಮುಖಕ್ಕೆ ಪೂರ್ಣ ಮಾಸ್ಕ್ ಧರಿಸಿದ್ದು ವಿಶೇಷವಾಗಿತ್ತು. ಕೇವಲ ಮೂಗಿಗೆ ಮಾತ್ರವಲ್ಲ, ಕಣ್ಣು ಬಿಟ್ಟರೆ ಮುಖವೇ ಕಾಣುತ್ತಿರಲಿಲ್ಲ. ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ಸಿ.ಟಿ. ರವಿ, ನಾನು ನನ್ನ ಕುತೂಹಲಕ್ಕೆ ಬಂದಿದ್ದೇನೆ. ಜನರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಪಕ್ಷದಿಂದ ಸ್ವಯಂ ಸೇವಕರನ್ನು ನಿಯೋಜಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇವೆ. ನೂರಕ್ಕೂ ಹೆಚ್ಚು ಸ್ವಯಂ ಸೇವಕರು ಕೊರೋನಾ ರೋಗಿಗಳ ಸೇವೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಬೆಂಗಳೂರಿನಲ್ಲಿ ಚಿತಾಗಾರಗಳಲ್ಲಿ ಕಾಯ್ ಒತ್ತಡ ಜಾಸ್ತಿಯಾಗಿದೆ. ಮಾಗಡಿ ರಸ್ತೆಯಲ್ಲಿ ದಿನಕ್ಕೆ 16 ಮೃತ ದೇಹ ವಿಲೇವಾರಿ ಮಾಡುತ್ತಿದ್ದವರು ಇದೀಗ 40 ಮೃತ ದೇಹ ದಹನ ಮಾಡುತ್ತಿದ್ದಾರೆ. ಇದರಿಂದ ಸ್ಮಶಾನದಲ್ಲಿ ಸಿಬ್ಬಂದಿ ಕೆಲಸ ಮಾಡಲು ಆಗುತ್ತಿಲ್ಲ. ಇದೊಂದು ದುರ್ದೈವದ ಸಂಗತಿ. ಈ ಬಗ್ಗೆ ಆರ್. ಅಶೋಕ್ ಅವರ ಬಳಿ ಮಾತನಾಡಿದ್ದೇನೆ. ಮಾಗಡಿ ರಸ್ತೆಯಲ್ಲಿ ತಾತ್ಕಾಲಿಕ ಚಿತಾಗಾರ ವ್ಯವಸ್ಥೆ ಮಾಡುವುದಾಗಿ ಹೇಳಿದ್ದಾರೆ. ಚಿಕಿತ್ಸೆ ಹಾಗೂ ಮೃತರಿಗೆ ಅಂತ್ಯ ಸಂಸ್ಕಾರದ ವಿಚಾರದಲ್ಲಿ ಪರ್ಯಾಯ ವ್ಯವಸ್ಥೆ ಮಾಡದಿರುವುದು ದುರ್ದೈವದ ಸಂಗತಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಎಲ್ಲೋ ಆಗೋದನ್ನು ಕೇಳುತ್ತಿದ್ದೆವು. ಈಗ ನಮ್ಮ ಮನೆ ಬಾಗಿಲಲ್ಲೇ ಆಗುತ್ತಿದೆ. ಕಳೆದ ವರ್ಷ ಕಾಯಿಲೆ ಹಿನ್ನೆಲೆ ಇದ್ದವರು ಕೊರೋನಾಗೆ ಬಲಿಯಾಗುತ್ತಿದ್ದರು. ಈ ಸಲ ಎಲ್ಲರೂ ಸಾವಿಗೀಡಾಗುತ್ತಿದ್ದಾರೆ. ಏಕಾ ಏಕಿ ಹದಿನೈದು ಪಟ್ಟು ಸೋಂಕಿತರ ಮತ್ತು ಸಾವಿನ ಪ್ರಮಾಣ ಜಾಸ್ತಿಯಾಗಿದೆ. ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಚಿವ ಸುಧಾಕರ್, ಅಶ್ವತ್ಥ್ ನಾರಾಯಣ ಹಾಗೂ ಆರ್. ಅಶೋಕ್ ಬಳಿ ಮಾತನಾಡಿದ್ದೇನೆ. ಜನರು ಸರ್ಕಾರದ ಮೇಲೆ ನಂಬಿಕೆ ಕಳೆದುಕೊಂಡಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಇನ್ನು ಆಕ್ಸಿಜನ್ ಮತ್ತು ವೆಂಟಿಲೇಟರ್ ಲಭ್ಯವಿಲ್ಲದ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಸಿ.ಟಿ. ರವಿ, ಕೊರೋನಾ ಸೋಂಕಿತರಿಗೆ ಸೂಕ್ತ ಹಾಸಿಗೆ, ಆಕ್ಸಿಜನ್ ಸಿಗದೇ ಇರುವುದು ಕಳವಳಕಾರಿ ಸಂಗತಿ. ಒಂದೇ ವಾರದಲ್ಲಿ ಹದಿನೈದು ಪಟ್ಟು ರೋಗಿಗಳ ಪ್ರಮಾಣದಲ್ಲಿ ಜಾಸ್ತಿಯಾಗಿದೆ. ಅದಕ್ಕೆ ಸರ್ಕಾರ ಪೂರ್ವ ಸಿದ್ದತೆ ಕಾಣಿಸಿಕೊಂಡಿಲ್ಲ ಎಂದು ಕಾಣುತ್ತದೆ. ಹತ್ತು ದಿನದ ಹಿಂದೆ ತಜ್ಞರು ನೀಡಿದ ವರದಿಯಂತೆ ಯಾರ ಮುಲುಲಾಜಿಗೂ ಒಳಗಾಗದೇ ಬಂದ್ ಮಾಡಬೇಕಿತ್ತು. ಸಿನಿಮಾ ಥಿಯೇಟರ್ ಮತ್ತು ಮಾಲ್ ಬಂದ್ ಮಾಡಲು ಮುಂದಾದ ವೇಳೆ ಸರ್ಕಾರ ಧಮ್ಕಿಗಳಿಗೆ, ಒತ್ತಡಕ್ಕೆ ಮಣಿಯತು. ವಿಪಕ್ಷಗಳು ಕೂಡ ಹಾದಿ ತಪ್ಪಿಸಿದವರು. ಆಕ್ಸಿಜನ್ ಕೊರತೆ ಮತ್ತು ವೆಂಟಿಲೇಟರ್ ಸಮಸ್ಯೆ ಕುರಿತು ಕೇಂದ್ರ ಸಚಿವರ ಜತೆ ಕೂಡ ಮಾತನಾಡಿದ್ದೇನೆ ಎಂದು ಸಿ.ಟಿ. ರವಿ ಸ್ಪಷ್ಟಪಡಿಸಿದರು.


Spread the love

About Laxminews 24x7

Check Also

ವಿದೇಶಿ ಪ್ರಜೆಗಳಿಂದ ಮಾದಕ ದ್ರವ್ಯಗಳನ್ನ ಜಪ್ತಿ

Spread the loveಬೆಂಗಳೂರು : ಮಿಂಚಿನ ಕಾರ್ಯಾಚರಣೆ ನಡೆಸಿರುವ ರಾಜಾನುಕುಂಟೆ ಪೊಲೀಸರು ಮೂವರು ವಿದೇಶಿ ಪ್ರಜೆಗಳನ್ನು ಬಂಧಿಸುವ ಮೂಲಕ ಡ್ರಗ್ಸ್ ಜಾಲವನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ