ದಾವಣಗೆರೆ : ಬೆಣ್ಣೆ ನಗರಿ ದಾವಣಗೆರೆಗೂ ಕೊರೊನಾ ಬಿಸಿ ತಟ್ಟಿದ್ದು, ಕೊರೊನಾ ಭೀತಿ ಹಿನ್ನೆಲೆ ನಾಳೆ ನಡೆಯಬೇಕಿದ್ದ ದಾವಣಗೆರೆ ವಿವಿಯ ‘ಬಿ.ಎಡ್’ ಪರೀಕ್ಷೆ ಮುಂದೂಡಿಕೆಯಾಗಿದೆ.
ಈ ಬಗ್ಗೆ ದಾವಣಗೆರೆ ವಿಶ್ವವಿದ್ಯಾಲಯ ಪರೀಕ್ಷಾಂಗ ವಿಭಾಗದ ಕುಲಸಚಿವೆ ಡಾ ಹೆಚ್ ಎಸ್ ಅನಿತಾ ಮಾಹಿತಿ ನೀಡಿದ್ದು, ಕೊರೊನಾ ಭೀತಿ ಹಾಗೂ ಸಾರಿಗೆ ಮುಷ್ಕರದ ಹಿನ್ನೆಲೆ ನಾಳೆ ನಡೆಯಬೇಕಿದ್ದ ದಾವಣಗೆರೆ ವಿವಿಯ ‘ಬಿ.ಎಡ್’ ಪರೀಕ್ಷೆ ಮುಂದೂಡಲಾಗಿದೆ. ಅಲ್ಲದೇ ಏಪ್ರಿಲ್ 20 ರಿಂದ ಆರಂಭವಾಗಲಿರುವ ಸ್ನಾತಕೋತ್ತರ ಪರೀಕ್ಷೆಗಳನ್ನು ಕೂಡ ಮುಂದೂಡಿಕೆ ಮಾಡಲಾಗಿದೆ. ಪರೀಕ್ಷೆ ನಡೆಯುವ ದಿನಾಂಕವನ್ನು ಕೋವಿಡ್ ಪರಿಸ್ಥಿತಿ ನೋಡಿಕೊಂಡು ನಿಗದಿ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Laxmi News 24×7