Home / Uncategorized / ಬೈ-ಎಲೆಕ್ಷನ್ ಕ್ಷೇತ್ರಗಳಲ್ಲಿ ಹೊಸದಾಗಿ ಸೃಷ್ಟಿಯಾಯ್ತಾ ರೂಂ ಪಾಲಿಟಿಕ್ಸ್..?

ಬೈ-ಎಲೆಕ್ಷನ್ ಕ್ಷೇತ್ರಗಳಲ್ಲಿ ಹೊಸದಾಗಿ ಸೃಷ್ಟಿಯಾಯ್ತಾ ರೂಂ ಪಾಲಿಟಿಕ್ಸ್..?

Spread the love

ಬೆಂಗಳೂರು: ಮಸ್ಕಿ, ಬಸವ ಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮೂರೂ ಕ್ಷೇತ್ರಗಳಲ್ಲಿ ಕಣ್ಣಿಗೆ ಕಾಣ್ತಿರೋದು ವೋಟ್ ಪಾಲಿಟಿಕ್ಸ್ ಜೊತೆಗೆ ರೂಂ ಪಾಲಿಟಿಕ್ಸ್ ಕೂಡ ನಡೆಯುತ್ತಿದೆ ಎನ್ನಲಾಗಿದೆ.

ಪ್ರಚಾರಕ್ಕೆ ಹೋಗಿರೋ ಮೂರು ಕ್ಷೇತ್ರಗಳಲ್ಲೂ ಕಾಂಗ್ರೆಸ್ ನಾಯಕರು ರೂಂ ಸಿಕ್ಕದೇ ಒದ್ದಾಡ್ತಿದ್ದಾರಂತೆ. ಈ ಹಿನ್ನೆಲೆ ಬೈ ಎಲೆಕ್ಷನ್ ಕ್ಷೇತ್ರಗಳಲ್ಲಿ ರೂಂ ರಾಜಕೀಯ ನಡೆದಿದೆ ಎನ್ನಲಾಗ್ತಿದೆ.

ಉಪಚುನಾವಣೆ ಘೋಷಣೆ ಆಗ್ತಿದ್ದಂತೆ ಅತ್ತ ಪ್ರಚಾರಕ್ಕೆ ಬರೋ ತಮ್ಮ ನಾಯಕರು ಹಾಗೂ ಕಾರ್ಯಕರ್ತರಿಗಾಗಿ ಕಮಲ ನಾಯಕರು ಕೊಠಡಿಗಳನ್ನ ಕಾಯ್ದಿರಿಸಿದ ಪರಿಣಾಮ ಈ ರೂಂ ರಾಜಕೀಯ ನಡೆದಿದೆಯಂತೆ.

ಬಹುತೇಕ ಎಲ್ಲ ಲಾಡ್ಜ್ ಗಳಲ್ಲಿ ಶೇ.90 ರಷ್ಟು ರೂಂಗಳನ್ನ ಕೈ ನಾಯಕರು ಬುಕ್ ಮಾಡಿದ್ದರಂತೆ. ಆದರೆ ಇತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮಾತ್ರ ಇದಕ್ಕೆ ವ್ಯತಿರಿಕ್ತವಾದ ಫರ್ಮಾನು ಹೊರಡಿಸಿದ್ದು ಉಪಚುನಾವಣೆ ನಡೆಯೋ ಕ್ಷೇತ್ರಗಳಲ್ಲಿ ಯಾರಿಗೂ ರೂಂ ರಿಸರ್ವ್ ಮಾಡಲ್ಲ, ಅಭ್ಯರ್ಥಿಗೂ ರೂಂ ಕೇಳಬಾರದು ಎಂದು ಮೌಖಿಕ ಆದೇಶ ಮಾಡಿದರಂತೆ.

ಪ್ರಚಾರಕ್ಕೆ ಹೋಗುವ ನಾಯಕರು, ಕಾರ್ಯಕರ್ತರು ತಮ್ಮ ತಮ್ಮ ಖರ್ಚಲ್ಲಿ ತಾವೇ ರೂಂ ಬುಕ್ ಮಾಡಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದರಂತೆ. ಆದರೆ ಈಗ ಪ್ರಚಾರಕ್ಕೆ ಹೋದರೆ ಎಲ್ಲಾ ರೂಂಗಳನ್ನೂ ಕಮಲ ನಾಯಕರೇ ಬುಕ್ ಮಾಡಿಕೊಂಡಿದ್ದಾರೆ ಎನ್ನಲಾಗ್ತಿದೆ. ಹೀಗಾಗಿ ವಾಸ್ತವ್ಯಕ್ಕೆ ಕೊಠಡಿಯೇ ಇಲ್ಲದೇ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಒದ್ದಾಡುತ್ತಿದ್ದಾರಂತೆ. ಕಾಂಗ್ರೆಸ್ ಪರ ಪ್ರಚಾರಕ್ಕೆ ಹೋಗಿದ್ದರೂ ಕೊಠಡಿಗಾಗಿ ಬಿಜೆಪಿ ನಾಯಕರಿಗೇ ಫೋನ್ ಮಾಡಬೇಕಾದ ಪರಿಸ್ಥಿತಿಗೆ ಕೈ ನಾಯಕರು ಸಿಲುಕಿಕೊಂಡಿದ್ದಾರೆ ಎನ್ನಲಾಗ್ತಿದೆ. ಕೆಪಿಸಿಸಿ ಅಧ್ಯಕ್ಷರ ಯಡವಟ್ಟಿನಿಂದಲೇ ಕೈ ಕಾರ್ಯಕರ್ತರು ಒದ್ದಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.


Spread the love

About Laxminews 24x7

Check Also

ಏನು ತಪ್ಪು ಮಾಡದಿದ್ದರೂ ಶಿಕ್ಷೆ: ಜಿಟಿಡಿ ಮುಂದೆ ರೇವಣ್ಣ ಕಣ್ಣೀರು

Spread the love ಬೆಂಗಳೂರು: ಮಹಿಳೆ ಅಪಹರಣ ಆರೋಪದಡಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಅವರು ಜೆಡಿಎಸ್‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ