Breaking News

ರಾಜ್ಯ ಸಾರಿಗೆ ನೌಕರರಿಗೆ ಗರಿಷ್ಠ ವೇತನ ಪರಿಷ್ಕರಣೆ ಕೊಡುಗೆ?

Spread the love

ಬೆಂಗಳೂರು: ಗರಿಷ್ಠ ಪ್ರಮಾಣದ ವೇತನ ಪರಿಷ್ಕರಣೆ ಪ್ರಸ್ತಾವವನ್ನು ಮುಷ್ಕರ ನಿರತ ಸಾರಿಗೆ ನೌಕರರ ಮುಂದಿರಿಸಿ ಮನವೊಲಿಸಲು ಸರಕಾರ ಚಿಂತನೆ ನಡೆಸಿದೆ. ಶೇ. 15ರಿಂದ ಶೇ. 18ರ ವರೆಗೂ ವೇತನ ಹೆಚ್ಚಳದ ಬಗ್ಗೆ ಲೆಕ್ಕಾಚಾರ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

6ನೇ ವೇತನ ಆಯೋಗದ ಶಿಫಾರಸು ಜಾರಿಗೊಳಿಸಿದರೆ ಆರ್ಥಿಕ ಹೊರೆ ಆಗಲಿದ್ದು, ಪರ್ಯಾಯವಾಗಿ ಈ ಕ್ರಮ ಅನುಸರಿಸುವ ಚಿಂತನೆ ಇದೆ. ಪ್ರಸ್ತುತ 4 ವರ್ಷಗಳಿಗೊಮ್ಮೆ ವೇತನ ಪರಿಷ್ಕರಣೆ ಮಾಡಲಾಗುತ್ತಿದೆ. 2020ರ ಜನವರಿಯಲ್ಲಿ ಆಗಬೇಕಿದ್ದ ವೇತನ ಪರಿಷ್ಕರಣೆ ಕೊರೊನಾ ಮತ್ತಿತರ ಕಾರಣಗಳಿಂದ ಆಗಿರಲಿಲ್ಲ. ಈಗ ಪೂರ್ವಾನ್ವಯ ಆಗುವಂತೆ ವೇತನ ಪರಿಷ್ಕರಿಸಿ, ಹಿಂಬಾಕಿಯನ್ನೂ ಪಾವತಿಸಿ ನೌಕರರ ಮನವೊಲಿಕೆ ಯತ್ನ ನಡೆಯಲಿದೆ.

6ನೇ ವೇತನ ಆಯೋಗ ಶಿಫಾರಸುಗಳ ಅನ್ವಯಕ್ಕೆ ಸಂಬಂಧಿಸಿ ಕೆಲವು ತಾಂತ್ರಿಕ ಸಮಸ್ಯೆಗಳಿವೆ. ವೇತನ ಪರಿಷ್ಕರಣೆ ಮಾಡಿದರೂ ಎಷ್ಟು ಮಾಡಬೇಕು, ಅದು ಪ್ರಸ್ತುತ ಸಂದರ್ಭದಲ್ಲಿ ಸಾಧ್ಯವೇ ಇತ್ಯಾದಿ ಹಲವು ಅಂಶಗಳನ್ನು ಗಮನದಲ್ಲಿ ಇರಿಸಿಕೊಂಡು ಸರಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ ಎಂದು ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಹೇಳಿದ್ದಾರೆ


Spread the love

About Laxminews 24x7

Check Also

ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ

Spread the love ಕ್ಯಾಂಟರ್-ಬೈಕ್ ಡಿಕ್ಕಿ: ಧಾರವಾಡ ಮೂಲದ ಯುವಕನ ದುರ್ಮರಣ ಜಾಂಬೋಟಿ-ಚೋರ್ಲಾ ರಸ್ತೆಯ ಹಬ್ಬನಹಟ್ಟಿ ಕ್ರಾಸ್ ಬಳಿ ಇರುವ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ