ಬೆಳಗಾವಿ: ಮನೆ ಕಿಟಕಿಯನ್ನೇ ಮುರಿದು ಒಳನುಗ್ಗಿದ ಕಳ್ಳರು ದಂಪತಿಗೆ ಚಾಕು ತೋರಿಸಿ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಬೆಳಗಾವಿಯ ಟಿಳಕವಾಡಿಯಲ್ಲಿ ನಡೆದಿದೆ.
ಇಲ್ಲಿನ ರಾಣಾಪ್ರತಾಪರಾವ್ ರಸ್ತೆಯಲ್ಲಿರುವ ಅಭಿಜಿತ್ ಸಾಮಂತ ಅವರಿಗೆ ಸೇರಿದ ಮನೆಯಲ್ಲಿ ರಾತ್ರಿ ಮೂರು ಗಂಟೆಗೆ ದರೋಡೆ ನಡೆದಿದೆ. ಮನೆ ಕಿಟಕಿ ಮುರಿದು ಒಳಬಂದ 7 ದುಷ್ಕರ್ಮಿಗಳು ಚಾಕು ತೋರಿಸಿ ಬೆದರಿಕೆಯೊಡ್ಡಿದ್ದಾರೆ. ನಾವು ನಿಮಗೆ ಏನೂ ಮಾಡಲ್ಲ ನಮಗೆ ಹಣ, ಒಡವೆ ಕೊಟ್ಟುಬಿಡಿ ಎಂದಿದ್ದಾರೆ. ಅಭಿಜಿತ್ ಪತ್ನಿ ಮಾಂಗಲ್ಯ, 30 ಗ್ರಾಂ ತೂಕದ ಚಿನ್ನಾಭರಣ ಪಡೆದು ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಉದ್ಯಮಬಾಗ ಪೊಲೀಸರು ಭೇಟಿ ನಿಡಿ ಪರಿಶೀಲಿಸಿದ್ದಾರೆ.
Laxmi News 24×7