ತುಮಕೂರು: ಪಂಚಮಸಾಲಿ ಹೋರಾಟಕ್ಕೆ ವಿಜಯೇಂದ್ರ ವಿರೋಧ ವ್ಯಕ್ತಪಡಿಸಿದ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಇದು ವಿಜಯೇಂದ್ರ ಕೃಪಾಪೋಷಿತ ನಾಟಕ ಎಂದು ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಭೆ ಮುಗಿದ ಬಳಿಕ ನಿರ್ಣಯ ಗೊತ್ತಾಗಲಿದೆ. ಮುತ್ತಿಗೆ ಹಾಕುತ್ತಾರೋ, ಬಿಡುತ್ತಾರೋ ಅದು ನಿರಾಣಿ ಕೈಯಲ್ಲೂ ಇಲ್ಲ, ಯಾರ ಕೈಯಲ್ಲೂ ಇಲ್ಲ. ನಿರಾಣಿ ಕೇಳಿ ಹೋರಾಟ ಮಾಡುತ್ತಿಲ್ಲ. ಮನವೊಲಿಸುತ್ತಾರೋ , ಧನವೊಲಿಸುತ್ತಾರೋ ಗೊತ್ತಿಲ್ಲ ಎಂದರು.
ಸಿಎಂ ಮನಸ್ಸು ನೋಯಿಸುವ ಕೆಲಸವಲ್ಲ. ಇಡೀ ಸಮುದಾಯದ ನೋವಿದು ಎಂದ ಅವರು, ಪಂಚಮಸಾಲಿ ಹೋರಾಟಕ್ಕೆ ವಿರೋಧ ವಿಚಾರಕ್ಕೆ ಸಂಬಂಧಿಸಿದಂತೆ ಅದು ವಿಜಯೇಂದ್ರ ಕೃಪಾಪೋಷಿತ ನಾಟಕ ಎಂದು ಹೇಳಿದರು.
Laxmi News 24×7