Breaking News
Home / Uncategorized / ನಿಯಮಗಳನ್ನೇ ಗಾಳಿಗೆ ತೂರಿ ಸಚಿವರನ್ನೇ ಹಿಂದಿಕ್ಕಿದ ಅಧಿಕಾರಿಗಳು..!

ನಿಯಮಗಳನ್ನೇ ಗಾಳಿಗೆ ತೂರಿ ಸಚಿವರನ್ನೇ ಹಿಂದಿಕ್ಕಿದ ಅಧಿಕಾರಿಗಳು..!

Spread the love

ಬೆಂಗಳೂರು, – ರಾಜಕೀಯ ಬೆಳವಣಿಗೆಗಳು ಆಡಳಿತ ವ್ಯವಸ್ಥೆಯ ಮೇಲೆ ಹೇಗೆ ಅಡ್ಡ ಪರಿಣಾಮ ಬೀರುತ್ತದೆ ಎಂಬುದಕ್ಕೆ ಇದೊಂದು ಸ್ಪಷ್ಟ ಉದಾಹರಣೆ. ಅರಣ್ಯ ಸಚಿವರ ಖಾತೆ ಬದಲಾವಣೆ ಯಾಗುತ್ತಿರುವ ಸಂದರ್ಭ ಬಳಸಿಕೊಂಡು ಇಲಾಖೆಯ ಹಿರಿಯ ಅಧಿಕಾರಿಗಳು ಹಿಂದಿನ ಸಚಿವರ ಆದೇಶವನ್ನೂ ದಿಕ್ಕರಿಸಿ ಸುಮಾರು 75 ಮಂದಿ ಅಧಿಕಾರಿಗಳಿಗೆ ಉನ್ನತ ಹುದ್ದೆಗೆ ಬಡ್ತಿ ನೀಡುವ ಪ್ರಕ್ರಿಯೆಯನ್ನು ಕೈಗೊಂಡಿದ್ದಾರೆ.ಅರಣ್ಯ ಇಲಾಖೆಯಲ್ಲಿ ಉಪವಲಯ ಅರಣ್ಯಾಧಿಕಾರಿಗಳ ಹುದ್ದೆಯಿಂದ ವಲಯ ಅರಣ್ಯ ಅಧಿಕಾರಿಗಳ ಹುದ್ದೆಗೆ 40 ಮಂದಿಗೆ ಬಡ್ತಿ ನೀಡಲು ಪಟ್ಟಿ ತಯಾರಿಸಲಾಗಿದೆ. ಇದಕ್ಕೂ ಮುನ್ನ ವಲಯ ಅಧಿಕಾರಿ ಹುದ್ದೆಯಿಂದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗೆ 35 ಮಂದಿಯನ್ನು ಬಡ್ತಿಗೊಳಿಸಲಾಗಿದೆ. ಈ ಸಂದರ್ಭದಲ್ಲಿ ನ್ಯಾಯಾಲಯ ಮತ್ತು ಸಚಿವರ ಆದೇಶಗಳನ್ನು ಗಾಳಿಗೆ ತೂರಿರುವುದಲ್ಲದೆ ನಿಯಮಾವಳಿಗಳನ್ನು ಉಲ್ಲಂಘಿಸಿರುವ ಆರೋಪ ಕೇಳಿ ಬಂದಿದೆ.ಹಿಂದಿನ ಅರಣ್ಯ ಸಚಿವ ಆನಂದ್‍ಸಿಂಗ್ ಅವರು ಡಿ.30ರಂದು ಸರ್ಕಾರದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯ ಅಪರ ಮುಖ್ಯಕಾರ್ಯದರ್ಶಿ ಅವರಿಗೆ ಪತ್ರ ಬರೆದು, ಅರಣ್ಯ ಇಲಾಖೆಯ ವಿವಿಧ ವೃಂದಗಳ ಜ್ಯೇಷ್ಠತಾ ಪಟ್ಟಿಯನ್ನು ಪರಿಷ್ಕರಿಸಲು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿ ಅಜಯ್‍ಮಿಶ್ರ ಅವರ ನೇತೃತ್ವದ ಸಮಿತಿ ನೀಡಿದ ಶಿಫಾರಸಿನಂತೆ ಕ್ರಮವಹಿಸುವುದನ್ನು ಖಚಿತ ಪಡಿಸಿಕೊಂಡು, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಹಾಗೂ ಕಾನೂನು ಇಲಾಖೆಯ ಅಭಿಪ್ರಾಯದೊಂದಿಗೆ ಜ್ಯೇಷ್ಠತಾ ಪಟ್ಟಿಯನ್ನು ಪ್ರಕಟಿಸಲು ಕಡತ ಸಂಖ್ಯೆ ಅಪಜೀ 197 ಆಪಸೇ 2020ರಲ್ಲಿ ಸೂಚಿಸಲಾಗಿದ್ದು, ಆದರೆ ಸೂಚನೆಯಂತೆ ಈವರೆಗೂ ವಿವಿಧ ವೃಂದ ಜ್ಯೇಷ್ಠತಾ ಪಟ್ಟಿಗೆ ಸಂಬಂಧಿಸಿದಂತೆ ಸಮಿತಿಯು ಪ್ರಸ್ತಾಪಿಸುವ ಅಂಶಗಳನ್ನು ಪಾಲಿಸುವ ಬಗ್ಗೆ ಪುನಃ ಸಮಿತಿಯ ಮುಂದೆ ಮಂಡಿಸಲು ಹಾಗೂ ಸಿಬ್ಬಂದಿ ಆಡಳಿತ ಸುಧಾರಣಾ ಇಲಾಖೆ ಮತ್ತು ಕಾನೂನು ಇಲಾಖೆಯ ಅಭಿಪ್ರಾಯವನ್ನು ಇದುವರೆಗೂ ಪಡೆಯದೇ ಇರುವುದು ವಿಷಾದನೀಯ ಎಂದಿದ್ದಾರೆ.


Spread the love

About Laxminews 24x7

Check Also

3ನೇ ಬಾರಿ ಬಿಜೆಪಿ ಅಧಿಕಾರಕ್ಕೆ ಬಂದ್ರೆ ಅಲ್ಪಸಂಖ್ಯಾತರನ್ನು ಮುಗಿಸುತ್ತಾರೆ: ಸಚಿವ ಜಮೀರ್ ಅಹ್ಮದ್‌

Spread the loveಇದು ದೇಶ ಬಚಾವ್ ಎಲೆಕ್ಷನ್. ಬಿಜೆಪಿ ಒಳಗೆ ಒಂದು ರೋಗ ಇದೆ, ಬಿಜೆಪಿ ಎಂದರೆ ಕ್ಯಾನ್ಸರ್ ಇದ್ದಂತೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ