ಬೆಂಗಳೂರು : ರಾಜ್ಯದ ಜನತೆಗೆ ಸಿಎಂ ಯಡಿಯೂರಪ್ಪ ಸಿಹಿಸುದ್ದಿ ನೀಡಿದ್ದು, ರಾಜ್ಯದ ಆಯ್ದ 16 ಲಕ್ಷ ಜನರಿಗೆ ಮೊದಲ ಹಂತದಲ್ಲಿ ಕೊರೊನಾ ಲಸಿಕೆ ಸಿಗಲಿದೆ ಎಂದು ಸಿಎಂ ಯಡಿಯೂರಪ್ಪ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನಡೆಸಿದ ಹಲವು ರಾಜ್ಯಗಳ ಸಿಎಂ ಸಭೆ ಬಳಿಕ ಯಡಿಯೂರಪ್ಪ ಸುದ್ದಿಗಾರರ ಜೊತೆ ಮಾತನಾಡಿದರು. ಲಸಿಕೆ ಫಲಾನುಭವಿಗಳ ಆಯ್ಕೆ ಈಗಾಗಲೇ ನಡೆದಿದೆ, ರಾಜ್ಯ ಲಸಿಕೆ ವಿತರಣೆಗೆ ಸಜ್ಜಾಗಿದೆ ಎಂದಿದ್ದಾರೆ. ದೇಶದಲ್ಲಿ ಮೊದಲ ಹಂತದಲ್ಲಿ ಒಟ್ಟು 3 ಕೋಟಿ ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.,
ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರು, ಪೊಲೀಸರಿಗೆ ಲಸಿಕೆ ನೀಡಲಾಗುತ್ತದೆ,. ಇದಕ್ಕೆ ಸಿದ್ದತೆಗಳು ಪೂರ್ಣಗೊಂಡಿದೆ ಎಂದಿದ್ದಾರೆ. ರಾಜ್ಯಾದ್ಯಂತ ಲಸಿಕೆ ವಿತರಣೆಗೆ ಸಂಪೂರ್ಣ ಸಿದ್ದತೆ ನಡೆದಿದ್ದು. 253 ಕ್ಷೇತ್ರದಲ್ಲಿ ವ್ಯಾಕ್ಸಿನೇಶನ್ ವಿತರಣಾ ಕೇಂದ್ರ ಸಿದ್ದಗೊಳಿಸಲಾಗಿದೆ, ಆರೋಗ್ಯ ಇಲಾಖೆ ಕೇಂದ್ರದ ಸೂಚನೆಯಂತೆ ಎಲ್ಲವನ್ನು ನೋಡಿಕೊಳ್ಳಲಿದೆ ಎಂದಿದ್ದಾ
Laxmi News 24×7