Breaking News
Home / Uncategorized / ಜೀವನ ಮೂರಾಬಟ್ಟೇರಿ, ಅಲ್ಲಿ ನಡೆಯೋದು ಎಲ್ಲಾ ಸುಳ್ಳು : ಇದು ‘ಸರಿಗಮಪ ಹನಮಂತಪ್ಪ’ನ ನೋವಿನ ಸ್ಟೋರಿ

ಜೀವನ ಮೂರಾಬಟ್ಟೇರಿ, ಅಲ್ಲಿ ನಡೆಯೋದು ಎಲ್ಲಾ ಸುಳ್ಳು : ಇದು ‘ಸರಿಗಮಪ ಹನಮಂತಪ್ಪ’ನ ನೋವಿನ ಸ್ಟೋರಿ

Spread the love

ಕೆಎನ್‌ಎನ್ ಡಿಜಿಟಲ್ ಡೆಸ್ಕ್ : ಆತ ಕನ್ನಡದ ರಿಯಾಲಿಟಿ ಶೋಗಳಲ್ಲಿ ಎಲ್ಲರ ಮೆಚ್ಚುಗೆ ಗಳಿಸಿದ ಗಾಯಕ. ಸರಿಗಮಪ ಸೀಸನ್ 15ರ ರನ್ನರಪ್. ಆದ್ರೇ ಜೀವನವೇ ಮೂರಾಬಟ್ಟೆರೀ, ಕನ್ನಡದ ಖಾಸಗಿ ವಾಹಿನಿ ಉತ್ತಮ ವೇದಿಕೆ ಕೊಡ್ತು. ಕರುನಾಡಿಗೆ ನನ್ನ ಪರಿಚಯ ಕೂಡ ಮಾಡಿಸಿತು. ಆದ್ರೇ ನೀಡಿದ ಭರವಸೇ, ವಾಸ್ತವವಾಗಿ ಏನೂ ಇಲ್ಲಾರಿ. ನಾನು ಮೊದಲಿನ ತರ ಝೀರೋ ಆಗಿಯೇ ಇದ್ದೇನೆ ಎಂಬುದಾಗಿ ಬೇಸರ ವ್ಯಕ್ತ ಪಡಿಸಿದ್ದಾರೆ. ಹೀಗೆ ಬೇಸರ ವ್ಯಕ್ತ ಪಡಿಸಿರೋದು ಬೇರಾರೂ ಅಲ್ಲ, ಸ್ವತಹ ಸರಿಗಮಪ ಸೀಜನ್-15ರ ರನ್ನರಪ್ ಹನಮಂತಪ್ಪ.

ಹೌದು.. ಹಾವೇರಿ ಜಿಲ್ಲೆಯಿಂದ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಕ್ಕೆ ತೆರಳಿದ್ದಂತ ವೇಳೆಯಲ್ಲಿ ಕುಮಟಾ ಬಸ್ ನಿಲ್ದಾಣದ ಎದುರಿನ ಬೇಕರಿಯೊಂದಕ್ಕೆ ಸ್ವೀಟ್ಸ್ ಖರೀದಿಗಾಗಿ ತೆರಳಿದಂತ ಸಿಂಗರ್ ಹನುಮಂತಪ್ಪ ಅವರನ್ನು ಅಂಡಿಯ ಮಾಲೀಕರು ಗುರ್ತಿಸಿ, ಹಾಡಿನ ಮೋಡಿಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.

ಈ ವೇಳೆ ಮುಕ್ತಕಂಠದಿಂದಲೇ ಅವರೊಂದಿಗೆ ಮಾತಿಗೆ ಇಳಿದಂತ ಸಿಂಗರ್ ಹನುಮಂತಪ್ಪ, ಕನ್ನಡದ ಖಾಸಗೀ ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೊಸ ಅನುಭವ. ರಾಜ್ಯದ ಜನ ನನ್ನ ಗುರುತಿಸಿದ್ದಾರೆ. ಕಲೆಗೆ ತಕ್ಕ ಪ್ರೋತ್ಸಾಹ ಕೂಡ ಸಿಕ್ಕಿತು. ಆದ್ರೇ ಬೆಲೆ ಮಾತ್ರ ಸಿಗಲಿಲ್ಲ. ರನ್ನರ್ ಆಪ್ ಆಗಿದ್ದ ನನಗೆ ಬೆಂಗಳೂರಿನಲ್ಲಿ ಫ್ಲಾಟ್ ಕೊಡಿಸುತ್ತೇವೆ ಅಂದ್ರು. ಆದ್ರೇ ಇದುವರೆಗೂ ನೊಂದಣಿ ಕೆಲಸವೇ ಆಗಿಲ್ಲ. ಅವೆಲ್ಲವೂ ಕ್ಯಾಮೆರಾ ಎದುರು ಹೇಳುವ ಆಶ್ವಾಸನೆ ಎಂದು ಅನಿಸುತ್ತದೆ ಎಂದಿದ್ದಾರಂತೆ.

ಇನ್ನೂ ಮುಂದುವರೆದು, ಪ್ರಚಾರಕ್ಕಾಗಿ ಏನೇನೋ ಹೇಳಿ ನಮ್ಮಂತ ಕುರಿಗಾಹಿಗಳ ಬದುಕಲ್ಲಿ ಆಸೆ ಹುಟ್ಟಿಸುತ್ತಾರೆ. ಆದರ ಬದಲು ಕಲೆ ಮೆಚ್ಚಿ ಕಳುಹಿಸಿದ್ರೆ, ನಾವು ಯಾವುದಕ್ಕೂ ಆಸೆ ಪಡದೆ ಮೊದಲಿನಂತೆ ಬದುಕುತ್ತೇವೆ ಎಂಬುದಾಗಿ ವಿಷಾದದ ಭಾವನೆಯಿಂದ ನುಡಿದಿದ್ದಾರೆ ಎನ್ನಲಾಗಿದೆ.

ಅದೇ ಬೇಕರಿಯ ಅಂಗಿಡಯವರಿಗೆ, ಮೇಡಂ ನನಗೆ ಹಾಡುವುದು ಇಷ್ಟ. ನಿಮ್ಮ ಊರು ಅಥವಾ ಜಿಲ್ಲೆಯಲ್ಲಿ ಯಾವುದೇ ಕಾರ್ಯಕ್ರಮಗಳಲ್ಲಿ ಹಾಡುವ ಅವಕಾಶ ಇದ್ದರೇ ಮಾಹಿತಿ ನೀಡಿ. ನಾನು ಬಂದು ಸಂಗೀತ ಕಾರ್ಯಕ್ರಮ ನೀಡಲು ಸಿದ್ದ. ಹಣದ ಮುಖ ನೋಡಿ ಬರುವ ಮನಸ್ಸಿಲ್ಲ. ಬದಲಾಗಿ ನನ್ನ ಕಲೆ ಜೀವಂತವಾಗಿರಲಿ ಎನ್ನುವ ಕಾರಣಕ್ಕೆ ಎಂದು ವಿಶ್ವಾಸದ ನೋಟ ಬೀರಿ ಹೇಳಿದ್ದಾರೆ ಎನ್ನಲಾಗಿದೆ. ಈ ಮೂಲಕ ಸರಿಗಮಪ ಸಿಂಗರ್ ಹನಮಂತಪ್ಪ ತನ್ನ ನೋವಿನ ಸ್ಟೋರಿಯನ್ನು ಹೇಳಿಕೊಂಡಿದ್ದಾರೆ.


Spread the love

About Laxminews 24x7

Check Also

ಸ್ವಂತ ಹಣದಲ್ಲಿ ಸಾರ್ವಜನಿಕ ರಸ್ತೆ ರಿಪೇರಿ ಮಾಡಿಸಿದ ವಿನೋದ್ ರಾಜ್

Spread the loveಬೆಂಗಳೂರು: ವಿನೋದ್ ರಾಜ್ ಅವರು ಸ್ವಂತ ಹಣದಲ್ಲಿ ರಸ್ತೆ ಗುಂಡಿ ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ಇತ್ತೀಚೆಗೆ ರೈತರ ಹಸುಗಳಿಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ