ಬೆಳಗಾವಿ : ಮಹಾನಗರ ಪಾಲಿಕೆ ಬೇರೆಬೇರೆ ಕೆಲಸಗಳನ್ನು ಸೇರಿಸಿ ಕೋಟಿ ಲೆಕ್ಕದಲ್ಲಿ ಟೆಂಡರ್ ಕರೆಯುತ್ತಿರುವುದರಂದ ಸಣ್ಣ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿರುವುದನ್ನು ವಿರೋಧಿಸಿ ನಾಳೆ ನಗರದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಕಾರ್ಪೋರೇಷನ್ ಗುತ್ತಿಗೆದಾರ ಸಂಘಟನೆ ಅಧ್ಯಕ್ಷರಾದ ರಾಜು ಪದ್ಮನ್ನವರ್ ತಿಳಿದಿದ್ದಾರೆ.
ಇಂದು ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ರಾಜು ಪದ್ಮನ್ನವರ್. ನಗರ ಪ್ರದೇಶದಲ್ಲಿ ಕೆಲಸ ಮಾಡುತ್ತಿರುವ ಸಣ್ಣ ಗುತ್ತಿಗೆದಾರರಿಗೆ ಸರ್ಕಾರ ತಂದಿರುವ ಹೊಸ ನಿಯಮದಿಂದ ಅನ್ಯಾಯವಾಗುತ್ತಿದೆ. ಸಣ್ಣ ಮೊತ್ತದ ಕೆಲಸದ ಟೆಂಡರ್ ಗಳನ್ನು ಒಟ್ಟುಗೂಡಿಸಿ ಒಂದು ಕೋಟಿ ಮೇಲ್ಪಟ್ಟು ಟೆಂಡರ್ ಕರೆತುತ್ತಿದ್ದಾರೆ. ಇದರಿಂದ ಕೆಲಸವಿಲ್ಲದೆ ಖಾಲಿ ಇರುವ ಸಣ್ಣ ಗುತ್ತಿಗೆದಾರರು ಸಂಕಷ್ಟಕ್ಕೆ ಸಿಲುಕಿದ್ದು ನೋವು ಅನುಭವಿಸುವಂತಾಗಿದೆ, ಕೂಡಲೆ ಸರ್ಕಾರ ಹಾಗೂ ಪಾಲಿಕೆ ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದರು.
ಮಹಾನಗರ ಪಾಲಿಕೆಯ ಈ ಹೊಸ ನಿಯಮ ವಿರೋಧಿಸಿ ನಾಳೆ ಪಾಲಿಕೆ ವ್ಯಾಪ್ತಿಯ ಸಣ್ಣ ಹಾಗೂ ಮಧ್ಯಮ ಗುತ್ತಿಗೆದಾರರು ಪ್ರತಿಭಟನೆ ಹಮ್ಮಿಕೊಂಳ್ಳಲಿದ್ದಾರೆ.