Breaking News

ನಟಿ ಸಂಜನಾ ಸೇರಿ ಉಳಿದ ಆರೋಪಿಗಳೂ 3 ದಿನ ಸಿಸಿಬಿ ಕಸ್ಟಡಿಗೆ

Spread the love

ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದಲ್ಲಿ ಸಿಸಿಬಿ ಪೊಲೀಸರಿಂದ ಬಂಧನವಾಗಿರುವ ನಟಿ ಸಂಜನಾ, ರಾಗಿಣಿ, ರವಿಶಂಕರ್, ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್ ಅವರನ್ನು ಮತ್ತೆ ಮೂರು ದಿನಗಳ ಕಾಲ ಸಿಸಿಬಿ ಪೊಲೀಸರ ಕಸ್ಟಡಿಗೆ ನ್ಯಾಯಾಲಯ ನೀಡಿದೆ. ಸೋಮವಾರದವರೆಗೂ ನಟಿ ರಾಗಿಣಿ, ಸಂಜನಾ ಸೇರಿದಂತೆ 6 ಮಂದಿ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಉಳಿಯಲ್ಲಿದ್ದಾರೆ.

ಇಂದು ನಟಿ ರಾಗಿಣಿ ಮತ್ತು ಸಂಜನಾ ಅವರನ್ನು ಸಿಸಿಬಿ ಪೊಲೀಸರು ವಿಡಿಯೋ ಕಾನ್ಫರೆನ್ಸ್ ಮೂಲಕ 1ನೇ ಎಸಿಎಂಎಂ ಕೋರ್ಟ್ ಜಡ್ಜ್ ಮುಂದೆ ಹಾಜರ್ ಪಡಿಸಿದ್ದರು. ಈ ವೇಳೆ ವಿಚಾರಣೆಯನ್ನು ಮುಂದುವರಿಸಲು ಮತ್ತೆ 6 ದಿನ ಪೊಲೀಸ್ ಕಸ್ಟಡಿಗೆ ನೀಡಲು ಸಿಸಿಬಿ ಪೊಲೀಸರು ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಲ್ಲದೇ ಪ್ರಕರಣದಲ್ಲಿ ಇದುವರೆಗೂ ಆಗಿರುವ ತನಿಖೆಯ ಮಾಹಿತಿಯನ್ನು ಕೋರ್ಟಿಗೆ ಸಲ್ಲಿಸಿದ್ದರುಆರೋಪಿ ರವಿ ಶಂಕರ್ ನೀಡಿರುವ ಮಾಹಿತಿ ಮೇರೆಗೆ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ.

ಅಲ್ಲದೇ ಆರೋಪಿ ನೀಡಿರುವ ಹೇಳಿಕೆಗಳಿಗೆ ನಟಿ ರಾಗಿಣಿ, ಸಂಜನಾ ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ. ವಿಚಾರಣೆಗೂ ಸಹಕಾರ ನೀಡುತ್ತಿಲ್ಲ. ಉದ್ದೇಶ ಪೂರ್ವಕವಾಗಿ ತನಿಖೆ ವಿಳಂಬ ಮಾಡುತ್ತಿದ್ದಾರೆ. ಅಲ್ಲದೇ ನ್ಯಾಯಾಂಗ ಬಂಧನಕ್ಕೆ ನೀಡಿದರೇ ಈಗಾಗಲೇ ನಡೆದಿರುವ ತನಿಖಾ ಅಂಶಗಳು ಲೀಕ್ ಹಾಗುವ ಸಾಧ್ಯತೆ ಇದೆ. ಈಗಾಗಲೇ ರಕ್ತ ಮಾದರಿ ಪರೀಕ್ಷೆಗೆ ನೀಡಲಾಗಿದ್ದು, ಆದರೆ ಆ ವರದಿ ಇನ್ನೂ ಬಂದಿಲ್ಲ ಎಂದು ಸಿಸಿಬಿ ಪೊಲೀಸರು ತಮ್ಮ ಮಾಹಿತಿಯನ್ನು ನೀಡಿದರು. ವಾದ ಪ್ರತಿವಾದ ಆಲಿಸಿ 45 ನಿಮಿಷ ಕಾಲ ತೆಗೆದುಕೊಂಡಿದ್ದ ಕೋರ್ಟ್ ಪೊಲೀಸರ ಮನವಿಯನ್ನು ಪುರಸ್ಕರಿಸಿ ಅಂತಿಮವಾಗಿ ಎಲ್ಲಾ 6 ಮಂದಿ ಆರೋಪಿಗಳನ್ನು 3 ದಿನಗಳವರೆಗೆ ಕಸ್ಟಡಿಗೆ ನೀಡಿದೆ. 

ನಟಿ ಸಂಜನಾ ಅವರನ್ನು 5 ದಿನ ಕಸ್ಟಡಿಗೆ ನೀಡಿದ್ದರೂ ನಾಳೆ 2ನೇ ಶನಿವಾರ ಮತ್ತು ಭಾನುವಾರ ಕೋರ್ಟಿಗೆ ರಜೆ ಇರುವುದರಿಂದ ಒಂದು ದಿನದ ಮುನ್ನವೇ ನ್ಯಾಯಾಧೀಶರ ಎದುರು ಹಾಜರು ಪಡಿಸಲಾಗಿತ್ತು. ನಟಿ ಸಂಜನಾ ಮೊಬೈಲ್ ಇನ್ನೂ ಸರಿಯಾಗಿ ರಿಟ್ರೀವ್ ಆಗಿಲ್ಲ. ಸಂಜನಾ ಆಸ್ಪತ್ರೆಯಲ್ಲಿ ಹೈಡ್ರಾಮಾ ಮಾಡಿದ್ರು. ರಕ್ತ ಮಾದರಿ ಪರೀಕ್ಷೆಗೆ ಜಗಳ ಮಾಡಿದ್ದಾರೆ. ವಿಚಾರಣೆ ಸಂದರ್ಭದಲ್ಲಿ ಅಸಹಕಾರ ತೋರಿ ಹೇಳಿದ್ದನೇ ಹೇಳುತ್ತಾರೆ. ನನಗೆ ಗೊತ್ತಿರೋದು ಹೇಳುತ್ತೀನಿ ಎಂದು ಹಾರಿಕೆ ಉತ್ತರ ನೀಡುತ್ತಾರೆ. ಈ ರೀತಿಯಲ್ಲಿ ಸಹಕಾರ ನೀಡಿಲ್ಲ ಎಂದರೇ ಯಾವುದೇ ತನಿಖೆ ಸಾಧ್ಯ ಇಲ್ಲ ಎಂದು ಹೇಳಿದ್ದೀರಿ. ಆದರೆ ನ್ಯಾಯಾಲಯದ ಆದೇಶಕ್ಕೂ ಗೌರವ ಕೊಡುತ್ತಿಲ್ಲ. ಮುಂಬೈನಲ್ಲಿ ಒಬ್ಬ ಆರೋಪಿಯ ಬಂಧನವಾಗಿದ್ದು, ಇತ್ತ ಡ್ರಗ್ಸ್ ಪ್ರಕರಣದಲ್ಲಿ ಇಡಿ ಈಗಷ್ಟೇ ಪ್ರಕರಣ ದಾಖಲಿಸಿಕೊಂಡಿದೆ. ತನಿಖೆ ಇನ್ನಷ್ಟು ಸಾಗಬೇಕಿದೆ. ಪ್ರಕರಣದ ತನಿಖೆ ಪಗ್ರತಿ ಹಂತದಲ್ಲಿರುವ ಕಾರಣದಿಂದ 5 ದಿನಗಳು ಕಸ್ಟಡಿಗೆ ನೀಡುವಂತೆ ಮನವಿ ಮಾಡಿತ್ತು.

 


Spread the love

About Laxminews 24x7

Check Also

ಏಕಾಏಕಿ ಫೀಸ್​​ ಹೆಚ್ಚಳ: ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು 

Spread the loveದೇವನಹಳ್ಳಿ, ಏಪ್ರಿಲ್​ 09: ಕರ್ನಾಟಕದಲ್ಲಿ ಈಗಾಗಲೇ ಅಗತ್ಯ ದಿನ ಬಳಕೆಯ ವಸ್ತುಗಳಾದ ಹಾಲು, ಗ್ಯಾಸ್​​, ಪೆಟ್ರೋಲ್​, ಡಿಸೇಲ್​ ಸೇರಿದಂತೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ