Breaking News

ವಾಯು ಮಾಲಿನ್ಯದಿಂದ ಕೊರೋನ ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಳ; ಸಮೀಕ್ಷೆ ವರದಿ

Spread the love

ಬೆಂಗಳೂರು,  : ರಾಜಧಾನಿಯಲ್ಲಿ ಕೊರೋನ ಸೋಂಕಿನಿಂದ ಮೃತರಾಗುತ್ತಿರುವವರ ಸಂಖ್ಯೆ ಹೆಚ್ಚಳಕ್ಕೆ ವಾಯುಮಾಲಿನ್ಯವು ರೋಗ ನಿರೋಧಕ ಶಕ್ತಿಯನ್ನು ಕುಗ್ಗಿಸುವುದೇ ಪ್ರಮುಖ ಕಾರಣ ಎನ್ನಲಾಗುತ್ತಿದೆ.

ಫಿಟ್ ಇಂಡಿಯಾದ 2020ರ ಸಮೀಕ್ಷೆ ಪ್ರಕಾರ ಶೇ.20.8 ಜನರು ತಮ್ಮಲ್ಲಿನ ಕಡಿಮೆ ರೋಗ ನಿರೋಧಕ ಶಕ್ತಿಯ ಕಾರಣಕ್ಕಾಗಿ ರಾಜಧಾನಿಯಲ್ಲಿ ಶೇ.22ರಷ್ಟ್ಟು ಜನರು ವರ್ಷವೊಂದಕ್ಕೆ 3 ಬಾರಿಯಂತೆ ವಿವಿಧ ರೋಗಗಳಿಗೆ ಒಳಗಾಗುತ್ತಿದ್ದಾರೆ. ನಗರವಾರು ಹೋಲಿಸಿದಾಗ ಹೆಚ್ಚು ವಾಯುಮಾಲಿನ್ಯಕ್ಕೆ ಒಳಗಾದ ನಗರಗಳ ಜನರು ಅತ್ಯಂತ ಕಡಿಮೆ ರೋಗನಿರೋಧಕ ಶಕ್ತಿಯನ್ನು ಹೊಂದಿರುವುದು ಕಂಡುಬಂದಿದೆ.

ಕೋಲ್ಕತ್ತಾವು ಅತಿಹೆಚ್ಚು ವಾಯು ಮಾಲಿನ್ಯ ಹೊಂದಿರುವ ನಗರವಾಗಿದ್ದು, ಅಲ್ಲಿನ ಶೇ.25ರಷ್ಟು ಜನರು ವರ್ಷವೊಂದಕ್ಕೆ ಮೂರು ಬಾರಿಯಂತೆ ರೋಗಗಳಿಗೆ ಒಳಗಾಗುತ್ತಿದ್ದು, ನಂತರ ಸ್ಥಾನದಲ್ಲಿ ಭುವನೇಶ್ವರ, ಪಾಟ್ನಾ, ಚಂಡೀಗಢ, ಲಕ್ನೋ, ಬೆಂಗಳೂರು, ದೆಹಲಿ, ಮುಂಬಯಿ ಮತ್ತು ಪುಣೆ ಇತ್ಯಾದಿ ನಗರಗಳಿವೆ.

ಇನ್ನು ವಾಯುಮಾಲಿನ್ಯದ ಬಗೆಗಿನ ಅಧ್ಯಯನವೊಂದು 2003ರಲ್ಲಿ ಸಾರ್ಸ್ (ಸೀವಿಯರ್ ಆಕ್ಯುಟ್ ರೆಸ್ಪಿರೇಟರಿ ಸಿಂಡ್ರೋಮ್) ರೋಗದಿಂದ ಸಾವಿನ ಸಂಖ್ಯೆಯು ತೀವ್ರಗೊಂಡಿದ್ದಾಗ ಕಡಿಮೆ ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳಲ್ಲಿ ಸರಾಸರಿ ಸಾವಿನ ಅಪಾಯದ ಪ್ರಮಾಣಕ್ಕಿಂತ ಮಧ್ಯಮ ಮಟ್ಟದ ವಾಯುಮಾಲಿನ್ಯ ಹೊಂದಿರುವ ಪ್ರದೇಶಗಳಲ್ಲಿ ಶೇ.84ರಷ್ಟು ಅಧಿಕವಿತ್ತು ಎಂಬುದು ಸಾಬಿತಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ(ಡಬ್ಲ್ಯೂಎಚ್) ಪ್ರಕಾರ 2003ರ ಸಾರ್ಸ್ ರೋಗದ ಸೋಂಕಿಗೂ ಈಗಿನ ಕೊರೋನ ಸೋಂಕಿಗೂ ಪರಸ್ಪರ ತಳೀಯವಾಗಿ ಸಾಮ್ಯತೆಯಿದೆ. ಕೊರೋನದಿಂದ ಚೇತರಿಸಲು ರೋಗನಿರೋಧಕ ಶಕ್ತಿಯೂ ನಿರ್ಣಾಯಕವಾಗಿದೆ.

ಮಾಲಿನ್ಯ ಹೊಂದಿರುವ ಗಾಳಿಗೆ ನಿರಂತರವಾಗಿ ಒಡ್ಡಿಕೊಳ್ಳುವುದರಿಂದ ಜೀನ್‍ಗಳ ಕಾರ್ಯಚಟುವಟಿಕೆಯ ಮೇಲೆ ಪರಿಣಾಮ ಬೀರುತ್ತದೆ ಇದರಿಂದ ಮಕ್ಕಳಲ್ಲಿ ಅಸ್ತಮಾದ ಸಾಧ್ಯತೆಯನ್ನು ಹೆಚ್ಚಿಸುತ್ತದೆ. ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ರೋಗ ನಿರೋಧಕ ವ್ಯವಸ್ಥೆಯ `n’ ಕೋಶಗಳು (ಟ್ರೆಗ್) ನಿಯಂತ್ರಿಸುತ್ತವೆಯಾದರೂ ಕಡಿಮೆ ಮಟ್ಟದ ಟ್ರೆಗ್ ಪ್ರತಿರಕ್ಷಣೆಯು ಅಸ್ತಮಾ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಹಾಗೂ ಶ್ವಾಸಕೋಶದ ಸಾಮಥ್ರ್ಯವನ್ನು ಕಡಿಮೆಗೊಳಿಸುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಟ್ರೆಗ್ ಕೋಶಗಳು ದೇಹದಲ್ಲಿನ ರೋಗನಿರೋಧಕ ವ್ಯವಸ್ಥೆಯನ್ನು ನಿಯಂತ್ರಿಸುತ್ತಿರುತ್ತದೆ. ಹಾಗಾಗಿ ಅಸ್ತಮಾ ಮತ್ತು ಅಲರ್ಜಿಯೊಂದಿಗೆ ಸೇರಿಕೊಂಡಿರುವ ರೋಗಕಾರಕವಲ್ಲದ ಕಣಗಳ ಬಗ್ಗೆ ಅವುಗಳು ಪ್ರತಿಕ್ರಿಯಿಸುವುದಿಲ್ಲ. ಆದರೆ, ಯಾವಾಗ ಟ್ರೆಗ್‍ನ ಕಾರ್ಯಚಟುವಟಿಕೆಗಳು ಕಡಿಮೆಯಾಗುವುದರಿಂದ ಅಸ್ತಮಾದ ಪ್ರಮುಖ ಲಕ್ಷಣಗಳಲ್ಲೊಂದಾಗಿರುವ ಉರಿಯೂತದ ಪ್ರಕ್ರಿಯೆಗಳನ್ನು ತಡೆಯುವಲ್ಲಿ ಜೀವಕೋಶಗಳು ವಿಫಲವಾಗುತ್ತದೆ ಎಂದು ಅಧ್ಯಯನ ವಿವರಿಸಿದೆ.

ಅಧ್ಯಯನದ ಪ್ರಕಾರ ಉಸಿರಾಟದ ವ್ಯವಸ್ಥೆಯು ಸೋಂಕು ಹಾಗೂ ಮಾಲಿನ್ಯವನ್ನು ತೆರುವುಗೊಳಿಸುತ್ತದೆ. ಆದರೆ ದೀರ್ಘಕಾಲಿಕವಾಗಿ ವಾಯುಮಾಲಿನ್ಯಕ್ಕೆ ಒಡ್ಡಿಕೊಳ್ಳುವುದರಿಂದ ಮಕ್ಕಳು ಮತ್ತು ವಯಸ್ಕರಲ್ಲಿ ಉಸಿರಾಟದ ತೊಂದರೆ ಅಧಿಕವಾಗುತ್ತದೆ. ನಂತರ ವೈದ್ಯಕೀಯ ಚಿಕಿತ್ಸೆಯ ಅಗತ್ಯವೂ ಹೆಚ್ಚುತ್ತಿದೆ. ಅಲ್ಲದೇ ಈ ರೋಗಗಳಿಂದ ಸಾವಿನ ಸಂಖ್ಯೆಯು ಅಧಿಕಗೊಳ್ಳುತ್ತಿದೆ ಎಂದು ಡಾ. ಸಿಲ್ವಿಯಾ ಕರಪಗಮ್ ಅಭಿಪ್ರಾಯಪಡುತ್ತಾರೆ.

ರೋಗ ನಿರೋಧಕ ವ್ಯವಸ್ಥೆಯು ದೇಹದಲ್ಲಿರುವ ರೋಗಗಳ ವಿರುದ್ಧ ಹೋರಾಡುತ್ತದೆ. ಆದರೆ ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಬೇಗನೆ ರೋಗಗಳಿಗೆ ತುತ್ತಾಗುವುದಲ್ಲದೇ ಮಾರಣಾಂತಿಕ ಕಾಯಿಲೆಗಳ ವಿರುದ್ಧ ಹೋರಾಡಲು ಸಾಧ್ಯವಾಗುವುದಿಲ್ಲ. ಮೆಟ್ರೋ ನಗರಗಳಲ್ಲೇ ಕೊರೋನ ರೋಗಿಗಳಲ್ಲಿ ಸಾವಿನ ಪ್ರಮಾಣವು ಅಧಿಕವಿದ್ದು, ವಾಯು ಮಾಲಿನ್ಯದ ಕಾರಣದಿಂದಾಗಿ ಜನರಲ್ಲಿ ರೋಗನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಹೀಗಾಗಿ ಸಾವಿನ ಪ್ರಮಾಣವೂ ಹೆಚ್ಚಾಗುವ ಅಪಾಯವಿದೆ.
-ಡಾ.ಯಲ್ಲಪ್ಪ ರೆಡ್ಡಿ, ಪರಿಸರವಾದಿ


Spread the love

About Laxminews 24x7

Check Also

ಕ್ಯಾನ್ಸರ್ ಪೀಡಿತನಿಂದ ವಿದ್ಯಾರ್ಥಿನಿ ಕೊಲೆ ಕೇಸ್​: ಪ್ರೀ ಪ್ಲ್ಯಾನ್ಡ್ ಮರ್ಡರ್ ರಹಸ್ಯ ಬಯಲು

Spread the loveಚಿತ್ರದುರ್ಗ, ಆಗಸ್ಟ್​ 21: ಕ್ಯಾನ್ಸರ್ ಮೂರನೇ ಹಂತದಲ್ಲಿರುವ ಚೇತನ್​​ನಿಂದಲೇ ವಿದ್ಯಾರ್ಥಿನಿ (student) ವರ್ಷಿತಾ(19) ಕೊಲೆ (kill) ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗ ಡಿವೈಎಸ್​ಪಿ ಪಿ.ದಿನಕರ್, ಗ್ರಾಮಾಂತರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ