Breaking News
Home / Uncategorized / ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ.

ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ.

Spread the love

ಬೆಳಗಾವಿ: ಭಾರಿ ಮಳೆಯ ಅಬ್ಬರಕ್ಕೆ ನಗರದ ಜನರು ತತ್ತರಿಸಿ ಹೋಗಿದ್ದಾರೆ. ಧಾರಾಕಾರ ಮಳೆಯಿಂದ, ಟಿಳಕವಾಡಿಯ ಕರಿಯಪ್ಪಾ ಕಾಲೋನಿ, ಯಳ್ಳೂರ ರಸ್ತೆ, ಆನಂದ ನಗರ, ವಡಗಾಂವ್​ನಲ್ಲಿ ಮಳೆ ನೀರು ನಿಲ್ಲುತ್ತಿದೆ. ಹೀಗಾಗಿ, ಏರಿಯಾದ ಅರ್ಧದಷ್ಟು ಮನೆಗಳು ಮುಳುಗಡೆಯಾಗುತ್ತಿದೆ.

ರಾತ್ರಿಯಿಡೀ ಸುರಿದ ಮಳೆಯಿಂದ ಮನೆಗಳಿಗೆ ನೀರು ನುಗುತ್ತಿದ್ದು ಮೂರು ಕಾಲೋನಿಗಳು ಭಾಗಶಃ ಆವೃತವಾಗಿವೆ. ಬೃಹತ್ ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡೆತಡೆ ಉಂಟಾಗಿದೆ.

ರಸ್ತೆಯಲ್ಲಿ ತುಂಬಿರೋ ನೀರಲ್ಲಿ ಮಹಿಳೆಯರು, ವೃದ್ಧರು ಓಡಾಡುವ ಸ್ಥಿತಿ ಎದುರಾಗಿದೆ. ವಿಪರ್ಯಾಸವೆಂದರೆ, ಕಳೆದ ವರ್ಷವೂ ಈ ಕಾಲೋನಿಗಳಲ್ಲಿ ಮಳೆಯಿಂದ ಅವಾಂತರ ಸೃಷ್ಟಿಯಾಗಿತ್ತು. ಆದರೆ, ಬೆಳಗಾವಿ ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆಯನ್ನ ಬಗೆಹರಿಸದೆ ಈ ಬಾರಿಯೂ ಆಪತ್ತು ಎದುರಾಗಿದೆ.

ಕಳೆದ ಬಾರಿಯ ಮಳೆಗೆ ನೀರು ನುಗ್ಗಿದ್ದರೂ ಅಧಿಕಾರಿಗಳು ಈ ಸಲ ಯಾವುದೇ ಮುನ್ನೆಚ್ಚರಿಕಾ ಕ್ರಮಗಳನ್ನ ಕೈಗೊಂಡಿಲ್ಲ. ಹಾಗಾಗಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ಹೊರಹಾಕಿದ್ದಾರೆ. ಕಳೆದ 24 ಗಂಟೆಗಳಲ್ಲಿ 73 ಮಿ.ಮೀ. ಮಳೆ ಸುರಿದಿದೆ.


Spread the love

About Laxminews 24x7

Check Also

ರೇವಣ್ಣ ನಡವಳಿಕೆ ಸರಿಯಿಲ್ಲ, ಇಂಗ್ಲೆಂಡ್ ನಲ್ಲೂ ತಗಲಾಕೊಂಡಿದ್ದರು : ಮಾಜಿ ಸಂಸದ ಶಿವರಾಮೇಗೌಡ ಗಂಭೀರ ಆರೋಪ

Spread the loveಮಂಡ್ಯ : ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ಎಚ್ ಡಿ ರೇವಣ್ಣ ಸಂಕಷ್ಟದಲ್ಲಿದ್ದು ಇದರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ