ಶಿವಮೊಗ್ಗ: ತಂದೆ – ತಾಯಿ ಪ್ರತ್ಯಕ್ಷ ದೇವರು. ಹೆತ್ತವರ ಮೇಲೆ ಮಕ್ಕಳಿಗೆ ಗೌರವದ ಜೊತೆಗೆ ಪ್ರೀತಿ ಬಾಂಧವ್ಯ ಬೆಸೆಯುವ ದೃಷ್ಟಿಯಿಂದ ಅನುಪಿನಕಟ್ಟೆಯ ರಾಮಕೃಷ್ಣ ವಸತಿ ಶಾಲೆಯಲ್ಲಿ ಮಕ್ಕಳಿಂದ ಹೆತ್ತವರಿಗೆ ಪಾದಪೂಜೆಯನ್ನು ಮಾಡಿಸುವ ಪದ್ಧತಿ ರೂಢಿಯಲ್ಲಿದೆ.
ತಮ್ಮಮಕ್ಕಳು ಉತ್ತಮ ವಿದ್ಯಾಭ್ಯಾಸ ಪಡೆಯಬೇಕೆಂದು ಪೋಷಕರು ಮಕ್ಕಳನ್ನು ವಸತಿ ಶಾಲೆಗೆ ದಾಖಲಿಸುತ್ತಾರೆ. ಇದರಿಂದ ಮಕ್ಕಳ ಹಾಗೂ ಪೋಷಕರ ನಡುವೆ ಬಿರುಕು ಬರಬಾರದು ಹಾಗೂ ಪೋಷಕರ ಮೇಲಿನ ಪ್ರೀತಿ ಹಾಗೆ ಮುಂದುವರೆಯಬೇಕೆಂದು ರಾಮಕೃಷ್ಣ ವಸತಿ ಶಾಲೆಯಲ್ಲಿ ಪ್ರತಿ ವರ್ಷ ಹೊಸ ವರ್ಷದ ದಿನ ಜನವರಿ 1 ರಂದು ವಿದ್ಯಾರ್ಥಿಗಳಿಂದ ಪೋಷಕರ ಪಾದಪೊಜೆ ನಡೆಸಲಾಗುತ್ತದೆ. ಈ ಪಾದಪೊಜೆಗೆ ತಂದೆ ತಾಯಿ ಕಡ್ಡಾಯವಾಗಿ ಭಾಗವಹಿಸುತ್ತಾರೆ.
Laxmi News 24×7