ಅಪಾರ್ಟ್ಮೆಂಟ್ ನಿವಾಸಿಗಳೇ ಹುಷಾರ್..! ಹೆಚ್ಚಾಯ್ತು ಶೂಸ್ ಕಳ್ಳರು
ಹುಬ್ಬಳ್ಳಿ ಅಪಾರ್ಟ್ಮೆಂಟ್ ನಿವಾಸಿಗಳೇ ಹುಷಾರ್ ಆಗಿರಿ. ಮನೆ ಹೊರಗೆ ಇಟ್ಟಿದ್ದ ಶೂಸ್‌ಗಳ್ಳರು ಬರುತ್ತಿದ್ದು. ಗೋಪನಕೊಪ್ಪ ರೋಟ್ಸನ್ ಪಾರ್ಕ್ ಅಪಾರ್ಟ್ಮೆಂಟ್‌ದಲ್ಲಿ ಹೊರಗೆ ಇಟ್ಟಿದ್ದ ಶೂಸ್‌ಗಳನ್ನು ಕಳ್ಳತನ ಮಾಡಿಕೊಂಡು ಹೋಗುತ್ತಿರುವ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕಳ್ಳರ ಗ್ಯಾಂಗ್‌ವೊಂದು ಅಪಾರ್ಟ್ಮೆಂಟ್‌ಗಳನ್ನೇ ಟಾರ್ಗೆಟ್ ಮಾಡಿ, ಹೆಚ್ಚಿನ ಬೆಲೆ ಬಾಳುವ ಶೂಸ್‌ಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಆ ದೃಶ್ಯಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದೇ ರೊಟ್ಸನ್ ಅಪಾರ್ಟ್ಮೆಂಟ್‌ದಲ್ಲಿ ಸುಮಾರು ದಿನಗಳಿಂದ ಶೂಸ್‌ಗಳು ಕಳ್ಳತನ ಆಗುತ್ತಿವೆ. ಅಷ್ಟೆ ಅಲ್ದೆ ಅಲ್ಲಿನ ಸುತ್ತಮುತ್ತ ಕೂಡ ಬೇರೆ ಬೇರೆ ಅಪಾರ್ಟ್ಮೆಂಟ್‌ಗಳಲ್ಲೂ ಶೂಸ್ ಕಳ್ಳತನವಾಗುತ್ತಿವೆ ಅಂತೆ.
ಅದಕ್ಕಾಗಿ ಇನ್ಮುಂದೆ ಅಪಾರ್ಟ್ಮೆಂಟ್‌ದಲ್ಲಿರೋ ನಿವಾಸಿಗಳು ಮನೆ ಹೊರಗೆ ವಸ್ತುಗಳನ್ನು ಇಡಬೇಕಾದ್ರೆ ಹುಷಾರ್ ಆಗಿರಿ. ಯಾಕೆಂದ್ರೆ ಕಳ್ಳರ ಗ್ಯಾಂಗ್ ಹುಟ್ಟಿದೆ.