Breaking News

ಆರ್.ಎಲ್.ಎಸ್. ಕಾಲೇಜಿನಲ್ಲಿ ಜಿಮ್’ಖಾನಾ ಚಟುವಟಿಕೆಗಳ ಉದ್ಘಾಟನೆ ಪರಿಶ್ರಮವೇ ಗೆಲುವಿನ ಮೂಲಮಂತ್ರ; ಅಭಿನವ್ ಜೈನ್

Spread the love

ಆರ್.ಎಲ್.ಎಸ್. ಕಾಲೇಜಿನಲ್ಲಿ ಜಿಮ್’ಖಾನಾ ಚಟುವಟಿಕೆಗಳ ಉದ್ಘಾಟನೆ
ಪರಿಶ್ರಮವೇ ಗೆಲುವಿನ ಮೂಲಮಂತ್ರ; ಅಭಿನವ್ ಜೈನ್
ಬೆಳಗಾವಿಯ ಕೆ.ಎಲ್.ಇ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಿಮ್’ಖಾನಾ ಮತ್ತು ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು.
ಗುರುವಾರದಂದು ಬೆಳಗಾವಿಯ ಬೆಳಗಾವಿಯ ಕೆ.ಎಲ್.ಇ ಆರ್.ಎಲ್.ಎಸ್ ಕಾಲೇಜಿನಲ್ಲಿ ಜಿಮ್’ಖಾನಾ ಮತ್ತು ಸಂಘದ ಚಟುವಟಿಕೆಗಳ ಉದ್ಘಾಟನಾ ಸಮಾರಂಭ ನಡೆಯಿತು. ಮುಖ್ಯ ಅತಿಥಿಗಳಾಗಿ ಪ್ರೋ. ಡಾ. ಎಂ.ಎಂ. ಪುರಾಣಿಕ ಮತ್ತು ಅಭಿನವ್ ಜೈನ್ ಉಪಸ್ಥಿತರಿದ್ಧರು. ಲಿಂಗೌಡಾ ದೇಸಾಯಿ ಅಧ್ಯಕ್ಷತೆಯನ್ನು ವಹಿಸಿದ್ದರು.
ಈ ವೇಳೆ ಮಾತನಾಡಿದ ಅಭಿನವ್ ಜೈನ್ ಅವರು, ಸ್ಪರ್ಧೆಗಳಲ್ಲಿ ಭಾಗವಹಿಸಿ ಕೇವಲ ಪದಕ ಟ್ರಾಫಿ ಗೆದ್ದರೇ ಸಾಲದು. ಉತ್ತಮ ಪ್ರದರ್ಶನ ನೀಡುವುದರೊಂದಿಗೆ ಸೋಲು ಗೆಲುವನ್ನು ಸಮನಾಗಿ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಸಾಧಕರೂ ಕೇವಲ 1 ಪ್ರತಿಶತ ಪ್ರೇರಣಾದಾಯಿಗಳಾಗಿರಬಹುದು ಆದರೇ, ಗೆಲ್ಲುವ 99 ಪ್ರತಿಶತ ಸಾಮರ್ಥ್ಯ ಯಶಸ್ಸಿಗೆ ಕಾರಣ ಎಂದರು.
ಇನ್ನು ಪ್ರಾಂಶುಪಾಲರಾದ ಜ್ಯೋತಿ ಕಾವಳೇಕರ ಅವರು ಸತತವಾಗಿ ಪರಿಶ್ರಮ ಪಟ್ಟಾಗ ಮಾತ್ರ, ಯಶಸ್ಸು ದೊರೆಯುತ್ತದೆ. ಇದೇ ವೇಳೆ ಆದರ್ಶ ವಿದ್ಯಾರ್ಥಿ – ವಿದ್ಯಾರ್ಥಿನಿ ಪುರಸ್ಕಾರಗಳನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ಡಾ. ಜೆ.ಎಸ್. ಕಾವಳೇಕರ, ಎಚ್.ಎನ್. ಬನ್ನೂರ್, ಅಲ್ಫಾಜ್ ಬಾಗವಾನ್, ಪೂಜಾ ಮೆಳವಂಕಿ, ಎಸ್.ಎಂ. ಬುಲಬುಲಿ, ನೇಹಾ ಪಾಟೀಲ್, ಎಂ.ವ್ಹಿ. ಗೌಡರ, ಸೋನಾಲಿ ಖಡಂಗಾ ಸೇರಿದಂತೆ ಇನ್ನುಳಿದವರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

Spread the love

About Laxminews 24x7

Check Also

ಎಸ್​ಸಿ, ಎಸ್​ಟಿಗೆ ಮಾತ್ರ ಮೀಸಲಿಟ್ಟ ಹಣ ಗ್ಯಾರಂಟಿಗಳಿಗೆ: ಮತ್ತೆ ವಿವಾದ ಮೈಮೇಲೆ ಎಳೆದುಕೊಳ್ಳಲು ಮುಂದಾದ ಸರ್ಕಾರ

Spread the loveಬೆಂಗಳೂರು, ಜುಲೈ 28: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ (SC ST) ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನದಿಂದ ಉಚಿತ ಗ್ಯಾರಂಟಿ ಯೋಜನೆಗಳಿಗೆ (Guarantee …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ