Breaking News

ಅಮೇರಿಕಾದಲ್ಲಿ ಡಬಲ್ ಡಿಗ್ರಿ ಪಡೆದು ಅಜ್ಜನ ಕನಸು ನನಸಾಗಿಸಿದ ಮೊಮ್ಮಗ

Spread the love

ಅಮೇರಿಕಾದಲ್ಲಿ ಡಬಲ್ ಡಿಗ್ರಿ ಪಡೆದು ಅಜ್ಜನ ಕನಸು ನನಸಾಗಿಸಿದ ಮೊಮ್ಮಗ
ಮಗನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಡಾ.ಅಂಜಲಿ ಮತ್ತು ಹೇಮಂತ್ ನಿಂಬಾಳ್ಕರ್
ಬೆಳಗಾವಿ ಖಾನಾಪೂರದ ಮಾಜಿ ಶಾಸಕಿ ಡಾ.ಅಂಜಲಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಅವರ ಸುಪುತ್ರ ಮಲ್ಹಾರ್ ಹೇಮಂತ್ ನಿಂಬಾಳ್ಕರ್ ಅರ್ಥಶಾಸ್ತ್ರದಲ್ಲಿ ಬ್ಯಾಚುಲರ್ ಆಫ್ ಆರ್ಟ್ಸ್ & ಸ್ಟ್ಯಾಟಿಸ್ಟಿಕ್ಸ್‌ನಲ್ಲಿ ಬ್ಯಾಚುಲರ್ ಆಫ್ ಸೈನ್ಸ್’ನಲ್ಲಿ ಡಬಲ್ ಪದವಿ ಪಡೆದುಕೊಂಡಿದ್ದಾರೆ. ಕ್ಯಾಲಿಫೋರ್ನಿಯಾದ ಸ್ಯಾಕ್ರಮೆಂಟೋದಲ್ಲಿರುವ ಗೋಲ್ಡನ್ 1 ಸೆಂಟರ್‌ನಲ್ಲಿ ಈ ಪದವಿ ಪ್ರದಾನ ಕಾರ್ಯಕ್ರಮ ನಡೆಯಿತು.
ಈ ವೇಳೆ ಮಲ್ಹಾರ್ ನಿಂಬಾಳ್ಕರ್ ಭಾರತೀಯ ಸಾಂಪ್ರದಾಯವನ್ನು ಬಿಂಬಿಸುವ ಕುರ್ತಾ ಮತ್ತು ಧೋತಿ ಉಡುಗೆಯನ್ನು ತೊಟ್ಟು ಕುಲಪತಿವರನ್ನು ನಮಸ್ತೆ ಎಂದು ಸ್ವಾಗತಿಸಿದ್ದು, ಭಾರತೀಯ ಸಂಸ್ಕೃತಿಯನ್ನು ಎತ್ತಿ ತೋರಿಸಿತು.
ಇನ್ನು ತಮ್ಮ ಸುಪುತ್ರನ ಸಾಧನೆಗೆ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ನಿಂಬಾಳ್ಕರ್ ಸಂತಸ ವ್ಯಕ್ತಪಡಿಸಿದ್ದು, ಈ ವೇಳೆ ಹೇಮಂತ್ ನಿಂಬಾಳ್ಕರ್ ಅವರು ಅಮೆರೀಕಾದಲ್ಲಿ ವೈದ್ಯಕೀಯ ಪದವಿ ಪಡೆಯಬೇಕೆಂಬ ತಮ್ಮ ಅಜ್ಜನ ಕನಸನ್ನು ಅವರ ಮೊಮ್ಮಗ ಮಲ್ಹಾರ್ ನನಸಾಗಿಸಿದ್ದಾನೆ ಎಂದಿದ್ದಾರೆ. ಅಲ್ಲದೇ ಮಾಜಿ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಕೂಡ ತಮ್ಮ ಸುಪುತ್ರನ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಡಾ.ಅಂಜಲಿ ಮತ್ತು ಹೇಮಂತ್ ನಿಂಬಾಳ್ಕರ್ ಅವರ ಸುಪುತ್ರಿ ಕೂಡ ಭಾಗಿಯಾಗಿದ್ದರು

Spread the love

About Laxminews 24x7

Check Also

ಸುರಂಗ ರಸ್ತೆ ಬದಲು ಮೆಟ್ರೋ ವಿಸ್ತರಣೆ, ಸಾರ್ವಜನಿಕ ಸಾರಿಗೆಗೆ ಆದ್ಯತೆಯಿಂದ ಮಾತ್ರ ಸಂಚಾರದಟ್ಟಣೆ ತಹಬದಿಗೆ: ಸಂಸದ ತೇಜಸ್ವಿ ಸೂರ್ಯ

Spread the loveಬೆಂಗಳೂರು: 18 ಕಿಲೋ ಮೀಟರ್​ ಉದ್ದದ ಸುರಂಗ ಮಾರ್ಗ ರಸ್ತೆ ನಿರ್ಮಾಣದಿಂದ ನಗರದಲ್ಲಿ ಸಂಚಾರ ದಟ್ಟಣೆ ನಿವಾರಣೆ ಹೇಗೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ