ಬಾಗಲಕೋಟೆ : ಕಬ್ಬಿನ ಬಿಲ್ ಗಾಗಿ ರೈತರ ಪ್ರತಿಭಟನೆ… ರೈತರೊಂದಿಗೆ ಸಭೆ ನಡೆಸಿದ ಡಿಸಿ ಜಾನಕಿ ಕೆ.ಎಂ.
ಕಬ್ಬಿನ ಬಿಲ್ ಪಾವತಿಗಾಗಿ ಮುಧೋಳ ಭಾಗದ ರೈತರು ಗದ್ದನಕೇರಿ ಕ್ರಾಸ್ ನಲ್ಲಿ ಇಂದು ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ರೈತರೊಂದಿಗೆ ಜಿಲ್ಲಾಧಿಕಾರಿ ಸಭೆ ನಡೆಸಿದರು.
ಜಿಲ್ಲಾಡಳಿತ ಭವನದಲ್ಲಿ ಸಭೆಗೆ ಅವಕಾಶ ನೀಡಬೇಕು ಎಂದು ರೈತರು ಪಟ್ಟು ಹಿಡಿದಿದ್ದರು. ರೈತರ ಒತ್ತಾಯಕ್ಕೆ ಮಣಿದು ಜಿಲ್ಲಾ ಆಡಳಿತ ಕಚೇರಿಯಲ್ಲಿ ಡಿಸಿ ಸಭೆಗೆ ಅವಕಾಶ ಕಲ್ಪಿಸಿದರು. ಈ ಸಂದರ್ಭದಲ್ಲಿ ರೈತರು ಸಭೆಗೂ ಮುನ್ನ ಬ್ಯಾರಿಕೇಡ್ ಹಾಕಿ ತಡೆಗಟ್ಟಿದಕ್ಕೆ ಆಕ್ರೋಶ ವ್ಯಕ್ತಪಡಿಸಿದರು ಜಿಲ್ಲಾಡಳಿತ ನಿಷ್ಕ್ರಿಯವಾಗಿದೆ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ಆರೋಪಿಸಿದರು. ನಾಲ್ಕೈದು ತಿಂಗಳಿಂದ ಕಬ್ಬಿನ ಬಿಲ್ ಬಾಕಿ ಉಳಿಸಿದ್ರೆ ರೈತರು ಕುಟುಂಬವನ್ನು ಹೇಗೆ ಸಾಗಿಸಬೇಕೆಂದು ರೈತ ಮುಖಂಡ ಈರಪ್ಪ ಹಂಚಿನಾಳ ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಾಲ್ಕು ತಿಂಗಳ ಬಾಕಿ ಬಿಲ್ಲನ್ನು ಬಡ್ಡಿ ಸಹಿತ ನೀಡಬೇಕೆಂದು ರೈತರು ಪಟ್ಟು ಹಿಡಿದರು. ಸಭೆಯಲ್ಲಿ ರೈತರೊಂದಿಗೆ ಜಿಲ್ಲಾಧಿಕಾರಿ ಜಾನಕಿ ಕೆಎಂ ನಾಲ್ಕು ತಿಂಗಳ ಬಾಕಿ ಬಿಲ್ ಕುರಿತು ಚರ್ಚೆ ನಡೆಸಿದರು. ಅವರು 13 ಕಾರ್ಖಾನೆ ಮಾಲೀಕರು ಮಾಹಿತಿ ನೀಡಿದ್ದಾರೆ ಇನ್ನೂ ಕೆಲವು ಕಾರ್ಖಾನೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ಬಿಲ್ ಕುರಿತು ಸಕ್ಕರೆ ಅಧಿಕಾರಿಗಳ ಜೊತೆ ಮಾಹಿತಿ ಕೇಳಿದ್ದೇನೆ ಎಂದು ಡಿಸಿ ತಿಳಿಸಿದರು. ಅದಕ್ಕೆ ರೈತರು ನಾಲ್ಕು ತಿಂಗಳ ಬಾಕಿ ಬಿಲ್ ಕುರಿತು ದಿನಾಂಕ ನಿಗದಿಪಡಿಸಬೇಕೆಂದು ಆಗ್ರಹಿಸಿದರು.