ದೇಶದ ಹೆಮ್ಮೆಯ ಪ್ರಧಾನ ಮಂತ್ರಿ ಸನ್ಮಾನ್ಯ ಶ್ರೀ ನರೇಂದ್ರ ಮೋದಿ ಅವರನ್ನು ನವದೆಹಲಿಯಲ್ಲಿ ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಅವರು ಕುಟುಂಬ ಸದಸ್ಯರೊಂದಿಗೆ ಭೇಟಿ ಮಾಡಿ, ತಮ್ಮ ಸುಪುತ್ರರಾದ ಸಂಜೀವ ಹಾಗೂ ಪ್ರಭು ಇವರುಗಳ ವಿವಾಹ ಸಮಾರಂಭದ ಆಮಂತ್ರಣ ಪತ್ರಿಕೆ ನೀಡಿ ಆಹ್ವಾನಿಸಿದರು.
ದೇಶದ ಬಹುದೊಡ್ಡ ಜವಾಬ್ದಾರಿಯನ್ನು ಹೊತ್ತು ಅತ್ಯಂತ ಕಾರ್ಯಬಾಹುಳ್ಳದ ನಡುವೆಯು ನಮ್ಮ ಕುಟುಂಬದ ಹಿರಿಯಣ್ಣನಂತೆ ನಮ್ಮ ಪರಿವಾರದ ಉಭಯಕುಶಲೋಪರಿ ವಿಚಾರಿಸಿ ಹಲವಾರು ಸಂಗತಿಗಳ ಕುರಿತು ಚರ್ಚಿಸಿದರು.
ತಂದೆ ತಾಯಿ ಆರೋಗ್ಯದ ಕುರಿತು ಕಾಳಜಿ ವಹಿಸುವಂತೆ ಸಲಹೆ ನೀಡಿದರು ಜೊತೆಗೆ ನನ್ನ ರೈತ ಪರವಾದ ನಿಲುವುಗಳ ಬಗ್ಗೆ ಪ್ರಶಂಸೆಯ ಮಾತುಗಳನ್ನಾಡಿದರು. ವಿವಾಹವಾಗಲಿರುವ ನಮ್ಮ ಸುಪುತ್ರರ ಉದ್ಯೋಗ, ವ್ಯವಸಾಯದ ಕುರಿತು ಕೂಡಾ ಚರ್ಚಿಸಿ ಶುಭ ಹಾರೈಸಿದರು.
ರಾಜಕೀಯ ಒತ್ತಡಗಳ ನಡುವೆಯು ಈ ಎಲ್ಲ ಸಂಗತಿಗಳಿಗೆ ಸಮಯ ಕೊಟ್ಟು ಆತ್ಮೀಯತೆ ತೋರಿಸಿದ್ದು ಅತ್ಯಂತ ಅಭಿಮಾನದ ಸಂಗತಿ ಇದೊಂದು ಅಭೂತಪೂರ್ವ ಕ್ಷಣವಾಗಿತ್ತು ಎಂದು ಸಂಸದ ಈರಣ್ಣ ಕಡಾಡಿ ಹರ್ಷ ವ್ಯಕ್ತಪಡಿಸಿದರು.