ಅಂಕೋಲಾದಲ್ಲಿ ಉದ್ಯಮಿ ಆರ್. ಎನ್. ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನಲ್ಲಿರುವ
ಭೂಗತ ಪಾತಕಿ ಬನ್ನಂಜೆ ರಾಜಾ ಸಹಚರ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ.
ಅಂಕೋಲಾದಲ್ಲಿ ಉದ್ಯಮಿ ಆರ್. ಎನ್. ನಾಯಕ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂಡಲಗಾ ಜೈಲಿನಲ್ಲಿ ಕಳೆದ 9 ವರ್ಷಗಳಿಂದ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದ ಭೂಗತ ಪಾತಕಿ ಬನ್ನಂಜೆ ರಾಜಾ ಸಹಚರ ಕೆ. ಎಂ. ಇಸ್ಮಾಯಿಲ್ ಇಂದು ಏಕಾಏಕಿ ಉಸಿರಾಟದ ಸಮಸ್ಯೆಯಿಂದ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಕೂಡಲೇ ಹಿಂಡಲಗಾ ಜೈಲಿನಿಂದ ಚಿಕಿತ್ಸೆಗಾಗಿ ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಮಾರ್ಗ ಮಧ್ಯದಲ್ಲಿ ಕೆಎಂ ಇಸ್ಮಾಯಿಲ್ ಉಸಿರು ನಿಲ್ಲಿಸಿದ್ದಾನೆ. ಎರಡು ಬಾರಿ ಹೃದಯಕ್ಕೆ ಸಂಬಂಧಿಸಿದಂತೆ ಚಿಕಿತ್ಸೆ ಪಡೆದಿದ್ದ.
ಸದ್ಯ ಕೆಎಂಇಸ್ಮಾಯಿಲ್ ಶವವನ್ನು ಬೀಮ್ಸ್ ಶವಗಾರದಲ್ಲಿ ಇರಿಸಲಾಗಿದೆ. ಕೇರಳದ ಕಾಸರಗೋಡಿನ ನಿವಾಸಿ ಕೆಎಂ ಇಸ್ಮಾಯಿಲ್ ಸಂಬಂಧಿಕರು ನಾಳೆ ಬೆಳಗಾವಿಗೆ ಆಗಮಿಸಲಿದ್ದು,
ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಶವವನ್ನು ಕುಟುಂಬಸ್ಥರಿಗೆ ಒಪ್ಪಿಸ ಲಾಗುತ್ತದೆ. ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.