Breaking News

ದೇವಾಲಯದ ಕೆರೆಯಲ್ಲಿ ಈಜಲು ಹೋದ ವಿದ್ಯಾರ್ಥಿಗಳಿಬ್ಬರು ಮೃ*ತ್ಯು

Spread the love

ಬೈಂದೂರು: ಇಲ್ಲಿನ ಪೇಟೆಯಲ್ಲಿನ ದೇವಸ್ಥಾನದ ಕೆರೆಯಲ್ಲಿ ಈಜಾಡಲೆಂದು ತೆರಳಿದ ವಿದ್ಯಾರ್ಥಿಗಳಿಬ್ಬರು ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಮಂಗಳವಾರ(ಸೆ24 )ಸಂಜೆ ನಡೆದಿದೆ.

ಮೃತ ಬಾಲಕರು ನಾಗೇಂದ್ರ (13) ಮತ್ತು ಮೊಹಮದ್ ಶಫಾನ್ (13) ಎನ್ನುವವರಾಗಿದ್ದಾರೆ. ನಾಗೇಂದ್ರ ಯೋಜನಾ ನಗರದ ನಿವಾಸಿ‌ ಕೃಷ್ಣ ಅವರ ಪುತ್ರ ನಾಗಿದ್ದು, ಮೊಹಮದ್ ಶಫಾನ್ ರೈಲ್ವೆ ನಿಲ್ದಾಣದ ಬಳಿಯ ಶಾನು ಶಾಲಿಯಾನ್ ಅವರ ಪುತ್ರ.

 

ಸರ್ಕಾರಿ ಪ್ರೌಢ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಗಳಿಬ್ಬರು ಪರೀಕ್ಷೆ ಬರೆದು ಮನೆಗೆ ಬಂದು ಊಟ ಮುಗಿಸಿ ಈಜಾಡಲು ತೆರಳಿದ್ದರು. ಮಳೆಸುರಿಯುತ್ತಿದ್ದ ಕಾರಣ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಸೈಕಲ್, ಬಟ್ಟೆ ಪಾದರಕ್ಷೆಗಳು ಕಂಡು ಬಂದ ಕಾರಣ ಇಬ್ಬರು ನೀರು ಪಾಲಾಗಿರುವುದು ತಿಳಿದು ಬಂದಿದ್ದು, ಹುಡುಕಾಟಕ್ಕಿಳಿಯಲಾಗಿದ್ದು, ಶವಗಳನ್ನು ಕಾರ್ಯಾಚರಣೆ ನಡೆಸಿ ಬುಧವಾರ ನಸುಕಿನ ವೇಳೆ ಮೇಲಕ್ಕೆತ್ತಲಾಗಿದೆ.

ದಿನನಿತ್ಯವೂ ಕೆರೆಗೆ ಹಲವು ಮಂದಿ ಈಜಲೆಂದು ಬರುತ್ತಿದ್ದರು. ಆದರೆ ಮಂಗಳವಾರ ಕಾರಣ ಯಾರೂ ಬಂದಿರಲಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ. ಮೃತ ಬಾಲಕರಿಬ್ಬರಿಗೂ ಸರಿಯಾಗಿ ಈಜು ಬರದಿದ್ದುದೇ ಅವಘಡಕ್ಕೆ ಕಾರಣ ಎನ್ನಲಾಗಿದೆ. ಮೃತರಿಬ್ಬರ ಮನೆಯವರ ಆಕ್ರಂದನ ಮುಗಿಲು ಮುಟ್ಟಿದೆ. ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Spread the love

About Laxminews 24x7

Check Also

ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿ ಸೆರೆ

Spread the loveಚಾಮರಾಜನಗರ: ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬರಗಿ ಸಮೀಪದ ಮುಕ್ತಿ ಕಾಲೊನಿಯ ಬಾಳೆ ತೋಟದಲ್ಲಿ ಕಾಣಿಸಿಕೊಂಡಿದ್ದ ಹುಲಿಯನ್ನು ಬಂಡೀಪುರ ಅರಣ್ಯ ಸಿಬ್ಬಂದಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ