Breaking News

ಏಕಕಾಲದ ಚುನಾವಣೆ: ದಿಟ್ಟ ಸುಧಾರಣ ಹೆಜ್ಜೆ

Spread the love

ತೀ ಹೆಚ್ಚು ಜನಸಂಖ್ಯೆಯ ಬೃಹತ್‌ ಪ್ರಜಾಪ್ರಭುತ್ವ ದೇಶ ವಾದ ಭಾರತದಲ್ಲಿ ಚುನಾವಣೆಗಳನ್ನು ನಡೆಸುವುದು ಸುಲಭದ ಮಾತಲ್ಲ. ಆದರೂ ಚುನಾವಣ ಆಯೋಗ ಎಲ್ಲ ಚುನಾವಣೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ ಎಂದು ಶ್ಲಾಘಿಸಲೇಬೇಕು. ಇಷ್ಟಾದರೂ ಕಾಲಕಾಲಕ್ಕೆ ಚುನಾವಣ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅನಿವಾರ್ಯ.

ಈಗ ಒಂದು ದೇಶ, ಒಂದು ಚುನಾವಣೆ ಎಂಬ ಪರಿಕಲ್ಪನೆಯ ಆಧಾರದಲ್ಲಿ ಏಕಕಾಲಕ್ಕೆ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆ ನಡೆಸುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಯಾವಾಗಲೂ ವಿಶಿಷ್ಟವಾಗಿ ಮತ್ತು ದೂರದೃಷ್ಟಿಯಿಂದ ಚಿಂತಿಸುವ ಪ್ರಧಾನಿ ನರೇಂದ್ರ ಮೋದಿ ಈ ಹೊಸ ಹೆಜ್ಜೆ ಇಟ್ಟಿರುವುದು ದೇಶದ ರಾಜಕೀಯ ಚರಿತ್ರೆಯಲ್ಲೇ ದೊಡ್ಡ ದಿಟ್ಟತನ.

ಮಾಜಿ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ನೇತೃತ್ವದ ಸಮಿತಿ ಒಂದು ದೇಶ ಒಂದು ಚುನಾವಣೆ ಕುರಿತು ಸಲ್ಲಿಸಿದ ವರದಿಯನ್ನು ಕೇಂದ್ರ ಸರಕಾರ ಅನುಮೋದಿಸಿದೆ. ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಪ್ರತೀ 5 ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ. ಏಕಕಾಲದಲ್ಲಿ ಚುನಾವಣೆ ನಡೆಯಬೇಕು ಎಂದರೆ ಈ ಐದು ವರ್ಷ ಕೂಡ ಸರಕಾರ ಸುಭದ್ರವಾಗಿ ಇರಬೇಕು. ಭಾರತಕ್ಕೆ ಸ್ವಾತಂತ್ರ್ಯ ದೊರೆತ ಬಳಿಕ 1951ರ ಡಿಸೆಂಬರ್‌ ಮತ್ತು 1952 ಫೆಬ್ರವರಿಯ ನಡುವೆ ಲೋಕಸಭೆ ಚುನಾವಣೆ ಮತ್ತು ರಾಜ್ಯಗಳ ವಿಧಾನಸಭೆ ಚುನಾವಣೆ ಒಂದಾಗಿ ನಡೆದಿತ್ತು. 1957, 1962 ಹಾಗೂ 1967ರಲ್ಲೂ ಏಕಕಾಲದಲ್ಲಿ ಚುನಾವಣೆ ನಡೆದಿತ್ತು. 1968-69ರ ನಂತರದ ವರ್ಷಗಳಲ್ಲಿ ಇದು ಅಸಾಧ್ಯವಾಯಿತು. ಅಂದರೆ ಅಲ್ಲಿಯವರೆಗೆ ಆಡಳಿತದಲ್ಲಿದ್ದ ಕಾಂಗ್ರೆಸ್‌ಗೆ ಏಕಕಾಲಕ್ಕೆ ಚುನಾವಣೆ ನಡೆಸುವ ಬಗ್ಗೆ ಯಾವ ತಕರಾರು ಇರಲಿಲ್ಲ.

ಇಲ್ಲಿ ವಿಪಕ್ಷಗಳು ಸರಕಾರದ ಎಲ್ಲ ನಿರ್ಧಾರಗಳನ್ನು ಕೇವಲ ವಿರೋಧ ಮಾಡುವ ದೃಷ್ಟಿಯಿಂದ ನೋಡುವುದು ಬಿಟ್ಟು ಇದರಿಂದ ದೇಶಕ್ಕೇನು ಲಾಭ ಎಂದು ಚಿಂತಿಸಬೇಕು. ಏಕಕಾಲಕ್ಕೆ ಚುನಾವಣೆಗಳು ನಡೆಯುವುದರಿಂದ ಆಗುವ ಆಡಳಿತ ಸುಧಾರಣೆಗಳು ಬಹಳಷ್ಟಿದೆ. ಆಡಳಿತ ಯಂತ್ರಕ್ಕೆ ವೇಗ, ದಕ್ಷತೆ, ಸಮಯದ ಉಳಿತಾಯ ಹಾಗೂ ವೆಚ್ಚಕ್ಕೆ ಕಡಿವಾಣ ಇದರಿಂದ ಸಾಧ್ಯ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಆಗಾಗ ಚುನಾವಣೆ ನಡೆಸುವುದರಿಂದ ಜನರು ಕಟ್ಟುವ ತೆರಿಗೆ ಹಣ ಪೋಲಾಗುವುದಿಲ್ಲವೇ ಎಂದು ಯೋಚಿಸಬೇಕು. ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಗ್ಯಾರಂಟಿಗಾಗಿ ಖಜಾನೆ ಖಾಲಿ ಮಾಡಿಕೊಂಡು ಕೂತಿರುವಾಗ ಏಕಕಾಲದ ಚುನಾವಣೆಯಂತಹ ಕ್ರಮಗಳು ಸರಕಾರದ ಬೊಕ್ಕಸಕ್ಕೆ ಹೊಸ ಉಸಿರು ನೀಡುತ್ತದೆ ಎಂದು ಅರ್ಥ ಮಾಡಿಕೊಳ್ಳಬೇಕು.

ಒಂದು ಚುನಾವಣೆ ನಡೆಯುವಾಗ ಅದಕ್ಕೆ ಶಿಕ್ಷಕರು ಸೇರಿದಂತೆ ಸರಕಾರಿ ನೌಕರರನ್ನು ನೇಮಿಸಲಾಗುತ್ತದೆ. ಭದ್ರತೆಗೆ ಪೊಲೀಸ್‌ ಮತ್ತು ಗೃಹ ಇಲಾಖೆಯಡಿಯ ಭದ್ರತಾ ಪಡೆಯನ್ನು ನಿಯೋಜಿಸಲಾಗುತ್ತದೆ. ಸಾರಿಗೆ, ಸಂಬಳ, ಆಹಾರ, ವಸತಿ ಹೀಗೆ ಒಂದೊಂದೇ ಖರ್ಚುಗಳು ಬೆಳೆಯುತ್ತಲೇ ಹೋಗುತ್ತವೆ. ಅಲ್ಲದೆ ನೌಕರರಿಗೂ ಕಾರ್ಯದ ಒತ್ತಡ ಹೆಚ್ಚುತ್ತದೆ. ಜತೆಗೆ ನೀತಿ ಸಂಹಿತೆಯಿಂದ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ, ಸಾರ್ವಜನಿಕ ಚಟುವಟಿಕೆಗಳಿಗೆ ಅಡ್ಡಿ, ಹೆಚ್ಚುವರಿ ಕೆಲಸ ಹೀಗೆ ಈ ಎಲ್ಲ ಸಮಸ್ಯೆಗಳನ್ನು ಏಕಕಾಲದ ಚುನಾವಣೆ ನಿವಾರಿಸುತ್ತದೆ.


Spread the love

About Laxminews 24x7

Check Also

ಸರ್ಕಾರ ಸಲ್ಲಿಸಿರುವ ಅರ್ಜಿ ವಿಲೇವಾರಿವರೆಗೂ ಸಿಎಟಿ ಆದೇಶ ಜಾರಿಗೆ ಒತ್ತಾಯಿಸದಂತೆ ವಿಕಾಸ್ ಕುಮಾರ್​ಗೆ ಸೂಚನೆ

Spread the loveಬೆಂಗಳೂರು: ಆರ್​​ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದ ಆರೋಪದಡಿ ಕೆಲವು ಅಧಿಕಾರಿಗಳನ್ನು ಅಮಾನತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ