Breaking News

ಬಳ್ಳಾರಿ: ತುಮಟಿ, ವಿಠಲಾಪುರ, ಮಲಪನಗುಡಿಯಲ್ಲಿ ಜಂಟಿ ಸಮೀಕ್ಷೆ

Spread the love

ಳ್ಳಾರಿ: ಬಳ್ಳಾರಿ ಜಿಲ್ಲೆಯಲ್ಲಿ ಹಾದು ಹೋಗಿರುವ ಕರ್ನಾಟಕ ಮತ್ತು ಆಂಧ್ರಪ್ರದೇಶ ಮಧ್ಯದ ಅಂತರರಾಜ್ಯ ಗಡಿಯಲ್ಲಿನ ಏಳು ಗಣಿ ಗುತ್ತಿಗೆಗಳ ಜಂಟಿ ಸಮೀಕ್ಷೆ ಕಾರ್ಯ ಬುಧವಾರ ಆರಂಭವಾಯಿತು.

ಮೊದಲ ದಿನದ ಸಮೀಕ್ಷೆ ಸಂಡೂರಿನ ತುಮಟಿ, ವಿಠಲಾಪುರ ಮತ್ತು ಆಂಧ್ರ ಪ್ರದೇಶದ ಮಲಪನಗುಡಿಯಲ್ಲಿ ಬರುವ ಮೆಹಬೂಬ್‌ ಟ್ರಾನ್ಸ್‌ಪೋರ್ಟ್‌ ಕಂಪನಿಯ (ಎಂಬಿಟಿ) ಗಣಿಯಿಂದ ಆರಂಭವಾಯಿತು.

ಬಳ್ಳಾರಿ: ತುಮಟಿ, ವಿಠಲಾಪುರ, ಮಲಪನಗುಡಿಯಲ್ಲಿ ಜಂಟಿ ಸಮೀಕ್ಷೆ

ಇದಕ್ಕೆ ಹೊಂದಿಕೊಂಡಂತಿರುವ ಹಿಂದ್‌ ಟ್ರೇಡರ್ಸ್‌ (ಎಚ್‌ಟಿ) ಮತ್ತು ಟಿ. ನಾರಾಯಣ ರೆಡ್ಡಿ (ಟಿಎನ್‌ಆರ್‌) ಗಣಿ ಗುತ್ತಿಗೆದಾರರ ಪರ ಪ್ರತಿನಿಧಿಗಳು ಮತ್ತು ಸಂಡೂರಿನ ತಹಶೀಲ್ದಾರ್‌ ಅನಿಲ್‌ ಕುಮಾರ್‌ ಸ್ಥಳದಲ್ಲಿ ಇದ್ದರು.

‘ಸಮೀಕ್ಷೆ ಕಾರ್ಯದಲ್ಲಿ ಗಣಿಗಳ ಗಡಿ ಬಿಂದು, ಜಿಪಿಎಸ್‌ ರೀಡಿಂಗ್‌ನ್ನು ಅಧಿಕಾರಿಗಳು ಪಡೆದಿದ್ದಾರೆ. ಅವರು ಅದನ್ನು ಕಂದಾಯ ಇಲಾಖೆ ನಕ್ಷೆಯೊಂದಿಗೆ ಹೋಲಿಕೆ ಮಾಡುವರು. ಅಂತಿಮ ವರದಿಯನ್ನು ಕೇಂದ್ರದ ಉನ್ನತಾಧಿಕಾರಿ ಸಮಿತಿ (ಸಿಇಸಿ)ಗೆ ಸಲ್ಲಿಸುವರು. ಅದರ ಆಧಾರದ ಮೇಲೆ ಗಣಿಗಳ ವರ್ಗೀಕರಣ ನಡೆಯಲಿದೆ’ ಎಂದು ಮೂಲಗಳು ತಿಳಿಸಿವೆ.

ಈ ಏಳು ಗಣಿ ಕಂಪನಿಗಳು 2009ರಲ್ಲೇ ಕಾರ್ಯಾಚರಣೆ ಸ್ಥಗಿತಗೊಳಿಸಿವೆ. ಅಂದಿನಿಂದ ಅಲ್ಲಿ ಯಾವುದೇ ಚಟುವಟಿಕೆ ನಡೆದಿಲ್ಲ. ಹೀಗಾಗಿ ರಸ್ತೆಗಳೆಲ್ಲವೂ ಮುಚ್ಚಿವೆ. ಗುಡ್ಡಗಾಡು ಪ್ರದೇಶದಲ್ಲಿರುವ ಈ ಗಣಿಗಳ ಬಳಿ ತೆರಳಲು ಸಮೀಕ್ಷೆ ತಂಡದ ಸದಸ್ಯರು ಪ್ರಯಾಸಪಟ್ಟರು. ಕಿಲೋಮೀಟರ್‌ ದೂರದಲ್ಲೇ ವಾಹನಗಳನ್ನು ನಿಲ್ಲಿಸಿ, ನಡೆದುಕೊಂಡು ಹೋದರು.

ಸುರತ್ಕಲ್‌ನ ಎನ್‌ಐಟಿಕೆ ಸಂಸ್ಥೆ ಸಮೀಕ್ಷೆ ನಡೆಸುತ್ತಿದೆ. ಎರಡೂ ರಾಜ್ಯಗಳ ಅರಣ್ಯ, ಕಂದಾಯ, ಭೂ ದಾಖಲೆ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಮತ್ತು ತಾಂತ್ರಿಕ ತಂಡಗಳ ಸದಸ್ಯರು ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.


Spread the love

About Laxminews 24x7

Check Also

ಒಂದೇ ದಿನ ನಾಲ್ಕು ಪ್ರಕರಣ ದಾಖಲು, 7 ಜನರ ಬಂಧನ; ₹12,840 ನಗದು ಜಪ್ತಿ ಮಾರ್ಕೆಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಟ್ಕಾ ದಾಳಿ

Spread the love ಒಂದೇ ದಿನ ನಾಲ್ಕು ಪ್ರಕರಣ ದಾಖಲು, 7 ಜನರ ಬಂಧನ; ₹12,840 ನಗದು ಜಪ್ತಿ ಮಾರ್ಕೆಟ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ